ಬಸವ ಸಂಸ್ಕೃತಿ ಅಭಿಯಾನ ಯಾವ ಜಿಲ್ಲೆಯಲ್ಲಿ ಎಂದು: ಸಂಪೂರ್ಣ ಮಾರ್ಗಸೂಚಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಲಿಂಗಾಯತ ಮಠಾಧೀಶರ ಒಕ್ಕೂಟ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ನಾಲ್ಕು ಪುಟಗಳ ಕರಪತ್ರ ಬಿಡುಗಡೆ ಮಾಡಿದೆ.

ಇದರಲ್ಲಿ ಒಕ್ಕೂಟ, ಸಾಂಸ್ಕೃತಿಕ ನಾಯಕ ಬಸವಣ್ಣ, ವಚನ ಸಂವಿಧಾನ, ಅಭಿಯಾನದ ಉದ್ದೇಶ, ಕಾರ್ಯಕ್ರಮಗಳ ಸ್ವರೂಪದ ಬಗ್ಗೆ ಮಾಹಿತಿಯಿದೆ.

ಮುಖ್ಯವಾಗಿ ಯಾವ ಯಾವ ಜಿಲ್ಲೆಗಳಲ್ಲಿ ಎಂದೆಂದು ಅಭಿಯಾನ ನಡೆಯಲಿದೆ ಎಂಬ ಮಾಹಿತಿಯೂ ಅಧಿಕೃತವಾಗಿ ಲಭ್ಯವಿದೆ.

ಸಿದ್ಧತೆ ನಡೆಯುತ್ತಿರುವುದರಿಂದ ಕರಪತ್ರದಲ್ಲಿರುವ ಮಾಹಿತಿ ಅಂತಿಮವಲ್ಲ, ಬದಲಾಗುವ ಸಾಧ್ಯತೆಯಿದೆ ಎನ್ನುವುದನ್ನು ಬಸವ ಭಕ್ತರು ಗಮನದಲ್ಲಿಟ್ಟುಕೊಳ್ಳಬೇಕು, ಎಂದು ಒಕ್ಕೂಟದ ಶ್ರೀಗಳೊಬ್ಬರು ಹೇಳಿದ್ದಾರೆ.

ಸೆಪ್ಟೆಂಬರ್ 1 ಬಸವನ ಬಾಗೇವಾಡಿ, ವಿಜಯಪುರ (ಉದ್ಘಾಟನೆ)
ಸೆಪ್ಟೆಂಬರ್ 2 ಕಲಬುರಗಿ
ಸೆಪ್ಟೆಂಬರ್ 3 ಬೀದ‌ರ್
ಸೆಪ್ಟೆಂಬರ್ 4ಯಾದಗಿರಿ
ಸೆಪ್ಟೆಂಬರ್ 5ರಾಯಚೂರು
ಸೆಪ್ಟೆಂಬರ್ 6ಬಳ್ಳಾರಿ
ಸೆಪ್ಟೆಂಬರ್ 7ವಿಜಯನಗರ
ಸೆಪ್ಟೆಂಬರ್ 8ಕೊಪ್ಪಳ
ಸೆಪ್ಟೆಂಬರ್ 9ಗದಗ
ಸೆಪ್ಟೆಂಬರ್ 10ಬಾಗಲಕೋಟೆ
ಸೆಪ್ಟೆಂಬರ್ 11ಬೆಳಗಾವಿ
ಸೆಪ್ಟೆಂಬರ್ 12ಧಾರವಾಡ
ಸೆಪ್ಟೆಂಬರ್ 13ಕಾರವಾರ
ಸೆಪ್ಟೆಂಬರ್ 14ಹಾವೇರಿ
ಸೆಪ್ಟೆಂಬರ್ 15ದಾವಣಗೆರೆ
ಸೆಪ್ಟೆಂಬರ್ 16ಚಿತ್ರದುರ್ಗ
ಸೆಪ್ಟೆಂಬರ್ 17ಶಿವಮೊಗ್ಗ
ಸೆಪ್ಟೆಂಬರ್ 18ಉಡುಪಿ
ಸೆಪ್ಟೆಂಬರ್ 19ಮಂಗಳೂರು
ಸೆಪ್ಟೆಂಬರ್ 20ಚಿಕ್ಕಮಗಳೂರು
ಸೆಪ್ಟೆಂಬರ್ 21ಹಾಸನ
ಸೆಪ್ಟೆಂಬರ್ 22ಕೊಡಗು
ಸೆಪ್ಟೆಂಬರ್ 23ಮೈಸೂರು
ಸೆಪ್ಟೆಂಬರ್ 24ಚಾಮರಾಜನಗರ
ಸೆಪ್ಟೆಂಬರ್ 25ಮಂಡ್ಯ
ಸೆಪ್ಟೆಂಬರ್ 26ರಾಮನಗರ
ಸೆಪ್ಟೆಂಬರ್ 27ತುಮಕೂರು
ಸೆಪ್ಟೆಂಬರ್ 28ಚಿಕ್ಕಬಳ್ಳಾಪುರ
ಸೆಪ್ಟೆಂಬರ್ 29ಕೋಲಾರ
ಸೆಪ್ಟೆಂಬರ್ 30ಬೆಂಗಳೂರು ಗ್ರಾಮಾಂತರ
ಅಕ್ಟೋಬರ್ 1ಬೆಂಗಳೂರು ನಗರ (ಸಮಾರೋಪ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Dv8eAoC8n2rJOtZKYt4o86

Share This Article
2 Comments
  • ಬಸವ ಸಂಸ್ಕೃತಿಯ ಬದಲಾಗಿ “ಶರಣ ಸಂಸ್ಕೃತಿ” ಹೆಸರು ಸೂಕ್ತ. ಅದು ಸಮೂಹದ ಸಂಸ್ಕೃತಿಯಾಗಿ ಬಿಂಬಿಸುತ್ತದೆ.
    ಸಂವಾದ ಕಾರ್ಯಕ್ರಮ ಬಹಳ ಪ್ರಾಮುಖ್ಯ ಆಗಿದ್ದು ಸಮುದಾಯದಲ್ಲಿರುವ ಪ್ರಶ್ನೆಗಳು,ಗೊಂದಲಗಳನ್ನು ಸೂಕ್ತವಾಗಿ ಮನದಟ್ಟು ಮಾಡಿ ಸರಿಪಡಿಸುವ ಮಹತ್ತರ ಕಾರ್ಯಕ್ರಮ. ಅದಕ್ಕೆ ಸಾಕಷ್ಟು ಸಮಯ ಬೇಕು. ಹಾಗು ವಿಷಯಗಳನ್ನು ಪೂರ್ಣ ಅರಿತಿರುವ ಸಮರ್ಥ ಪರಿಣಿತರು ಮಾತ್ರ ಮನದಟ್ಟು ಮಾಡಬಲ್ಲರು. ಅಂತಹ ಪರಿಣಿತ ತಂಡವೇ ಅದನ್ನು ನಿರ್ವಹಿಸುವುದು ಸೂಕ್ತ. ಆದ್ದರಿಂದ ಈ ಕಾರ್ಯಕ್ರಮ ವನ್ನು‌ ಈ ಅಭಿಯಾನದಲ್ಲಿ ಕೈಬಿಟ್ಟು ಅದಕ್ಕೇ ಪ್ರತ್ಯೇಕ ಅಭಿಯಾನ ಆಯೋಜಿ ನಡೆಸುವುದು ಸೂಕ್ತ ಎನ್ನುವುದು ನನ್ನ ಅನುಭವದ ಅಭಿಪ್ರಾಯ.
    ಕಾರ್ಯಕ್ರಮ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಿರುವುದರಿಂದ ವಿಚಾರ/ವಿಷಯಗಳ ಪ್ರಸ್ತಾಪಕ್ಕೆ ಹೆಚ್ಚಿನ ಕಾಲಾವಕಾಶ ನೀಡಿ ಕಾರ್ಯಕ್ರಮ ಸಂಜೆ ಬೇಗ ಮುಗಿಸಿ ಪ್ರಸಾದ ವಿನಿಯೋಗಿಸ ಬೇಕಾಗುತ್ತದೆ. ಈ ಸಮಯದಲ್ಲಿ ಒಂದೇ ನಾಟಕದ ಪ್ರದರ್ಶನವೂ ಸೂಕ್ತವಲ್ಲ. ಶರಣರ ಬಗ್ಗೆ ಹೆಚ್ಚಿನ ವಿಷಯ ನಾಟಕಗಳ ಮುಖೇನ ತಿಳಿಸಲು ಒಂದು ವಿಷೇಶ ನಾಟಕೋತ್ಸವ ಏರ್ಪಡಿಸಿ ಶರಣರ ವಿಚಾರ ಮುಟ್ಟಸುವ ನಾಟಕಗಳ ಪ್ರದರ್ಶನ, ಮೊದಲು ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸುವುದು ಸೂಕ್ತ. ಎಲ್ಲ ಶರಣ ನಾಟಕ ತಂಡಗಳಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ.
    ಈ ಉದ್ದೇಶಿತ ಅಭಿಯಾನ ಹೆಚ್ಚು ಅರ್ಥಪೂರ್ಣ ಯಶಸ್ವಿ ಕಾರ್ಯಕ್ರಮವಾಗಿ ,ಸಮುದಾಯದ ಮೇಲೆ ಒಳ್ಳೆಯ ಪರಿಣಾಮ ಬೀರುವಂತಾಗ ಬೇಕೆಂಬುದು ಬಸವಾನುಯಾಯಿಗಳ ಅಪೇಕ್ಷೆ.

  • ರಾಯಚೂರು ಜಿಲ್ಲೆಯಲ್ಲಿ ಯಾವ ಊರು ಮುತ್ತು ಸ್ಥಳ ಮುಂಚಿತವಾಗಿ ತಿಳಿಸಿದರೆ ಒಳ್ಳೆಯದು. ಭಾಗಿಯಾಗಲು ಸಹಕರಿಸಲು ಅನುಕೂಲವಾಗುತ್ತದೆ ರಾಯಚೂರು ಜಿಲ್ಲೆಯ ಕವಿತಾಳದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡಂತೆ ವ್ಯವಸ್ಥೆ ಮಾಡಿದರೆ ನಾವು ಕವಿತಾಳದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತeve

Leave a Reply

Your email address will not be published. Required fields are marked *