ಗಜೇಂದ್ರಗಡ:
ಊರ ಹೊರವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿರುವ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಈಚೆಗೆ ಬಸವಪರ ಸಂಘಟನೆಗಳು ಬಸವ ಪಂಚಮಿ ಆಚರಿಸಿದವು.
ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ ಸಂಘಟನೆಗಳ ವತಿಯಿಂದ ಮಕ್ಕಳಿಗೆ ಹಾಲು ಕುಡಿಸಿ, ಬಿಸ್ಕೆಟ್ ತಿನ್ನಿಸಿ ಬಸವ ಪಂಚಮಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶರಣರ ವಚನಗಳ ನೈಜ ಆಚರಣೆ, ಬಸವಣ್ಣನವರ “ದಯವೇ ಧರ್ಮದ ಮೂಲವಯ್ಯಾ” ಎಂಬ ಆಶಯದೊಂದಿಗೆ, ಹಾವಿನ ಹುತ್ತಕ್ಕೆ ಅಥವಾ ಕಲ್ಲಿನ ಮೂರ್ತಿಗೆ ಹಾಲು ಎರೆಯುವ ಬದಲು, ಹಸಿದ ಬಡಮಕ್ಕಳ ಹೊಟ್ಟೆ ತಣಿಸುವ ಮೂಲಕ ಇಡೀ ಸಮಾಜಕ್ಕೆ ಒಂದು ಸಂದೇಶ ನೀಡಬೇಕಾಗಿದೆ ಎಂದು ಮುಖಂಡರು ಮಾತಾಡಿ ಹೇಳಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಗುರುಲಿಂಗಯ್ಯ ಓದಸುಮಠ, ಕಾರ್ಯದರ್ಶಿ ಬಸವರಾಜ ಅಂಗಡಿ, ಕಳಕಯ್ಯ ಸಾಲಿಮಠ, ಎಂ.ಎಸ್. ಹಡಪದ, ಮೈಲಾರಪ್ಪ ಸೋಂಪುರ, ಬಸವರಾಜ ಕೊಟಗಿ, ಸುರೇಶ ಚೋಳಿನ, ಶರಣು ಪೂಜಾರ, ಸಂತೋಷ ಕತ್ತಿಶೆಟ್ಟರ, ಸಾಗರ ವಾಲಿ, ಗಿರಿಜಾ ಪುರ್ತಗೇರಿ, ಮಂಜುನಾಥ ಹೂಗಾರ, ಅಂದಪ್ಪ ರೋಣದ, ಮಹಾಂತೇಶ ಕಡಗದ, ಶರಣಪ್ಪ ಹಡಪದ, ಬಸವರಾಜ ಚೋಳಿನ ಮತ್ತಿತರರು ಉಪಸ್ಥಿತರಿದ್ದರು. ಗಿರಿಜಾ ಪುರ್ತಗೇರಿ ಅವರು ಬಸವಗೀತೆ ಹಾಡಿದರು. ಅನೇಕರು ವಚನ ಹೇಳಿದರು.
