‘ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಕಲಿಸಿದ ಬಸವಾದಿ ಶರಣರು’

ಸಿ.ಎಂ. ಬೂದಿಹಾಳ
ಸಿ.ಎಂ. ಬೂದಿಹಾಳ

ಬೆಳಗಾವಿ :

ಭ್ರಷ್ಟಾಚಾರರಹಿತ ಸಮಸಮಾಜ ನಿರ್ಮಾಣಕ್ಕೆ ತಮ್ಮನ್ನೆ ಸಮರ್ಪಿಸಿಕೊಂಡು ನೆಮ್ಮದಿಯ ಬದುಕನ್ನು ತಾವೂ ಬದುಕಿ, ಮತ್ತೊಬ್ಬರಿಗೂ ಬದುಕುವ ಪರಿಪಾಠವನ್ನು ವಚನಗಳ ಮೂಲಕ ಬಸವಾದಿ ಶರಣರು ಸಮಾಜಕ್ಕೆ ಹೇಳಿಕೊಟ್ಟರು.

ಇಂದಿನ ದಿನಪತ್ರಿಕೆಗಳ ವರದಿಗಳನ್ನು ಓದಿದಾಗ ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರದಂತಹ ಸುದ್ದಿಗಳೇ ಕಾಣಸಿಗುತ್ತಿದ್ದು, ನಮ್ಮ ಸಮಾಜ ಎತ್ತ ಸಾಗುತ್ತಿದೆ ! ಎಂಬ ಭಯಕಾಡುತ್ತಿದೆ. ಈ ಸಮಯದಲ್ಲಿ ಬಸವಾದಿ ಶರಣರ ವಚನಗಳು ನಮಗೆ ದಾರಿ ತೋರಿಸುತ್ತವೆ.

ಕಾಯಕ, ದಾಸೋಹ , ಪ್ರಸಾದ ತತ್ವದಲ್ಲಿ ನಾಳೆಗೆ ಬೇಕೆಂಬ ಸಂಗ್ರಹ ಬುದ್ದಿ ಇರಲಿಲ್ಲ. ಯಾವ ಕಾಯಕವಾದರೂ ಮಾಡು, ಸ್ವಕಾಯಕವ ಮಾಡಿ, ಬಂದುದರಲ್ಲಿ ಗುರು, ಲಿಂಗ ಜಂಗಮಕೆ ಅರ್ಪಿಸಿ, ತಾನುಂಡು ಬದುಕು ಕಟ್ಟಿಕೊಂಡು, ಮರುದಿನ ಮತ್ತೇ ಕಾಯಕ ದಾಸೋಹ ತತ್ವ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮ ಸಮಾಜ ನಿರ್ಮಾಣವಾಗಬೇಕೆಂಬ ಬಸವಾದಿ ಶರಣರ ಆಶಯಗಳನ್ನು ಸಾಕಾರಗೊಳಿಸಬೇಕು. ಅದುವೇ ಶರಣರಿಗೆ ನಾವು ಸಲ್ಲಿಸುವ ಗೌರವ ಎಂದು ಕೆ.ಕೆ. ಕೊಪ್ಪ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ. ಬಸವರಾಜ ಹುಲಮನಿ ಅವರು ಹೇಳಿದರು.

ರವಿವಾರ ಜಾಗತಿಕ ಲಿಂಗಾಯತ ಮಹಾಸಭಾದ ಮಾಸಿಕ ಅನುಭಾವ ಗೋಷ್ಠಿಯಲ್ಲಿ “ಶರಣರ ವಚನಗಳಲ್ಲಿ ಸಾಮಾಜಿಕ ಚಿಂತನೆ” ಎಂಬ ವಿಷಯ ಕುರಿತು ಮಾತನಾಡುತ್ತ ಮೇಲಿನಂತೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಅವರು, ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲ ಸಂಘಟನೆಗಳ ಜೊತೆಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದು, ನಮಗೆ ಯಾರ ಜೊತೆಯೂ ವೈಮನಸ್ಸಿಲ್ಲ. ಆದರೂ ಕೂಡ ಕೆಲವೊಂದು ಸಂಘಟನೆಗಳ ಕೆಲ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಗುರು ಬಸವಣ್ಣನವರ ಬಗ್ಗೆ, ವಚನ ಸಾಹಿತ್ಯದ ಬಗ್ಗೆ ಲಿಂಗಾಯತ ಪ್ರಮುಖ ಮಠಾಧಿಪತಿಗಳ ಮೇಲೆ ಇಲ್ಲಸಲ್ಲದ ಅಪಾದನೆ ಮಾಡಿ, ಅಶ್ಲೀಲ ಅವಾಚ್ಯ ಅಸಂವಿಧಾನಿಕ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುತ್ತಿದ್ದಾರೆ, ಇಂಥ ಸಮಾಜಘಾತುಕರ ಬಗ್ಗೆ ನಾವು ಎಚ್ಚರದಿಂದಿರಬೇಕು. ಅಲ್ಲದೇ ಒಗ್ಗಟ್ಟಾಗಿ ಅವರಿಗೆ ಕಾನೂನು ರೀತಿಯಲ್ಲಿ ಉತ್ತರವನ್ನು ಕೊಡಬೇಕು. ನಾವೆಲ್ಲರೂ ಸಂಘಟಿತರಾದರೆ ಇಂಥ ಕಿಡಿಗೇಡಿಗಳ ಕೃತ್ಯಕ್ಕೆ ತಕ್ಕ ಉತ್ತರವನ್ನು ನೀಡಲು ಸಾದ್ಯ.

ಸಮಾಜ ಬಾಂಧವರು ಒಳಪಂಗಡಗಳಲ್ಲಿ ಚದುರದೇ ನಾವೆಲ್ಲರೂ “ಲಿಂಗಾಯತರು” ಬಸವಣ್ಣನವರು ನಮ್ಮ ಧರ್ಮಗುರುಗಳು, ವಚನ ಸಾಹಿತ್ಯ ನಮ್ಮ ಧರ್ಮ ಗ್ರಂಥವೆಂದು ಒಪ್ಪಿಕೊಂಡು ಎಲ್ಲರೂ ಒಂದಾಗೋಣ, ಬಲಿಷ್ಠ ಲಿಂಗಾಯತ ಸಮಾಜವನ್ನು ಕಟ್ಟೋಣ. ಇದೇ ನಾವು ಬಸವಾದಿ ಶರಣರ ತತ್ವ ಸಿದ್ಧಾಂತಗಳಿಗೆ ಸಲ್ಲಿಸುವ ಗೌರವ. ಎಂದು ಹೇಳಿದರು.

ಪ್ರಸಾದ ದಾಸೋಹದ ಜೊತೆಗೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಜಿ.ಬಿ. ಗೌಡಪ್ಪನವರ ಅವರು, ನಮ್ಮ ಶರಣರ ತತ್ವ ಸಿಧ್ಧಾಂತಗಳು ಉಳಿಯಬೇಕಾದರೆ ನಾವು ನಮ್ಮ ಮಕ್ಕಳಿಗೆ ವಚನಗಳ ಕುರಿತು ತಿಳುವಳಿಕೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಅವರ ೯೧ ನೆಯ ಜನ್ಮ ದಿನಾಚರಣೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಆಚರಿಸಲಾಯಿತು.

ಸಾನಿದ್ಯ ವಹಿಸಿದ್ದ ಶಿವಬಸವ ದೇವರು ಆಶಿರ್ವಚನ ನೀಡಿದರು.

ವೇದಿಕೆಯ ಮೇಲೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ ರತ್ನಾ ಬೆನಚಮರಡಿ ಅವರು ಇದ್ದರು.

ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಮುರಿಗೆಪ್ಪ ಬಾಳಿ ಹಾಗೂ ಅಡಿವೆಪ್ಪ ಇಟಗಿ ಮಾಡಿದರು. ಶ್ರೀದೇವಿ ಅಂಟಿನ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಶಿವಳ್ಳಿ ಶರಣು ಸಮರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅಶೊಕ ಮಳಗಲಿ, ಎಸ್.ಜಿ. ಸಿದ್ನಾಳ, ಸಿ.ಎಂ. ಬೂದಿಹಾಳ, ಪರುಶೆಟ್ಟಿ ದಂಪತಿ, ಎಫ್. ಆರ್. ಪಾಟೀಲ, ಈರಣ್ಣ ಚಿನಗುಡಿ, ಕಾವೇರಿ ಕಿಲಾರಿ, ಅನಸೂಯಾ ಬಶೆಟ್ಟಿ, ಶೈಲಜಾ ಭಿಂಗೆ, ಪ್ರೇಮಕ್ಕ ಅಂಗಡಿ, ಮೋಹನಗೌಡ ಪಾಟೀಲ, ಶಂಕರ ಶೆಟ್ಟಿ, ಕಟ್ಟಿಮನಿ, ಕೆಂಪಣ್ಣ ರಾಮಪುರಿ, ನೇತ್ರಾ ರಾಮಪುರಿ, ಶೀಗಿಹಳ್ಳಿ, ಶಿವಾನಂದ ನೀರಾಕಾರಿ, ಜಯಶ್ರೀ ನೀರಾಕಾರಿ, ಮೋಹನ ಗುಂಡ್ಲೂರ, ಚಂದ್ರಪ್ಪ ನಾವಲಗಟ್ಟಿ, ಅನಗೋಳದ ನಾಗಲಿಂಗ ಬೆಣಚಿ, ಪ್ರೀತಿ ಮಠದ, ಸುಮಂಗಲಾ ವಸ್ರದ, ಗಂಗಾಧರ ವಸ್ತ್ರದ,
ಅಲ್ಲದೇ ವಿವಿಧ ಬಡಾವಣೆಯಿಂದ ಬಂದ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *