ಚಿತ್ರದುರ್ಗ:
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಏಪ್ರಿಲ್ ೧೮ ರಿಂದ ೨೦ರವರೆಗೆ ಬಸವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ವಿವಿಧ ಸಮಾಜ, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.
ದಿನಾಂಕ ೧೮ರಂದು ನಗರದ ಐಎಂಎ ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ಗಂಟೆಗೆ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕುರಿತು ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ರಚಿಸಿರುವ ಜಯದೇವ ಸಿರಿ ನಾಟಕ ಕೃತಿ ಜನಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಮಾದಾರಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮೀಜಿ ಕೃತಿ ಜನಾರ್ಪಣೆಗೊಳಿಸುವರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ದಂಡಿನ ಕೃತಿ ಅವಲೋಕನ ಮಾಡಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ. ನಾಗರಾಜ್, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಉದ್ಯಮಿ ಅನಿತ್ಕುಮಾರ್ ಜಿ.ಎಸ್., ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಕೆ.ಎಂ. ವೀರೇಶ್, ಪಟೇಲ್ ಶಿವಕುಮಾರ್, ಎಸ್. ಷಣ್ಮುಖಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಡಾ|| ಪಾಲಾಕ್ಷಪ್ಪ, ವಿ. ವೀರೇಶ್, ಜಿ.ಡಿ. ಕೆಂಚವೀರಪ್ಪ, ಪ್ರೊ.ಟಿ.ಹೆಚ್. ಕೃಷ್ಣಮೂರ್ತಿ, ಚಳ್ಳಕೆರೆ ಯರ್ರಿಸ್ವಾಮಿ, ಉಮಾರಮೇಶ್, ತಿಪ್ಪೇಸ್ವಾಮಿ ಎಂ., ರಾಮಪ್ಪ (ರಾಮಜ್ಜ), ಪ್ರೊ. ಸಿ. ಬಸವರಾಜಪ್ಪ, ರಾಜಾನಾಯಕ್, ಶ್ರೀರಾಮ್ ಅವರುಗಳು ಮುಖ್ಯಅತಿಥಿಗಳಾಗಿ ಭಾಗವಹಿಸುವರು.
೧೯ ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ, ಬೆಳಗ್ಗೆ ೧೦.೦೦ ಗಂಟೆಗೆ ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ಸಂಜೆ ೫.೩೦ ಗಂಟೆಗೆ ಶರಣಸ್ಥಲದ ನೆಲೆಯಲ್ಲಿ ಬಸವಣ್ಣ, ವಚನಸಾಹಿತ್ಯ ಮತ್ತು ಭಾರತೀಯ ಸಂವಿಧಾನ ವಿಷಯ ಕುರಿತು ಚಿಂತನ ಗೋಷ್ಠಿ ನಡೆಯಲಿದ್ದು, ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಹೆಚ್. ಬಿಲ್ಲಪ್ಪ, ಉಪನ್ಯಾಸಕ ಡಾ. ಜಿ.ವಿ. ಮಂಜುನಾಥ್ ವಿಷಯಾವಲೋಕನ ಮಾಡಲಿದ್ದಾರೆ. ಶಿವಯೋಗಿ ಸಿ. ಕಳಸದ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯಅತಿಥಿಗಳಾಗಿ ಸಂಸದ ಗೋವಿಂದ ಎಂ. ಕಾರಜೋಳ, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಎಸ್., ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ. ತಾಜಪೀರ್, ಉದ್ಯಮಿ ಹನುಮಲಿ ಷಣ್ಮುಖಪ್ಪ, ಅ.ಭಾ.ವೀ.ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್. ತಿಪ್ಪೇಸ್ವಾಮಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಪ್ರಕಾಶ್, ವರ್ತಕ ಎಸ್.ವಿ. ನಾಗರಾಜಪ್ಪ, ಅ.ಭಾ.ವೀ.ಲಿಂ.ಮ. ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ, ಜಂಗಮ ಸಮಾಜ ಕಾರ್ಯದರ್ಶಿ ಎಸ್. ಷಡಾಕ್ಷರಯ್ಯ, ಪುಷ್ಪಾ ಬಾಬಣ್ಣ, ಇಂದಿರಾ ಜಯದೇವಮೂರ್ತಿ, ಕೆ.ಟಿ. ಗಂಗಾಧರ್, ಶೈಲಾ ಆರ್.ಬಾಬು, ಪಿ. ವೀರೇಂದ್ರಕುಮಾರ್ ಅವರುಗಳು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಜಿ.ವಿ. ರುದ್ರಪ್ಪ ವರ್ತಕರು ಸಿದ್ದಾಪುರ, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಕೆ. ಪಾಪಯ್ಯ, ನಗರಸಭೆ ಮಾಜಿ ಉಪಾಧ್ಯಕ್ಷ ನಾಯಿ ರುದ್ರಯ್ಯ, ಮಾಜಿ ಜಿ.ಪಂ. ಸದಸ್ಯ ಜೆ.ಎಚ್. ಕಾಂತರಾಜ್, ಬೆಸ್ಕಾಂ ಇಲಾಖೆ ಎಇಇ ಕೆ.ಪಿ. ಬಸವರಾಜ್, ಕುಮಾರೇಶ್ವರ ನಾಟಕ ಮಂಡಳಿಯ ಬಿ. ಕುಮಾರಸ್ವಾಮಿ, ದಮ್ಮ ಸಂಸ್ಥೆಯ ವಿಶ್ವಸಾಗರ್, ಈಶ್ವರಿ ವಿಶ್ವವಿದ್ಯಾಲಯದ ರಶ್ಮಿಅಕ್ಕ, ಮಡಿವಾಳ ಸಮಾಜದ ಎಸ್. ಏಕಾಂತಪ್ಪ, ಪೌರಕಾರ್ಮಿಕರಾದ ಶಿವಕುಮಾರ್, ಮಹಾಂತೇಶ ಇ., ಶಿಕ್ಷಕ ಕಸವನಹಳ್ಳಿ ಶಿವಣ್ಣ, ಶುಶ್ರೂಷಕ ಮಲ್ಲಣ್ಣ, ಸೇವಾದಳದ ಶಿವಣ್ಣ, ವಿಶ್ವಮಾನವ ಸಂಸ್ಥೆಯ ಜಲೀಲ್ಸಾಬ್, ನೀಲಕಂಠದೇವರು, ಕೃಷಿಕ ದಯಾನಂದ, ಕ್ರಿಯೆಟೀವ್ ಆರ್ಟ್ಸ್ನ ಮಹೇಶ್, ಖಗೋಳ ವಿಜ್ಞಾನಿ ಹೆಚ್.ಎಸ್.ಟಿ. ಸ್ವಾಮಿ, ಕವಯತ್ರಿ ಸಿ.ಬಿ. ಶೈಲಾಜಯಕುಮಾರ್, ಪತ್ರಿಕಾ ವಿತರಕ ತಿಪ್ಪೇಸ್ವಾಮಿ, ಶರಣಸಂಸ್ಕೃತಿ ಚಿಂತಕ ರಾಜೇಂದ್ರಪ್ರಸಾದ್, ಪತ್ರಕರ್ತ ಕೆ.ಪಿ. ಓಂಕಾರಮೂರ್ತಿ ಅವರುಗಳಿಗೆ ಬಸವಬಂಧು ಅಭಿದಾನವನ್ನು ನೀಡಿ ಸನ್ಮಾನಿಸಲಾಗುವುದು.
೨೦ರಂದು ಸೋಮವಾರ ಬೆಳಗ್ಗೆ ೧೧.೦೦ ಗಂಟೆಗೆ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ಬಸವಣ್ಣನವರ ಜಯಂತ್ಯೋತ್ಸವ ನಡೆಯಲಿದ್ದು, ಶಿವಯೋಗಿ ಸಿ. ಕಳಸದ ಅವರು ಅಧ್ಯಕ್ಷತೆ ವಹಿಸುವರು. ಡಾ. ಬಸವಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ಎಸ್., ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಆಡಳಿತ ಮಂಡಳಿ ಸದಸ್ಯರಾದ ಡಾ|| ಪಿ.ಎಸ್. ಶಂಕರ್, ಚಂದ್ರಶೇಖರ್ ಎಸ್.ಎನ್., ಛಲವಾದಿ ಸಮಾಜದ ಮುಖಂಡ ಹೆಚ್.ಸಿ. ನಿರಂಜನಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ. ಕೃಷ್ಣಮೂರ್ತಿ, ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ, ಭೋವಿ ಸಮಾಜದ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಅವರುಗಳು ಪಾಲ್ಗೊಳ್ಳಲಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
