ಲಿಂಗಸುಗೂರಿನಲ್ಲಿ ‘ನವವಚನ ಚಿಂತನ’ ಕಾರ್ಯಕ್ರಮಕ್ಕೆ ಚಾಲನೆ

ಲಿಂಗಸುಗೂರು:

ಮರಣವೆ ಮಹಾನವಮಿ ಅಂಗವಾಗಿ ‘ನವ ವಚನ ಚಿಂತನ – 2026’ ಎಂಬ ಶರಣ ಸಂಸ್ಕೃತಿಯ ಕಾರ್ಯಕ್ರಮ ಸ್ಥಳೀಯ ಶ್ರೀ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಚಾಲನೆಗೊಂಡಿದೆ.

12ನೇ ಶತಮಾನದ ಬಸವಾದಿ ಶರಣೆಯರನ್ನು ಸ್ಮರಿಸುವ, ಪರಿಚಯಿಸುವ ಈ ಕಾರ್ಯಕ್ರಮ ಅಕ್ಟೋಬರ್ 11ರಿಂದ ಆರಂಭಗೊಂಡು 19 ರವರೆಗೆ ಪ್ರತಿದಿನ ಸಂಜೆ 6.30 ಕ್ಕೆ ನಡೆಯುವದು.

ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಶಾಖಾಮಠ ಅನುಭವ ಮಂಟಪ, ಬಸವ ಕೇಂದ್ರ, ಅಕ್ಕನ ಬಳಗ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸಗಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ.

11 ರವಿವಾರ ಮೊದಲ ದಿನ ಶೈಲಜಾ ಬನ್ನಿಕೊಪ್ಪ ಅವರಿಂದ ಅಮ್ಮಗೆ ರಾಯಮ್ಮ ಶರಣೆಯ ಕಿರುಪರಿಚಯ  ಮತ್ತು ಅವರ ವಚನ ವಿಶ್ಲೇಷಣೆ ನಡೆಯಿತು.

ಶ್ರೀ ಮಠದ ಪೂಜ್ಯರಾದ ಸಿದ್ಧಲಿಂಗಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಗಂಗಮ್ಮ ಸತ್ಯಂಪೇಟೆ ಅವರು ಚಿಂತನೆಗೆ ಉಪಸಂವಾದದ ನುಡಿಗಳನ್ನು ಆಡಿದರು.

12 ಸೋಮವಾರ ಎರಡನೇ ದಿನ ಶರಣ್ಯ ಸುಮಿತ್ರ ಪಾಟೀಲ ಅವರಿಂದ ಶರಣೆ ನೀಲಾಂಬಿಕೆ ಅವರ ಕಿರುಪರಿಚಯ ಮತ್ತು ಅವರ ವಚನ ವಿಶ್ಲೇಷಣೆ ನಡೆಯಿತು.

ಶ್ರೀ ಮಠದ ಪೂಜ್ಯರಾದ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಅಕ್ಕನ ಬಳಗದ ತಾಯಂದಿರು ಸಾಮೂಹಿಕ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಹಾಗೂ ಸಂವಾದದ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಬೆಳಕನ್ನು ನೀಡಲಾಗಿತ್ತು. ಮಠದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *