ವೈದಿಕತೆ ತಿರಸ್ಕರಿಸಿದ ಶರಣರು: ಜೇಡರ ದಾಸಿಮಯ್ಯನವರ ವಚನಗಳು

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ.

ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಈ ಪುಸ್ತಕವನ್ನು ಈಗ ಹಿಂದುತ್ವ ಸಂಘಟನೆಗಳು ಅನೇಕ ನಗರಗಳಲ್ಲಿ ಬಿಡುಗಡೆ ಮಾಡುತ್ತಿವೆ.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

ಇಂದು ಸನಾತನ ಧರ್ಮವನ್ನು ನಿರಾಕರಿಸುವ ಜೇಡರ ದಾಸಿಮಯ್ಯನವರ ಕೆಲವು ವಚನಗಳು:

ಸನಾತನ ಧರ್ಮದಲ್ಲಿ ದೇವಸ್ಥಾನದ ಪೂಜಾರಿಗಳು ಕೊಡುವ ನೀರು ಪವಿತ್ರ ತೀರ್ಥ ಎಂಬ ನಂಬಿಕೆಯಿದೆ.

ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ,
ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ,
ಹರಿವ ನದಿ ಎತ್ತಣಾ ತೀರ್ಥ! ರಾಮನಾಥ.

ಸನಾತನ ಧರ್ಮದಲ್ಲಿ ಗಂಡು, ಹೆಣ್ಣು ಸಮಾನರಲ್ಲ. ಅದನ್ನು ವಿರೋದಿಸುವ ದಾಸಿಮಯ್ಯನವರ ಪ್ರಸಿದ್ಧ ವಚನ.

ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಗಡ್ಡ ಮೀಸೆ ಬಂದಡೆ ಗಂಡೆಂಬರು.
ನಡುವೆ ಸುಳಿವ ಆತ್ಮನು
ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ.

ಸನಾತನ ಧರ್ಮದಲ್ಲಿ ನೂರಾರು ದೇವರುಗಳಿದ್ದಾರೆ.

ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ.
ಆಸೆ ಮಾಡ, ನೋಡ ಅನ್ಯದೈವಂಗಳಿಗೆ.
ದೇಶದ ಪಿಶಾಚಿಗಳಿಗೆ ಆಶೆ ಮಾಡ ನೋಡ!
ಆಶೆ ಮಾಡಿದನಾದಡೆ ಅವ ದಾಸನ ಕುಲವಲ್ಲ
ಅವ ಅನ್ಯಕುಲ ಕಾಣಾ! ರಾಮನಾಥ.

ಸನಾತನ ಧರ್ಮದಲ್ಲಿ ಹುಣ್ಣಿಮೆ ಅಮಾವಾಸ್ಯೆ ಬಗ್ಗೆ ಭಯ ಇದೆ.

ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ;
ಮಟ್ಟ ಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾನ ಪೌರ್ಣಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ!
ರಾಮನಾಥ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
2 Comments
  • ಅಣ್ಣಾ ಇದುವರೆಗೂ ನೀವು ಸಂಗ್ರಹಿಸಿದ ವೈದಿಕತೆ ತಿರಸ್ಕರಿಸಿದ ಶರಣರು ವಚನಗಳನ್ನು ಒಂದು ಚಂದ್ ಪುಸ್ತಕ ಮಾಡಿ ನಿರ್ವಚನದೊಂದಿಗೆ.

  • March 16, 2026 at 7:45 am
    ತಾವು ಪ್ರಸ್ತಾಪಿಸಿದ್ದ 4 ಆಚನಗಳು ಬಹಳ ಸುಂದರವಾಗಿ ಧೃಢವಾಗಿ ಸ್ಪುಟವಾಗಿ ಅಂತರಂಗಕ್ಕೆ ತಟ್ಟುವಂತೆ ಹೇಳಿದ್ದೀರಿ, ತಮಗೆ ತುಂಬು ಹೃದಯದ ಧನ್ಯವಾದಗಳು, ರಾಜ,ಮಹಾರಾಜ, ರಾಜ ಗುರುಗಳು ಕಾಲದಲ್ಲಿ, ಮೂಲ ಆದಾಯ: ಜನರಿಂದ ಕರ ವಸೂಲಿ ಮಾಡುವ ಪದ್ಧತಿ ಇತ್ತು. ಆಗ ರಾಜನೇ ಮಂದಿರಗಳನ್ನು ಕಟ್ಟಿಸುತ್ತಿದರು. ಮಂದಿರಗಳಿಂದ ಬಂದ ಆದಾಯ ತೆರಿಗೆ ರೂಪದಲ್ಲೂ ರಾಜರೇ ಸಂಗ್ರಹಿಸುತ್ತಿದ್ದರು. ಕರ ಹೆಚ್ಚಾದರೆ ಜನ ರೋ ಚಿಗೆದ್ದರು ಎಂದು ಮಿತಿಯಲ್ಲಿ ಇರಿಸುತ್ತಾ, ಮಂದಿರದ ಆದಾಯಗಳನ್ನು ಪರೋಕ್ಷವಾಗಿ ಪಡೆಯುತ್ತಿದ್ದರು. ಯಲ್ಲ ಜನ ನಿರಂತರವಾಗಿ ಗುಡಿ ಗುಂಡರಗಳಿಗೆ ದಕ್ಷಿಣೆ, ದಾನ, ದೇಣಿಗೆ, ಚಂದಾ ಇತ್ಯಾದಿ ಗೌರವದಿಂದ ಸಲ್ಲಿಸುತ್ತಿದರು. ಈಗ ರಾಜರು ಇಲ್ಲ, ರಾಜ ಮಹಾರಾಜ ಇಲ್ಲ, ರಾಜಗುರುಗಳoತೂ ಮೊದಲೇ ಇಲ್ಲ. ಅದಕ್ಕೆ,, ಗುಡಿ ಗುಂಡಾರದಲ್ಲಿಯ ಆದಾಯ ಕೇವಲ ಪೂಜಾರಿ ವರ್ಗಕ್ಕೆ ಸೇರುವುದರಿಂದ, ನಮ್ಮ ಬಸವ ಬಳಗದವರ ಸ್ವ ಅರ್ಜನೆಯ ಮಾಡಿ ಸ್ವತಂತ್ರ ಧರ್ಮದ ಮೂಲಕ ಯಾರ ಹಂಗಿಲ್ಲದೆ ಬದುಕುವ ಪರಿಯನ್ನು, ಪೂಜಾರಿ ವರ್ಗ, ಪಂ. ಪೀ ಗಳವರು ಒಪ್ಪುತ್ತಿಲ್ಲ . ಶರಣರ ಅಪ್ರಾಯಕ್ಕೆ ಈಗಿನ ಜನ ಒಪ್ಪುತ್ತಿಲ್ಲ. ಅವರಿಗೆ ಇನ್ನೊಬ್ಬರ ದುಡಿತದ, ಶ್ರಮದ ಹಣದ ಮೇಲೆಯೇ ಕಣ್ಣು. ಅದೂ ಇಲ್ಲ ಸಲ್ಲದ ದೇವರ ಭಯಗಳನ್ನು ಹುಟ್ಟಿಸಿ, ಸುಲಿಗೆ ಮಾಡುವ ಕೆಲಸಕ್ಕೆ ಜನ ಬೆಂಬಲ ವಿರುವದಿಲ್ಲ. ಸಮಾಜದಲ್ಲಿ ತಮಗೆ ಬೇಕಾದ ಆಚರಣೆಗಳನ್ನು ಹೇರಿ ಮೇಲ್ವರ್ಗದವರು ನಿರಂತರ ಆದಾಯ ತರುವ, ಸುಖವಾಗಿ ಬದುಕುವ ಅವಕಾಶ ದಕ್ಕಿಸಿದ್ದಾರೆ. ಅದಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಲ್ಲಿ ನಮ್ಮದೊಂದು ಅರಿಕೆ. ಅವರು ಸರಿಯಾಗಿ ಲೆಕ್ಕ, ಪತ್ರ ಬರೆದು, ಅವರ ಖರ್ಚು ವೆಚ್ಚಗಳನ್ನು ಆಸ್ತಿ, ಹೊಣೆಗಾರಿಕೆ ತಖತೆಗಳನ್ನು, ಕಾಲ ಕಾಲಕ್ಕೆ ಬ್ಯಾಂಕಿನಲ್ಲಿ ಹಣ ನಿರ್ವಹಣೆ ಮಾಡುವಂತೆ. ಅಂದರೆ ಪ್ರತಿವಾರ ನಗದು, ಬ್ಯಾಂಕಿನಲ್ಲಿ ಹಣ ಹಳ್ಳಿಯಿಂದ ದಿಲ್ಲಿಯವರೆಗೆ, ರಿಸರ್ವ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಲ್ಲಾ ವ್ಯವಹಾರಗಳ ವಿವರ ನೀಡಬೇಕಾಗಿ ಮನವಿ. ಘನ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿಕೆ. ಅಲ್ಲು ಸಾರ್ವಜನಿಕರ ಹಣ ಸಂಗ್ರಹವಾಗುತ್ತಿದೆ. ಅದಕ್ಕೆ ಸರಿಯಾದ ಲೆಕ್ಕ ಪತ್ರ ಬರೆಯ ಬೇಕಲ್ಲವೇ? ಈಗ ಕೇವಲ ಪುರೋಹಿತ ವರ್ಗದ ಅಥವಾ ಟ್ರಸ್ಟಿನ ಆದಾಯವಾಗಿ, ಜನರ ಬೆವರಿನ ದುಡ್ಡು ಜನರಿಗೆ ಏನಾದ್ರೂ ಸೌಲಭ್ಯ ಸಿಗುತ್ತದೆಯೋ ? ಎಂಬ ಕಾರಣಕ್ಕೆ ವಿವಾದಗಳು. ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ. ಶರಣು ಶರಣಾರ್ಥಿ.

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು