ಬೆಂಗಳೂರು
ಹಲವಾರು ಗಣ್ಯರು ಸೇರಿದಂತೆ ನೂರಾರು ಜನರು ನಗರದ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಬಾಗಿಯಾದರು.
ಬಸವ ಮೀಡಿಯಾ ವರ್ಷ ಪೂರೈಸುತ್ತಿರುವ ಸಂಧರ್ಭದಲ್ಲಿ ನಡೆದ ಬಸವ ಸಂಜೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಿದರು. ಹಿರಿಯ ಶರಣ ಸಾಹಿತಿ ಗೋರುಚ, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್, ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ ಆರ್ ಚಂದ್ರಶೇಖರ್, ಸಂಪಾದಕ ಎಂ ಎ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಸವ ಸಂಜೆಯ ಎರಡನೇ ಕಾರ್ಯಕ್ರಮದಲ್ಲಿ ಹುತಾತ್ಮ ಕಲಬುರ್ಗಿಯವರ
ಬದುಕು ಮತ್ತು ಬರಹಗಳ ಪರಿಚಯವನ್ನು ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಮಾಡಿಕೊಟ್ಟರು. ಬಸವ ಮೀಡಿಯಾ ಸಲಹಾ ಮಂಡಳಿ ಸದಸ್ಯ ಅಶೋಕ ಬರಗುಂಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಸತ್ಯಶೋಧಕ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಂತಕರ ಗುಂಡಿಗೆ ಬಲಿಯಾಗಿ ಹತ್ತು ವರ್ಷದ ಸಂದರ್ಭದಲ್ಲಿ ಹುತಾತ್ಮರ ಸಂಶೋಧನೆ ಮತ್ತು ಚಿಂತನೆಯ ಬಗ್ಗೆ ಜಾಗೃತಿ ಮೂಡಿಸಲು ಬಸವ ಮೀಡಿಯಾ ಸಮಾನ ಮನಸ್ಕ ಸಂಘಟನೆಗಳ ಜೊತೆ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ನಂತರ ನಡೆದ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯಲಿರುವ ಚರ್ಚಾ ಗೋಷ್ಠಿಯಲ್ಲಿ ಹಿರಿಯ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ್, ಪಿ ರುದ್ರಪ್ಪ ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಿದರು. ಸಂವಾದವನ್ನು ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಡಾ ಎಚ್ ಎಂ ಸೋಮಶೇಖರಪ್ಪ ನಡೆಸಿಕೊಟ್ಟರು.
ಡಿ.ಪಿ. ನಿವೇದಿತಾ ನಿರೂಪಣೆ, ಎಚ್. ಸಿ. ಉಮೇಶ್ ಪ್ರಾರ್ಥನೆ, ಶ್ರೀಶೈಲ ಮಸೂತಿ ಸ್ವಾಗತ, ರವೀಂದ್ರ ಹೊನವಾಡ ಶರಣು ಸಮರ್ಪಣೆ ನಡೆಸಿಕೊಟ್ಟರು.
ಕಲ್ಬುರ್ಗಿಯವರ ಹಂತಕರನ್ನು ಹಿಂದೂಹುಲಿಗಳೆಂದು ಸನ್ಮಾನಿಸಿದ ಆ ಸಂಘಟನೆಯ ನೀಚರಿಗೆ ಪಾಠಕಲಿಸಬೇಕು
ಬಸವ ಮೀಡಿಯಾದ ಕಾರ್ಯಕ್ರಮ ಬಹಳ ಅರ್ಥಗರ್ಭಿತವಾಗಿ ನಡೆಯಿತು.
ಪುಸ್ತಕವನ್ನು ಕೊಂಡುತಂದು ಓದಿದೆ ಬಹಳ ವಿಷಯಗಳು ಪುನರ್ ಮನನ ಆದವು ಬಸವ ತತ್ವದ ಹೋರಾಟದ ಆದಿ ಹಾಗು ದಬ್ಬಾಳಿಕೆ ಮಾಡುತ್ತಿರುವ ಬಗೆಗಿನ ಎಷ್ಟೋ ವಿಷಯಗಳು ತಿಳಿದಂತಾಯಿತು. ಮೀಡಿಯಾ ಮುಖಾಂತರ ಪ್ರಸಾರದ ವಿಷಯಗಳನ್ನ ಒಂದೆಡೆ ಗುಚ್ಚಮಾಡಿ ಕೊಟ್ಟಿದ್ದಕ್ಕೆ ಶರಣು