ತುಮಕೂರು
ಗದಗಿನ ಮಠದ ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಮಾರೋಪ ಭಾಷಣದೊಂದಿಗೆ ಸಿದ್ದಗಂಗಾ ಮಠದ ಮೂರು ದಿನಗಳ ವಚನ ಕಮ್ಮಟದ ಗುರುವಾರ ಮುಕ್ತಾಯವಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಬಸವ ತತ್ವ ಮತ್ತು ಆಚರಣೆಗಳಲ್ಲಿ ತರಬೇತಿ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಕಮ್ಮಟದಲ್ಲಿ ಸುಮಾರು 170 ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿ ದಿನವೂ ಇಷ್ಟ ಲಿಂಗ, ಯೋಗಾಸನ, ಷಟ್ಸ್ಥಲ ಧ್ವಜಾರೋಹಣಗಳ ಜೊತೆಗೆ ವಿಚಾರ ಘೋಷ್ಠಿಗಳು ನಡೆದವು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗುರುಮಹಾಂತ ಸ್ವಾಮಿಗಳು, ಶ್ರೀ ಮಹಾಲಿಂಗ ಸ್ವಾಮಿಗಳು, ಶ್ರೀ ಶ್ರೀಕಾಂತ ಸ್ವಾಮಿಗಳು ಮುಂತಾದವರು ವಿಚಾರ ಘೋಷ್ಠಿಯಲ್ಲಿ ಭಾಗವಹಿಸಿದ್ದರು.
ಭಾಲ್ಕಿ ಮಠದ ಡಾ ಶ್ರೀ ಬಸವಲಿಂಗಪಟ್ಟದೇವರು ಸಿದ್ದಗಂಗಾ ಮಠ ಮೂರು ದಿನಗಳ ವಚನ ಕಮ್ಮಟವನ್ನು ಮಂಗಳವಾರ ಉದ್ಘಾಟಿಸಿದ್ದರು.
ಈ ತರಹದ ವಚನ ಕಮ್ಮಟಗಳು ಹೆಚ್ಚು ನಡೆಯಬೇಕು, ಇದರಿಂದ ಸಮಾಜದಲ್ಲಿ ಬಸವ ತತ್ವದಾಚರಣೆ ಮಹತ್ವ ಹೆಚ್ಚಾಗುತ್ತೆ.
ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.
ಮೊದಲು ಈ ವಚನ ಕುಮ್ಮಟ ಏಪ೯ಡಿಸಿರುವ ಪೂಜ್ಯರಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಇಂತಹ ವಚನ ಕುಮ್ಮಟ ಬಸವ ತತ್ವದ ಎಲ್ಲಾ ಮಠಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ನಡೆಸಬೇಕು.ಅಂದರೆ ಲಿಂಗಾಯತರು ಆಚರಣೆ ಮಾಡುವ ವೈದಿಕರ ಆಚರಣೆಗಳನ್ನು ಕೊನೆಗೊಳಿಸಲು ಸಹಾಯವಾಗುತ್ತೆ.
.