ವಿಜಯಪುರ
ಅಕ್ಕನ ಅರಿವು, ಕಲ್ಬುರ್ಗಿ ಫೌಂಡೇಶನ್, ಅಕ್ಕನ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಸದಸ್ಯರು ಬುಧವಾರ
ವಚನ ದರ್ಶನ, ಶರಣರ ಶಕ್ತಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರಕಾರವನ್ನು ಆಗ್ರಹಿಸಿದರು.
ವಚನ ದರ್ಶನ ಪುಸ್ತಕವನ್ನು ಮುಟ್ಟುಗೋಲು ಹಾಕಲು ಮತ್ತು ಶರಣರ ಶಕ್ತಿ ಚಿತ್ರವನ್ನು ನಿಷೇಧಿಸಲು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಡಾ. ಶಶಿಕಾಂತ ಪಟ್ಟಣ ಮತ್ತು ಶಿವಲಿಂಗಪ್ಪ ಕಲ್ಬುರ್ಗಿ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಶರಣರ ಶಕ್ತಿ ಚಿತ್ರ ಶರಣರ ಚರಿತ್ರೆಗೆ ಮಸಿ ಬಳೆಯುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಇದರಿಂದ ಬಸವ ಭಕ್ತರಿಗೆ ತುಂಬಾ ನೋವಾಗಿದೆ. ವಚನ ದರ್ಶನದಲ್ಲಿ ಖೋಟಾ ವಚನ, ಪ್ರಕ್ಷಿಪ್ತ ವಚನ ಮತ್ತು ಸಂಸ್ಕೃತ ಉಕ್ತಿಗಳನ್ನು ಉಲ್ಲೇಖಿಸಿ ವಚನ ಚಳುವಳಿಗೆ ಆಗಮ ವೇದ ಶಾಸ್ತ್ರ ಉಪನಿಷದ ಆದರ್ಶಪ್ರಾಯವಾಗಿದ್ದವು ಎಂದು ನಿರೂಪಿಸುವ ಹುಸಿ ಪ್ರಯತ್ನ ನಡೆದಿದೆ ಎಂದು ಮನವಿ ಪಾತ್ರದಲ್ಲಿ ತಿಳಿಸಲಾಗಿದೆ.