ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಎಂ.ಬಿ ಪಾಟೀಲ್ ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದರೆಂದು ವರದಿಯಾಗಿದೆ.
ಇದಕ್ಕೆ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸಾಣೇಹಳ್ಳಿ
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಹಾಗೂ ಇತರ ಸಚಿವರು ೨೦೨೬ ಜೂನ್ ೩ರಂದು ಪ್ರಮಾಣ ವಚನ ಸ್ವೀಕರಿಸುವಾಗ ಅವರಲ್ಲಿ ಅನೇಕರು ತಮಗೆ ಪ್ರಿಯವಾದ ಹೆಸರನ್ನು ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿಗಳು ತಮಗೆ ಪ್ರಿಯವಾದ ವೀರಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಅದರಂತೆ ಎಂ.ಬಿ. ಪಾಟೀಲರು ವಿಶ್ವಗುರು ಬಸವಣ್ಣ ಹಾಗೂ ಸಿದ್ದೇಶ್ವರ ಸ್ವಾಮಿಗಳ ಹೆಸರನ್ನು ತೆಗೆದುಕೊಂಡರು. ಬೇರೆಯವರು ಪ್ರಮಾಣ ವಚನ ಸ್ವೀಕರಿಸುವಾಗ ದೋಷ ಕಾಣದ ರಾಜ್ಯಪಾಲರು ಪಾಟೀಲರಲ್ಲಿ ಯಾಕೆ ದೋಷ ಹುಡುಕಿದರು?
ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಜನಕ ಬಸವಣ್ಣನವರು ಎಂದು ಪ್ರಧಾನಮಂತ್ರಿ ಮೋದಿಯವರೇ ಹೇಳಿರುವಾಗ ಇವರೇಕೆ ಆಕ್ಷೇಪ ಎತ್ತಿದರು? ಬಸವಣ್ಣ ಎಂದರೆ ಇವರಿಗೆ ಆಗುವುದಿಲ್ಲವೇ? ಲಿಂಗಾಯತ ಧರ್ಮದ ಮೂಲ ಗುರು ಬಸವಣ್ಣ. ಅವರಿಗೆ ಅವಮಾನ ಮಾಡುವುದು ಎಂದರೆ ಲಿಂಗಾಯತರಿಗೆ ಅವಮಾನ ಮಾಡಿದಂತೆ.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರವೇ ಘೋಷಣೆ ಮಾಡಿದ್ದು ರಾಜ್ಯಪಾಲರಿಗೆ ಗೊತ್ತಿಲ್ಲವೇ? ಪಾಟೀಲರಿಗೆ ಎಚ್ಚರಿಸುವ ಹಿನ್ನೆಲೆಯಲ್ಲಿರುವ ರಹಸ್ಯವಾದರೂ ಏನು? ಈ ಬಗ್ಗೆ ಸಾರ್ವಜನಿಕರು ಚಿಂತನ ಮಂಥನ ಮಾಡಬೇಕಾಗಿದೆ.
ಅವರ ನಿಲುವು ಸ್ವಾಗತಾರ್ಹವಾದುದಲ್ಲ. ಅವರಲ್ಲಿ ಪಕ್ಷಪಾತ ಧೋರಣೆ ಇದೆ ಎಂದು ಒಬ್ಬ ಸಾಮಾನ್ಯನಿಗೂ ಅನ್ನಿಸುವುದು. ರಾಜ್ಯಪಾಲರ ನಡೆ ಪ್ರಶ್ನಾರ್ಹ ಮತ್ತು ಖಂಡನಾರ್ಹ. ಅವರು ತಮ್ಮ ನಡೆಯ ಬಗ್ಗೆ ಸೂಕ್ತ ಸಮಜಾಯಿಸಿ ಕೊಡುತ್ತಾರೆಂದು ನಂಬಬಹುದೇ?

ಪ್ರತಿಕ್ರಿಯೆ ಮಾಡಿದರೆ ಉತ್ತರ ದೊರಕುವದು ಎಲ್ಲರೂ ವಿರೋಧ ಮಾಡಿ ಲಿಂಗಾಯತ ಧರ್ಮ ಉಳಿಸಿ 👏🏻ಶರಣು 👏🏻👏🏻
It is calculated insult and dishonour not only to Basavanna and Lingayat community. Lingayats should not forget this at the time of 2028 election. We should teach a lesson to the party that the governor represent. Has he done this on the instruction from Amit Shah.