ಚಿತ್ರದುರ್ಗ:
ತಾಲೂಕಿನ ಕಸವನಹಳ್ಳಿಯ ಪಾಪಣ್ಣಜ್ಜ–ಹನುಮಂತಜ್ಜ ಅವರ ಬಯಲು ಮಠದ ಅಂಗಳದಲ್ಲಿ ಈಚೆಗೆ ಹುಣ್ಣಿಮೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ‘ಅವೈದಿಕ ಗುರುಮಾತೆ’ಯರಾದ ಪ್ರಜಾಪತಿ ಗೌತಮಿ, ಗಂಗಾಬಿಕೆ-ನೀಲಾoಬಿಕೆ, ಸಾವಿತ್ರಿಬಾಯಿ-ಫಾತಿಮಾ ರಮಾಬಾಯಿ ಇವರುಗಳ ಜೀವನ-ಸಾಧನೆ-ಚಿಂತನೆ-ಹೋರಾಟ ಕುರಿತಾಗಿ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಮಾಜಿ ಶಾಸಕರಾದ ಎಸ್ ಕೆ ಬಸವರಾಜನ್ ಅವರು ಕಸವನಹಳ್ಳಿಯಂತ ಪುಟ್ಟ ಹಳ್ಳಿಯ ಈ ಬಯಲು ಮಠದ ಅಂಗಳದಲ್ಲಿ ರಾಜ್ಯದಲ್ಲೇ ಅತ್ಯಂತ ವಿನೂತನವಾಗಿ ಅವೈದಿಕ ಗುರುವರ್ಯರು ಹಾಗೂ ಗುರುಮಾತೆಯರ ಜೀವನ, ಸಾಧನೆ, ಚಿಂತನೆ, ಹೋರಾಟ ಕುರಿತಾಗಿ ಚಿಂತನ-ಮಂಥನ ಮಾಡುತ್ತಿರುವ ಕಾರ್ಯಕ್ರಮವನ್ನು ಪ್ರತಿ ತಿಂಗಳ ಹುಣ್ಣಿಮೆಯಂದು ಆಯೋಜಿಸಿ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಮನೋಭಾವನೆ ಮೂಡಿಸುವ ಉದ್ದೇಶ ಹೊಂದಿ, ಮೂವರು ಮಹಾಗುರುಗಳಾದ ಬುದ್ಧ- ಬಸವ- ಅಂಬೇಡ್ಕರ್ ಅವರುಗಳ ವಿಚಾರಗಳ ತಳಹದಿಯಲ್ಲಿ ಹೊಸ ಸಮಾಜವೊಂದನ್ನು ಕಟ್ಟುತ್ತಿದೆ. ಮಠದ ಈ ಬಗೆಯ ಸಮಾಜೋ-ಧಾರ್ಮಿಕ ಕ್ರಿಯೆಗಳಿಗೆ ನಾವೆಲ್ಲರೂ ಕೈಗೂಡಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಯಾದವ ಮಠದ ಯಾದವಾನಂದ ಮಹಾಸ್ವಾಮಿಗಳು, ಬಸವಣ್ಣ ಅವರ ಇಬ್ಬರು ಪತ್ನಿಯರಲ್ಲಿ ಒಬ್ಬರಾದ ಗಂಗಾಬಿಕೆ ಗಣಾಚಾರಕ್ಕೆ ಹೆಸರಾದ ದೀರೋದಾತ್ತ ಹೋರಾಟಗಾರ್ತಿಯಾಗಿದ್ದರು. ಅವರು ಶರಣರನ್ನು ಹಾಗೂ ಶರಣರ ವಚನಗಳನ್ನು ಸಂರಕ್ಷಣೆ ಮಾಡುವುದಕ್ಕಾಗಿ ವೀರ ಗಣಾಚಾರಿ ಮಡಿವಾಳ ಮಾಚಿಪ್ರಭು ಜೊತೆ ಸೇರಿ ಕತ್ತಿ ಹಿಡಿದು ಹೋರಾಡಿದರು.

ಇನ್ನೊಬ್ಬ ಪತ್ನಿ ನೀಲಾoಬಿಕೆ ಅಪ್ರತಿಮ ತತ್ವಜ್ಞಾನಿ ಆಗಿದ್ದರು. ಅನುಭವಮಂಟಪದ ಅದೆಷ್ಟೋ ವಿಟಜಂಗಮರನ್ನು ದಿಟಜಂಗಮರನ್ನಾಗಿ ಪರಿವರ್ತನೆ ಮಾಡಿದರು ಎಂದು ಹೇಳಿದರು.
ಹಿರಿಯೂರಿನ ಶಿಕ್ಷಕಿ ಆರ್.ಎ. ಸ್ವಪ್ನ ಅವರು, ಪ್ರಜಾಪತಿ ಗೌತಮಿ ಮತ್ತು ರಮಾಬಾಯಿ ಇವರುಗಳ ತ್ಯಾಗಜೀವನದ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಸಮ್ಮುಖವನ್ನು ತುಮಕೂರಿನ ಮೈದಾಳ ಶಿವಾಶ್ರಮದ ಲೇಪಾಕ್ಷಪ್ಪ ಸ್ವಾಮೀಜಿ ವಹಿಸಿ, ಕಸವನಹಳ್ಳಿಯ ಸುಮಾರು ಐವತ್ತು ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಅಂಜನಾದೇವಿ, ಡಿ.ಎಸ್. ಹಳ್ಳಿ ಲಿಂಗಬಸಪ್ಪ, ಜೆ.ಎನ್. ಕೋಟೆ ರಾಜಣ್ಣ, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಗೊಲ್ಲನಕಟ್ಟೆ ಕಾಟಪ್ಪ, ಗಿರಿಯಪ್ಪ, ಸೊಂಡೆಕೆರೆ ಬಸಣ್ಣ, ಕೆಳಗಳಹಟ್ಟಿ ಲಕ್ಷ್ಮಿಕಾಂತರೆಡ್ಡಿ ಮಾಸ್ಟರ್, ಓರಗಂಟರ ಮಾಳಿಗೆ ಮಂಜುನಾಥ್ ರೆಡ್ಡಿ, ಕಲ್ಲಹಳ್ಳಿ ಗೊಲ್ಲರಹಟ್ಟಿ ರುದ್ರಪ್ಪ ಮಾಸ್ಟರ್, ಪಲ್ಲವಗೆರೆ ನರಸಿಂಹಪ್ಪ ಮಾಸ್ಟರ್, ಮಾರಗಟ್ಟ ಸಿ. ರಾಜಪ್ಪ ಮಾಸ್ಟರ್, ಬಳ್ಳೆಕಟ್ಟೆ ಬಿ. ಹೆಚ್. ಶಿವಪ್ರಕಾಶ ಮಾಸ್ಟರ್, ಎಂ. ಡಿ. ಕೋಟೆ ಓಬಳೇಶ ಹಾಗೂ ಪಿ.ಆರ್. ಪುರದ ಭಾರತಿ, ಡಿ. ಎಸ್. ಹಳ್ಳಿ ಜಯಶೀಲ, ರಾಮಲಿಂಗಪ್ಪ, ತಿಪ್ಪೇಸ್ವಾಮಿ, ದಂಡಿನಕುರುಬರಟ್ಟಿ ವಿರೂಪಾಕ್ಷಪ್ಪ, ಎನ್ ರೂಪ, ಗಂಗಮ್ಮ, ಕಸವನಹಳ್ಳಿಯ ಕಡ್ಲೆ ಕರಿಯಪ್ಪ, ಚನ್ನಪ್ಪ, ಚಂದ್ರಪ್ಪ, ಚಂದ್ರಮ್ಮ, ಜಯಮ್ಮ, ಪ್ರೇಮಕ್ಕ, ಕಮಲಮ್ಮ, ಚನ್ನಮ್ಮ, ಕೇಶವಪ್ಪ, ಜಯಪ್ಪ, ರತ್ನಕ್ಕ, ರಾಧಮ್ಮ, ಲಕ್ಷ್ಮಕ್ಕ, ಭಾಗ್ಯಮ್ಮ, ಶಾಂತಮ್ಮ, ಸಾವಿತ್ರಮ್ಮ ಸುಂಕಲಮ್ಮ ದೇವಿ ಪೂಜಾರಿ ಚನ್ನಪ್ಪ, ಗಲ್ಲೆ ದುರುಗಮ್ಮ ದೇವಿ ಪೂಜಾರಿ ತಿಪ್ಪೇಸ್ವಾಮಿ ಹಾಗೂ ಧರ್ಮದರ್ಶಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು ಇನ್ನೂರಕ್ಕೂ ಹೆಚ್ಚು ಶ್ರೀಮಠದ ಭಕ್ತರು, ಗ್ರಾಮಸ್ಥರು ಹಾಗೂ ಮಕ್ಕಳು ನೆರೆದಿದ್ದರು.
