ಕಲಬುರಗಿ :
ಬಸವಾಭಿಮಾನಿಗಳ ಬಳಗ, ಬಸವ ಸಮಿತಿ ಮತ್ತು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ೮೯೩ನೇ ಬಸವ ಜಯಂತ್ಯೋತ್ಸವದ ಅಂಗವಾಗಿ ವಚನ ಸಾಹಿತ್ಯಾಧಾರಿತ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಏಪ್ರಿಲ್ 17ರಂದು ಬೆಳಿಗ್ಗೆ 9 ಗಂಟೆಗೆ ಜಯನಗರದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ, ಬಸವಾಭಿಮಾನಿಗಳ ಬಳಗದ ಸಂಯೋಜಕ ಚಂದ್ರಶೇಖರ ಪಾಟೀಲ ಬಿರಾಳ ತಿಳಿಸಿದರು.

ಈ ರಸಪ್ರಶ್ನೆ ಕಾರ್ಯಕ್ರಮವು 2 ಹಂತದಲ್ಲಿ ನಡೆಯಲಿದ್ದು, ಮೊದಲನೇ ಹಂತದಲ್ಲಿ 50 ಅಂಕದ ಬಹು ಆಯ್ಕೆಯ ಲಿಖಿತ ಪರೀಕ್ಷೆಯನ್ನು Online ಮೂಲಕ ನಡೆಸಲಾಗುವುದು. ಇದನ್ನು ತಂಡದ ಇಬ್ಬರು ಸೇರಿ ಮೆಲು ಧ್ವನಿಯಲ್ಲಿ ಚರ್ಚಿಸಿ ತಮ್ಮದೇ ಒಂದೇ mobile ನಲ್ಲಿ ಲಿಂಕ್ ಮೂಲಕ Online ಪರೀಕ್ಷೆ ಬರೆಯತಕ್ಕದ್ದು. ಇದಕ್ಕಾಗಿ ಅಭ್ಯರ್ಥಿಗಳೇ ತಮ್ಮ ಸ್ವಂತ internet ಸಂಪರ್ಕ ಇರುವ ಒಂದು smart phone ತರುವುದು ಕಡ್ಡಾಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲನೇ ಹಂತದ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 10 ತಂಡಗಳನ್ನು ಆಯ್ಕೆ ಮಾಡಿಕೊಂಡು ಎರಡನೇ ಹಂತದಲ್ಲಿ ೯ ಸುತ್ತುಗಳ ಮೌಖಿಕ ರಸಪ್ರಶ್ನೆ ನಡೆಸಲಾಗುವುದು. ಬಸವಾದಿ ಶರಣರ ವೈಯಕ್ತಿಕ ಪರಿಚಯ ಹಾಗೂ ಜೀವನ ಸಂದೇಶ ಕುರಿತು ರಸಪ್ರಶ್ನೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಭಾಗವಹಿಸುವವರು ಹದಿನೆಂಟು ವರ್ಷದೊಳಗಿನವರಾಗಿರಬೇಕು. ಶಾಲೆ/ಸಂಸ್ಥೆಗಳಿಂದ ಭಾಗವಹಿಸುವವರು ಮುಖ್ಯಸ್ಥರಿಂದ ದೃಢೀಕರಣ ಪತ್ರ ತರಬೇಕು.
ಇತರರು ವಯಸ್ಸಿನ ರಜುವಾತು ಪಡೆಸುವ ದಾಖಲೆಯನ್ನು ತರಬೇಕು, ಭಾಗವಹಿಸುವವರು ಹದಿನೆಂಟು ವರ್ಷದೊಳಗಿನವರಾಗಿರಬೇಕು, ಶಾಲೆ-ಸಂಸ್ಥೆಗಳಿಂದ ಭಾಗವಹಿಸುವವರು ಮುಖ್ಯಸ್ಥರಿಂದ ದೃಢೀಕರಣ ಪತ್ರ ತರಬೇಕು, ಇತರರು ವಯಸ್ಸಿನ ರಜುವಾತು ಪಡೆಸುವ ದಾಖಲೆಯನ್ನು ತರಬೇಕು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಏಪ್ರಿಲ್ 16ರಂದು ಸಾಯಂಕಾಲ 5.30ರ ಒಳಗೆ ನೋಂದಣಿ ಮಾಡಿಸಬೇಕು. ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ದಿನ 17 ರಂದು ಬೆಳಗ್ಗೆ 8.30ಕ್ಕೆ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ಡಿ.ಎನ್. ಪಾಟೀಲ-೮೧೦೫೯೫೪೧೫೫, ಚಂದ್ರಶೇಖರ ಪಾಟೀಲ-೯೪೪೮೪೩೫೫೬೭, ನಾಗೇಂದ್ರ ನಾಗೂರ-೯೯೦೦೩೪೨೮೭೬, ಸಂತೋಷ ಹೂಗಾರ-೯೯೭೨೬೦೮೩೧೦ ಇವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಡಾ. ಶಿವರಂಜನ ಸತ್ಯಂಪೇಟೆ, ಡಾ. ಡಿ.ಎನ್. ಪಾಟೀಲ, ನಾಗಣ್ಣ ಶಾಬಾದಿ, ನಾಗರಾಜ ಪಾಟೀಲ ಹುಳಗೇರಿ, ಬಸವರಾಜ ಧೂಳಾಗುಂಡಿ ಸುದ್ದಿಗೋಷ್ಠಿಯಲ್ಲಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga
