ಬಸವ ಯುಗದ ಶರಣೆ ಗುಡ್ಡದ ಗುಡ್ಡವ್ವೆ ( ದಾನಮ್ಮ)

ಸವಿತಾ ದೇಶಮುಖ
ಸವಿತಾ ದೇಶಮುಖ

ಗುಡ್ಡದ ಗುಡ್ಡವ್ವೆ ( ದಾನಮ್ಮ)ಯನ್ನು ಕಾಣಲು ಲಕ್ಷೋಪಲಕ್ಷ ಭಕ್ತಾದಿಗಳು ಅತ್ಯಂತ ಉತ್ಕಟವಾದ ಭಕ್ತಿ -ಶ್ರದ್ಧಾಭಾವದಿಂದ ಹೋಗುವರು. ಅವರ ಹುರುಪು ಹುಮ್ಮಸ್ಸುಸಿನ ಸಂಭ್ರಮವನ್ನು ಕಂಡು ನಿಬ್ಬೆರಗಾಗಿ ನಿಲ್ಲುತ್ತಿದ್ದೆ. ಚಟ್ಟಿ ಅಮಾವಾಸ್ಯೆ ಬಂತು ಅಂದರೆ ವಿಜಯಪುರದ ರಸ್ತೆ ರಸ್ತೆಗಳು ಜನಸ್ತೋಮದಿಂದ ತುಂಬಿ ತುಳುಕುವದು, ಪಾದರಕ್ಷೆಗಳು ಇಲ್ಲದೆ ಹೆಣ್ಣು ಮಕ್ಕಳು, ಹಿರಿಯರು ಮುದುಕರು, ನಡುವಯಸ್ಸಿನವರು, ಚಿಕ್ಕ ಮಕ್ಕಳು ತಮ್ಮ ತಮ್ಮ ಹರಿಕೆಯನ್ನು ಸಲ್ಲಿಸಲು ಹೋಗುತ್ತಿರುವುದುನೋಡಿ ಅತ್ಯಆಶ್ಚರ್ಯವಾಗುತ್ತಿತ್ತು, ನೂರಾರು ಮೈಲುಗಳ ಕಾಲ್ನಡಿಗೆಯ ಪಯಣವದು ..ಅದೆಂಥಹ ಮಹಿಮೆ ಆ ಸ್ಥಳದಲ್ಲಿ ತುಂಬಿ ಹರಿಯುತ್ತಿದೆ, ಜನರನ್ನು ಸೆಳೆಯುತ್ತಿದೆ ಅನ್ನುವುದು ಅರ್ಥವಾಗದಾಗಿತ್ತು. ಅಲ್ಲಿಗೆ ನಾವು ಕೂಡ ಹೋದಾಗ ತಾಯಿಯ ಮಹಿಮೆಯ ಅರ್ಥ ನಮಗೆ ತಿಳಿದು ಬಂದಿತ್ತು. ಅದಾವುದು ಅವ್ಯಕ್ತವಾದ ಶಕ್ತಿಯು ಸಂಚರಿಸುವ ಭಾಸವು ಆಯಿತು. ಗುಡ್ಡಾಪುರದ ದಾನಮ್ಮುಳು ಬಸವ ಯುಗದ ಶಿವಶರಣೆ ಯಾಗಿದ್ದರು ಅವರು ದೇವಿಸಂಭೂತಳು ಅನ್ನುವುದು ಖಚಿತವಾಯಿತು.

ಗುಡ್ಡಾಪುರವು ವಿಜಯಪುರದಿಂದ 50 ಕಿಲೋಮೀಟರ್ ದೂರದಲ್ಲಿ ಸ್ಥಿತವಾಗಿದೆ. ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಕಚ್ಚಾ ರಸ್ತೆಗಳನ್ನು ದಾಟಿ ಜನರು ತಾಯಿಯ ದರ್ಶನಕ್ಕೆ ಹೋಗುವರು. ವಿಜಯಪುರ ಜಿಲ್ಲೆಯಿಂದಲೇ ಎರಡು ಲಕ್ಷಕ್ಕಿಂತಲೂ ಹೆಚ್ಚು ಜನರು ಪಾದಯಾತ್ರೆ ಮಾಡುವವರು, ಭಕ್ತರ ದಣಿವು , ಹಸಿವು ನಿವಾರಿಸಲು ಅಲ್ಲಲ್ಲಿ ಊಟ ,ತಿಂಡಿ, ನೀರಿನ, ಔಷಧಿಯ ವ್ಯವಸ್ಥೆಯನ್ನು ಮಾಡುವ ಟೆಂಟುಗಳು,ಈ ಎಲ್ಲ ಒದಗಿಸಿ ಕೊಡುತಿರುವ ದೃಶ್ಯವು ಮನ ಮುದಗೊಳಿಸುವಂಥದ್ದು.
ಈಗ ಸದ್ಯದಲ್ಲಿ ನೆಲೆಗೊಂಡಂಥ ಗುಡ್ಡಾಪುರದ ಮೂಲ ದೇವಸ್ಥಾನವು ಚಾಲುಕ್ಯ ಸೋಮೇಶ್ವರನು ಜೀರ್ಣೋದಾರ ಗೊಳಿಸಿದನು ಅಂತ ಹೇಳಲಾಗುವುದು.

ದಾನಮ್ಮ ದೇವಿ ಹುಟ್ಟಿದ್ದು ವಿಜಯಪು ಜಿಲ್ಲೆಯ ಉಮರಾಣಿಯಲ್ಲಿ. ತಂದೆ ಅನಂತರಾಯರು ತಾಯಿ ಸಿರಸವ್ವನ ಉದರದಲ್ಲಿ ಜನಿಸಿದರು. ವಿಶ್ವಕರ್ಮ ಕುಲಕ್ಕೆ ಸೇರಿದ ತಂದೆ ಬಂಗಾರದ ಕೆಲಸ ಮಾಡುತ್ತಿದ್ದರು. ದಾನಮ್ಮ ದೇವಿಯ ಮೂಲ ಹೆಸರು ಲಿಂಗಮ್ಮ. ಲಿಂಗಮ್ಮನವರು ವೀರಯ್ಯ ವಿರಕ್ತಮಠದಿಂದ ದೀಕ್ಷೆಯನ್ನು ಪಡೆದುಕೊಂಡಿದ್ದರು. . ಅವರು ಶಿವನಲ್ಲಿ ಇಟ್ಟ ಭಕ್ತಿ ಅಪಾರವಾಗಿತ್ತು. ಸದಾ ಆ ಜಗದೊಡೆಯ ಶಿವನ

ಧ್ಯಾನದಲ್ಲಿ ನಿರತರಾಗುತ್ತಿದ್ದರು. ಚಿಕ್ಕವರಿರುವಾಗಲು ಶಿವಲಿಂಗವನ್ನು ಮಾಡಿ ಗೆಳತಿಯರೊಂದಿಗೆ ಶಿವಾಅಷ್ಟಕವನ್ನು ಪಠಿಸುತ ಆಟವನ್ನು ಆಡುತ್ತಿದ್ದರು .ಹಾಗೆ ಬೆಳೆಯುತ್ತಾ ದೊಡ್ಡವರಾದಂತೆ ಶಿವನ ಪೂಜೆ, ದೀನ- ದುಃಖಿಗಳಿಗೆ ಸಹಾಯವನ್ನು ಮಾಡುವ ಪ್ರವೃತ್ತಿಯನ್ನು ಹೊಂದಿದ್ದರು. ತನ್ನಲ್ಲಿದ್ದ ಯಾವುದೇ ಬೆಲೆ ಬಾಳುವ ವಸ್ತುಗಳನು ತೆಗೆದು ತಟ್ಟನೆ ಕೊಟ್ಟು ಬಿಡುವ ವೈಶಾಲ್ಯ ಮನೋವೃತ್ತಿಯನ್ನು ಹೊಂದಿದ್ದರು. ಮಕ್ಕಳಂತೆ ಸಂಸಾರಿಕ ಆಟಿಕೆಗಳನ್ನು ಬಳಸುತ್ತಿರಲಿಲ್ಲ ಸದಾ ಪೂಜೆಯ ಸಾಮಾನುಗಳೇ ಅವರ ಆಟದ ವಸ್ತುಗಳಾಗಿದ್ದವು.

ಅವರು ಬೆಳೆಯುತ್ತಾ ದೊಡ್ಡವರಾದಂತೆ ಅತ್ಯಂತ ಸುಂದರ ಯುವತಿಯಾಗಿ ಬೆಳೆಯಲು ಪ್ರಾರಂಭಿಸುತ್ತಾರೆ ಹೀಗಾಗಿ ತಂದೆ ತಾಯಿ ಮದುವೆ ಮಾಡುವ ವಿಚಾರ ಅವರ ಮನದಲ್ಲಿ ಹೊಳೆಯುತ್ತದೆ ಅದಕ್ಕೆ ಒಪ್ಪದ ಲಿಂಗಮ್ಮ , “ಈ ಜಗದ ಸತ್ಯತೆಯ ಅನ್ವೇಷಣೆಯಲ್ಲಿ ಇರುವೆ ನನ್ನ ತಡೆಯದಿರಿ “ಎಂದು ಸೊಲ್ಲಾಪುರದ ಶಿವಯೋಗಿ ಸಿದ್ದರಾಮರನ್ನು ಗುರುವಾಗಿ ಸ್ವೀಕರಿಸಿ ಅಲ್ಲಿ ಯೋಗದ ಅಭ್ಯಾಸದಲ್ಲಿ ನಿರತರಾಗುತ್ತಾರೆ .ಅಲ್ಲಿ ಹಠಯೋಗ ದೃಷ್ಟಿಯುಗ ಕಲೆತು ,ಶ್ರೀಶೈಲ ಮಲ್ಲಿಕಾರ್ಜುನ ಸಾಕ್ಷಾತ್ ದರ್ಶನ ಪಡೆದುಕೊಂಡು, ಶಿವಯೋಗಿ ಸಿದ್ದರಾಮರನು ಗುರುವಾದರೆ ಚನ್ನಬಸವಣ್ಣನವರಿಂದ ಲಿಂಗ ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ. ಹಲವು ದಿನಗಳವರೆಗೆ ಆನಂದದಿಂದ ಸೊನ್ನಲಾಪುರದಲ್ಲಿ ಇದ್ದರು.
ಆನಂತರ ಸರ್ವರಿಗೂ ಶುಭವನ್ನು ಕೋರುತ್ತಾ ,ಪರಮ ಚೈತನ್ಯಾತ್ಮಕ ಬಿಡಾದ ಕಲ್ಯಾಣದತ್ತ ತಮ್ಮ ಪಯಣವನ್ನು ಬೆಳೆಸುತ್ತಾರೆ.

ಬಹುದೂರ ನಡೆದಾಗ ಲಿಂಗಮ್ಮರಿಗೆ ಬಾಯಾರಿಕೆಯಾಗುತ್ತದೆ .ಅಲ್ಲಿ ರಸ್ತೆಯ ಬದಿಯಲ್ಲಿ ಬಿಲ್ವಪತ್ರಿಯ ವನವೊಂದು ಅವರ ಕಣ್ಣಿಗೆ ಬೀಳುತ್ತದೆ ಆ ಬಿಲ್ವಪತ್ರೆಯ ಗಿಡದ ಕೆಳಗಡೆ ಶಿವನ ಮೂರ್ತಿ ಇರುತ್ತದೆ ಅದರೆ ಸಮೀಪದಲ್ಲಿಯೇ ಒಂದು ಶುಭ್ರ ನೀರಿನ ಹೊಂಡೋಂದು ಕಾಣಿಸುತ್ತದೆ. ಸಂತೋಷದಿಂದ ಹೋಗಿ ತಮ್ಮ ಸ್ನಾನಾದಿಗಳನ್ನು ಮುಗಿಸಿಕೊಂಡು ಶಿವನ ಧ್ಯಾನದಲ್ಲಿ ಕುಳಿತುಕೊಳ್ಳುತ್ತಾರೆ. ಪಾರ್ವತಿ ದೇವಿಯೇ ಧರೆಗಿಳಿದು ಬಂದಂಥ ಅನುಭವವಾಗುತ್ತದೆ ಭಕ್ತರಿಗೆ . ಹಾಗೆ ಮುಂದೆ ಬಸವ ವನದಲ್ಲಿ ಅನುಷ್ಠಾನಕ್ಕೆ ಕುಳಿತಾಗ ಯೋಗದ ಉತ್ತುಂಗಕ್ಕೆ ಏರಿ ನೆಲದಿಂದ ಮೂರು ಅಡಿ ಎತ್ತರದಲ್ಲಿ ಕುಳಿತು ಧ್ಯಾನಸ್ಥರಾಗಿರುತ್ತಾರೆ .ಆಯೋಗ ಸಮಾಧಿಲ್ಲಿ ಶುಭ್ರವಾದ ಬಿಳಿ ಸೀರೆಯನ್ನು ತೊಟ್ಟ ಸಾಕ್ಷಾತ್ ಸರಸ್ವತಿ ಮಾತೆಯಂತೆ ಸೌಂದರ್ಯದ ಸರ್ವ ಮಂಗಳ ದೀವಿಗೆ ಕಂಡಂತೆ ಕಂಗೊಳಿಸುತ್ತಾರೆ.

ಇದನ್ನೆಲ್ಲ ಕಂಡ ಭಕ್ತಾದಿಗಳು ಅನುಭವ ಮಂಟಪದ ಬಸವಣ್ಣನ ಅರುವಿನ ಮನೆಗೆ ಧಾವಿಸಿ ವಿಷಯವನ್ನು ತಿಳಿಸುತ್ತಾರೆ. ಅಲ್ಲಿ ಬಸವಣ್ಣ ಅವರ ಧರ್ಮಪತ್ನಿಯರು ನೀಲಾಂಬಿಕ ,ಗಂಗಾಂಬಿಕೆ ,ಚೆನ್ನ ಬಸವಣ್ಣ, ಬಿಜ್ಜಳ ಮಹಾರಾಜರು ಸಮೇತವಾಗಿ ಲಿಂಗಮ್ಮಳು ಇದ್ದ ಸ್ಥಳಕ್ಕೆ ಬರ್ತಾರೆ . ಲಿಂಗಮ್ಮನನ್ನು ವಂದಿಸುತ ಬಸವಣ್ಣನವರು ಕೇಳ್ತಾರೆ “ತಾಯಿ ನಿನ್ನ ಹೆಸರೇನು ?ಅಂತ ಲಿಂಗಮ್ಮನ ಹೇಳುತ್ತಾರೆ “ತಮ್ಮ ಅರುವಿನ ಆಗರಕ್ಕೆ ನಾನು ಬಂದಿರುವೆ ನಾನು ಉಮರಾಣೆಯಿಂದ ಬಂದಿದ್ದೇನೆ. ನನ್ನ ಹೆಸರು ಲಿಂಗಮ್ಮ” ,ಅಂತ ಹೇಳಿದರು. ಕಾಮನನ ಕಣ್ಣ ದಿಟ್ಟಿಯಿಂದ ದೂರವಾಗಿರುವುದಕ್ಕೆ ಈ ವೃದ್ಧ ವೇಷವನ್ನು ಧರಿಸಿ ಬಂದಿರುವೆ ಇದುವೇ ನನ್ನ ನಿಜವಾದ ರೂಪವೆಂದು ಅತ್ಯಂತ ಸುಂದರವಾದ ತರುಣಿಯಾಗಿ ಪರಿವರ್ತನವಾಗುತ್ತಾರೆ. ನಿವೆಲ್ಲಾ ಲಿಂಗಮ್ಮನಾಗಿ ನನ್ನನ್ನು ಎಲ್ಲರೂ ಸ್ವೀಕರಿಸಬೇಕು ಅಂತ ನಮಸ್ಕರಿಸುತ್ತಾರೆ. ಹಾಗೆ ಅಲ್ಲಿ ಬಂದಂತ ಶರಣರೆಲ್ಲರೂ ಅತ್ಯಂತ ಪ್ರಸನ್ನಗೊಂಡು, ಅವರ ಆಚಾರ ವಿಚಾರ ಯೋಗದ ದಿವ್ಯತೆಯನ್ನು ನೋಡಿದ ಬಸವಣ್ಣನವರು ಲಿಂಗಮ್ಮನವರಿಗೆ ಅನುಭವ ಮಂಟಪಕೆ ಬರಲು ಆಹ್ವಾನಿಸಿ ಮರಳುತ್ತಾರೆ.

ಇತ ಶರಣರು ಭಕ್ತಾದಿಗಳು ತಾಯಿಗೆ ಬುತ್ತಿಯನ್ನು ಕಟ್ಟಿಕೊಂಡು ಬಂದಿರುತ್ತಾರೆ ನಿಂಗಮ್ಮನವರು ಅದನ್ನು ಮುಟ್ಟುವುದಿಲ್ಲ ಏಕೆಂದರೆ ಪ್ರಸಾದವನ್ನು ಜಂಗಮರಿಗ ಅರ್ಪಿಸದೆ ನಾನು ಉಣ್ಣಲಾರೆ ಅಂತ ಹೇಳ್ತಾರೆ , ನಾನು ಸ್ವೀಕರಿಸಬೇಕಾದರೆ ಲಕ್ಷದ ಮೇಲೆ 96 ಸಾವಿರ ಜಂಗಮರಿಗೆ 770 ಅಮರ ಗಣಂಗಳಿಗೆ 63 ಮಂದಿ ಪುರಾತನರನ್ನು ಬಸವನಕ್ಕೆ ಬರ ಹೇಳಬೇಕು, ಅಂದರು. ಅಷ್ಟೊಂದು ಜನರನ್ನು ಸ್ವಲ್ಪ ಪ್ರಸಾದದಲ್ಲಿ ಉಣಬಡಿಸುವುದು ಹೇಗೆ ಎಂದು ಚಿಂತಿಸ್ತಾರೆ ,ಆದರೆ ಲಿಂಗಮ್ಮನವರು ಎಲ್ಲರನ್ನು ಆಹ್ವಾನಿಸಲು ಹೇಳುತ್ತಾರೆ. ಎಲ್ಲರಿಗೆ ಆಸನವನ್ನು ಹಾಸಿ ಇಷ್ಟ ಪೂಜೆ ಲಿಂಗ ಪೂಜೆ ಮಾಡಿಸಿ, ಪರಮ ಚೈತನ್ಯ ಸ್ವರೂಪಿಯಾದ ಲಿಂಗಮ್ಮನೋ ಶಿರಸಾಷ್ಟಾಂಗ ನಮಸ್ಕಾರಿಸಿ ಎಲ್ಲರಿಗೂ ಪ್ರಸಾದಕ್ಕೆ ಅಣಿ ಮಾಡತಾರೆ. ಭಕ್ತರು ತಂದಂತಹ ಪ್ರಸಾದ ಪಾತ್ರ ಮುಟ್ಟಿ ನಮಸ್ಕಾರಿಸುತಿದಂತೆ ಶುದ್ಧ ಸಿದ್ದಿ ಪ್ರಸಾದವಾಯಿತು ಅಂತೆಯೇ ಆ ಪ್ರಸಾದವನ್ನು ತಮ್ಮ ಕೈಯಿಂದಲೇ ಎಲ್ಲರಿಗೂ ಬಡಿಸುತ್ತಾ ಹೋಗುತ್ತಾರೆ ಆದರೆ ಆ ಪಾತ್ರೆಯಲ್ಲಿಯ ಪ್ರಸಾದ ಮುಗಿಯುವುದೇ ಇಲ್ಲ ಹೀಗಾಗಿ ಉಂಡಭಕ್ತರೆಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ, ಪ್ರಸಾದ ಸುಚಿ ರುಚಿಯ ಬಗ್ಗೆ ಹೊಗಳುತ್ತಾ ಅಲ್ಲಿಂದ ತೆರಳುತ್ತಾರೆ. ಹಾಗೆ ಅವರು ಕೇಳಿದ ಕಾಣಿಕೆಗಳನ್ನು ಕೂಡ ಮನಸ್ಸು ಬಿಚ್ಚಿ ಕೊಡ್ತಾರೆ ಲಿಂಗಮ್ಮ.

“ಆನೆಎಂಬುವುದಿಲ್ಲ ,ನೀನೆಂಬುವುದಿಲ್ಲ
ಅರಿವೆಂಬುವುದಿಲ್ಲ ,ಮರವೆಂಬುವುದಿಲ್ಲ
ಒಳಗೆಂಬುವುದಿಲ್ಲ ,ಹೊರಗೆಎಂಬುವುದಿಲ್ಲ
ಕೂಡಲಸಂಗಮ ದೇವನೆಂಬ ಶಬ್ದ ಮುನ್ನಿಪ”
ಎಂದರು ಬಸವಣ್ಣನವರು ಲಿಂಗಮ್ಮನಲ್ಲಿಯ ಅಪರಮಿತ ಶಕ್ತಿಯನ್ನ ಅರಿತುಕೊಂಡು ಶರಣು ಶರಣಾರ್ಥಿ ಎಂದರು.ಶರಣರೆಲ್ಲರನ್ನು ಕಂಡು ಆನಂದ ಭಾಷ್ಪವನ್ನು ಸುರಿಸಿದರೂ ಲಿಂಗಮ್ಮ. ಅತ್ಯಾಾನಂದವಾಯಿತು ನಿಮ್ಮೆಲ್ಲರನ್ನು ಕಂಡು ಅಂತ ಸಾಷ್ಟಾಂಗ ನಮಸ್ಕಾರ ಹಾಕಿದರು. ಮರು ನಮಸ್ಕರಿಸಿದ ಚೆನ್ನಬಸವಣ್ಣನವರು “ನೀನು ಮಹಾಮಹಿ ತಾಯಿ ನಿನಗೆ ನಮಸ್ಕರಿಸದೆ ಇರಲು ಸಾಧ್ಯವೇ “ಅನ್ನುತ್ತಾರೆ. ಬಸವಣ್ಣನವರು ಹೇಳ್ತಾರೆ, “ತಾಯಿ ನೀನು ಮಹಾದಾನ ಶೂರಳು ” ಎಂದು ಕರೆದರು .ಜಂಗಮರು ವಾದ್ಯ ಮೇಳದ ಸಮೇತ ಲಿಂಗಮ್ಮನವರಿಗೆ ಜಯ ಜಯಕಾರ ಮಾಡುತ್ತಾ ಅನುಭವದ ಮಂಟಪಕ್ಕೆ ಕರೆದುಕೊಂಡು ನಡೆದರು .ಇಡೀ ಕಲ್ಯಾಣವೇ ಭಕ್ತಿ ಸಾಗರದಲ್ಲಿ ಮುಳುಗಿ ಹೋಗಿತ್ತು ಅನುಭವದ ಅಮೃತ ರಸಾಧಾರಿಯಲ್ಲಿ ಮಿಂದು ಹೋಗಿತ್ತು. ಮುತ್ತೈದೆರೆಲ್ಲರೂ ಆರತಿಯನ್ನು ಹಿಡಿದು ರಸ್ತೆಯ ಬದಿಯಲ್ಲಿ ನಿಂತಿದ್ದರು. ಬಸವಣ್ಣನನ್ನು ಕೊಂಡಾಡುತ್ತಾ ಶಿವನ ಸ್ಮರಿಸುತ ಶಕ್ತಿ ಭಕ್ತಿಯಲ್ಲಿ ಅನುಭವ ಮಂಟಪಕೆ ಬರ್ತಾರೆ. ಲಿಂಗಮ್ಮನವರು ಸಾಕ್ಷಾತ್ ಶರ್ವಾಣಿಯೇ ಧರೆಗೆ ಇಳಿದು ಬಂದಳು ಅನ್ನುವ ನಂಬಿಕೆಯಿಂದ ಅಲ್ಲಿ ಸ್ವಾಗತವನ್ನು ಮಾಡಲಾಗುತ್ತದೆ .ಶೂನ್ಯಸಿಂಹಾಸನದಲ್ಲಿ ನಿರಂಜನ ಮೂರ್ತಿ ಅಲ್ಲಮಪ್ರಭುಗಳು ವಿರಾಜಮಾನರಾಗಿದ್ದರು ಎಡಬಲದಲ್ಲಿ ಮರುಳ ಶಂಕರ ,ದೇವ ಸಿದ್ದರಾಮಯ್ಯ ನಿಂತಿದ್ದರು ಬಸವಣ್ಣ, ಚನ್ನಬಸವಣ್ಣ ,ಮಡಿವಾಳ ಮಾಚಯ್ಯ ಅನೇಕ ಸಕಲಶರಣರು ಜೈ ಜೈಕಾರ ಮಾಡುತ್ತಾ ಶರಣಿಯನ್ನು ಒಳ ಬರಮಾಡಿಕೊಂಡರು.ಪ್ರಭುದೇವರು ಶಕ್ತಿ ಸ್ವರೂಪಿಯನ್ನು ನೋಡುತ್ತಲೇ ಎದ್ದು ಬಂದು ಬರಮಾಡಿಕೊಂಡು ಉಚಿತ ಆಸನದಲ್ಲಿ ಕೂಡಿಸಿ ತಾವು ಶೂನ್ಯ ಸಿಂಹಾಸನವಾಸಿಯಾದರು. ಅಕ್ಕಮಹಾದೇವಿಗೆ ಪರೀಕ್ಷಿಸಿದಂತೆ ಲಿಂಗಮ್ಮನಿಗೆ ಯಾವ ಪರೀಕ್ಷೆ ಮಾಡದೆ ಹಸ್ತ ಸ್ಪರ್ಶದಿಂದಲೇ ನಿಂಗಮ್ಮನ ಕೊರಳಿಗೆ ಹೂವಿನ ಹಾರ ಹಾಕಿದರು, ತಾಯಿ ಈಗಾಗಲೇ ನಾನು ನಿನ್ನ ಬಗ್ಗೆ ಅರಿತಿರುವೆ ಇನ್ನು ನೀನು ದಾನ ಶೂರ ದಾನಮ್ಮಾಳಾಗಿ ಪ್ರಸಿದ್ಧಿಯಾಗುವಂತ ಹರಿಸಿದರು. ಬಸವಣ್ಣನವರು ಇಂದಿನಿಂದ ನೀನು ದಾನಮ್ಮಳು ಅಂತ ಕರಿಸಿದರು.

ಕೂಡಲಸಂಗಮದ ಶರಣನಾದ ಸೋಮಲಿಂಗರೊಂದಿಗೆ ಅವರ ಮದುವೆ ಪ್ರಸ್ತಾಪವನ್ನು ಎತ್ತಿದರು. ಅದೇ ರೀತಿ ದಾನಮ್ಮಳು ಶರಣರ ಮಾತಿಗೆ ಒಪ್ಪಿಕೊಂಡರು. ಸಂಗಮ ತೀರ್ಥದಲ್ಲಿ ಮದುವೆ ನಿಶ್ಚಯವಾಗುವದು. ದಾನಮ್ಮರವರು ಎಲ್ಲ ಶರಣರ ಆಣತಿಯಂತೆ ಸಂಗತೀರ್ಥದಲ್ಲಿ ೫೫೫ ಮಧು ಮಕ್ಕಳ ಜೋಡಿಗಳೋದಿಂಗೆ ತಮ್ಮ ಮದುವೆಯನ್ನು ಕೂಡ ನೆರವೇರಿಸಿದರು. ಕೆಲವು ದಿನ ಅನುಭವ ಮಂಟಪದಲ್ಲಿ ನೆಲೆಸಿ ಅಲ್ಲಿ ನಡೆಯುತ್ತಿರುವ ವಚನ ಘೋಷ್ಠಿಯಲ್ಲಿ ಪಾಲ್ಗೊಂಡು ಅನುಭವದ ಸವಿ ಉಂಡು ತೃಪ್ತರಾಗುತ್ತಾರೆ.

“ಶಶಿ ಯೊಳಗಣ ರಸದ ರುಚಿಯ ರುಚಿಯಂತಿದ್ದಿತ್ತು
ಪುಷ್ಪ ದೊಳಗಣದದಿನ ಪರಿಮಳದಂತಿದ್ದಿತ್ತು
ಉದಕ ದೊಳಗಿನ ಪ್ರತಿಬಿಂಬದಂತೆ
ಬೀಜದೊಳಗಿನ ವೃಕ್ಷದಂತೆ
ಶಬ್ದದೊಳಗಿನ ನಿಶಬ್ದದಂತೆ
ಗುಹೇಶ್ವರ ನಿಮ್ಮ ಶರಣರ ಸಂಬಂಧಿಸಿ ಕಂಡ ಕನಸಿನಂತಿತ್ತು “

ಎನ್ನುವಂತೆ ಅನುಭವ ಮಂಟಪದಲ್ಲಿ ಅವರ ಅನುಭಾವವನ್ನು ಪಡೆದುಕೊಂಡು ,ಎಲ್ಲ ಶರಣರಿಗೆ ಶರಣು ಶರಣಾರ್ಥಿ ಎಂದು ತಿಳಿಸಿ ಇಲ್ಲಿ ಬಂದಿದ್ದು ನನ್ನ ಜನ್ಮ ಸಾರ್ಥಕವಾಯಿತು ಅಂತ ಹೇಳಿ ನಮಸ್ಕಾರ ಮಾಡಿ ಗುರುವೇ ನಮೋ ನಮೋ ಎಂದು ಪ್ರಭುದೇವರು ಬಸವಅಣ್ಣನವರ ಆಣತಿಯ ಮೇರೆಗೆ ಅವರ ಲಗ್ನವು ಶ್ರೀ ಶಾಲಿವಾಹನ ಶಕೆ ೧೦೮೬ ತಾರಾ ನಾಮ್ ಸಂವತ್ಸರ ವೈಶಾಖದಲಿ ಇಬ್ಬರು ಸಹ ಬಾಳ್ವೆಯನ್ನು ಮಾಡುತ್ತ ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸತಿ ಪತಿಯು ಒಂದಾಗಿ ಬಾಳ್ತ, ದೀನ ದಲಿತರ ದುಖಿಗಳ ಉದ್ದಾರಕ್ಕಾಗಿ ಅವತರಿಸಿದ ದಾನಮ್ಮನಿಗೆ ಮನೆಯಲ್ಲಿ ಉಳಿಯಲು ಮನಸ್ಸಾಗಲಿಲ್ಲ, ದೇಶ ಪರ್ಯಟತನಕ್ಕೆ ಇಬ್ಬರು ದಂಪತಿಗಳು ಹೊರಟು ನಿಂತರು.

ಅಂತೆಯೇ ಜಗದ ಉದ್ಧಾರಕ್ಕಾಗಿ ದಾನಮ್ಮ ಬಂದವಳು ಅನ್ನುವ ಕೀರ್ತಿ ಹಬ್ಬಲಾರಂಭಿಸಿತು.ನಂಬಿದ ಭಕ್ತರ ಕಷ್ಟಗಳ ನಿವಾರಿಸಿ, ಇಷ್ಟಾರ್ಥವನ್ನು ದಯಪಾಲಿಸುವ ಬಡವರ ಬಂಧುವಾದರು, ನಾನಾ ರೋಗ ರುಜಿನಿಗಳಿಗೆ ಒಳಗಾದ ಜನರ ಕಣ್ಣೀರು ಒರೆಸಿ ರೋಗದಿಂದ ಮುಕ್ತ ಮಾಡಿಸಿದರು. ಅಧರ್ಮದಲ್ಲಿ ಬಿದ್ದು ಒದ್ದಾಡುತ್ತಿದ್ದ ಜಗಕೆಲ್ಲ ಎಚ್ಚರಿಸಿದ ತಾಯಿ ಜಗದೀಶ್ವರಿ ಗುಡ್ಡಪುರ ದಾನಂಬೇ ಎಂದು ಜನರು ಸ್ಮರಿಸಲು ಪ್ರಾರಂಭಿಸಿದರು.

ದಾನಮ್ಮಳು ಬಸವ ಯುಗದ ಶರಣಿಯಾದರು ಅವರಲ್ಲಿ ಅದಾವುದೋ ದೈವ ಶಕ್ತಿ ತುಂಬಿತ್ತು ಹೀಗಾಗಿ ಅವರ ನುಡಿದ ಮಾತು ಹರಸಿದ ನುಡಿಗಳು ಸತ್ಯವಾಗತೊಡಗಿದವು ,ಅವರ ಕೊಟ್ಟ ದಾನಗಳು ಕರುಣಿಸಲಾರಂಭಿಸಿದವು. ದಾನಮ್ಮ ತಾಯಿಯು ದೇವಿ ಸ್ವರೂಪಿಯಾಗಿ ನಿಂತಳು.

ದಾನಮ್ಮ ತಾಯಿಯು ಬಸವ ಧರ್ಮದ ತತ್ವದ ತಳಹದಿಯ ಮೇಲೆ ನಿಂತ ಆಚಾರ ವಿಚಾರಗಳನ್ನು ಪ್ರಚಾರ ಮಾಡಹತ್ತಿದ್ದರು .ಜಂಗಮವೇ ಜಗತ್ಗುಜ್ಯ, ಜಂಗಮನೆ ಸದಾಶಿವ ,ಜಂಗಮನೆ ಲಿಂಗ , ಲಿಂಗವೇ ಜಂಗಮವೆಂದು ಜನರನ್ನು ಎಚ್ಚರಿಸುತ್ತಾ ನಡೆದರು. ಆಚಾರಮಯವಾಗ ಬೇಕೆನ್ನುವ ,ದಯೆ ಧರ್ಮದ ಮೂಲವಾಗಿ ಬಸವ ಧರ್ಮದ ದರ್ಶನ ಪ್ರಚಾರ ಮಾಡಲಾರಂಭಿಸಿದರು. ಪ್ರತಿಯೊಬ್ಬರಲ್ಲಿ ದೈವತ್ವದ ಆಂಶವಿದೆ. ನಮ್ಮಲ್ಲಿ ನಿರಂತರಗತವಾದ ದ್ಯೆವಿ ಶಕ್ತಿಯೇ ನಮ್ಮ ಧರ್ಮವಾಗಿದೆ ಎಂದು ತಾಯಿ ದಾನಮ್ಮ ಸಾರಿದರು.ಪ್ರಕೃತಿಯ ಹೊರಗೆ ಹಾಗು ಒಳಗೆ ಆಂತರಿಕ ಶಕ್ತಿಯ ನಿಯಂತ್ರಣದೊಂದಿಗೆ ಸಿದ್ಧ ತತ್ವಗಳನ್ನು ವ್ಯಕ್ತಗೊಳಿಸಲು ಸಾಧ್ಯ . ಇಲ್ಲದಿದ್ದರೆ ಬದುಕು ಬಂಧನದವಾಗುವುದು ಎಂದು ಸಾರಿದರು.

ಅವರ ಚರಿತ್ರೆಯಲ್ಲಿ ಅನೇಕ ಪವಾಡದ ಘಟನೆಗಳು ಬರ್ತಾವೆ. ಬಳ್ಳಾರಿ ಜಿಲ್ಲೆಯಲ್ಲಿ, ಅದವಾನದಲ್ಲಿ ,ಅಲ್ಲಂಪುರದಲ್ಲಿ, ರಾಮೇಶ್ವರದಲ್ಲಿ, ಶ್ರೀಶೈಲದಲ್ಲಿ ,ಮೈಸೂರು ಮಹಾರಾಜರಿಗೆ ಲಿಂಗ ದೀಕ್ಷೆಯನ್ನು ಕೊಟ್ಟದು, ಕಲ್ಲ ಬಸವನಿಗೆ ಕಬ್ಬು ತಿನಿಸಿದ ಮಹಿಮೆ, ಮನಗೂಳಿಯಲ್ಲಿ ಸತ್ತ ಶಿಶುವಿಗೆ ಜೀವನ ಕೊಟ್ಟರು, ರಾಮೇಶ್ವರದಲ್ಲಿ ಆಯಿದು ತಂದ ಕಲ್ಲುಗಳನ್ನು ರತ್ನ ಮುತ್ತುಗಳನ್ನಾಗಿ ರ್ಮಾಪಡಿಸಿದು,ಕಂಚಿಯ ಕಣಗಿನ ಮಹಾರಾಜರ ಕಣ್ಣು ತೆರೆಸಿದು,ಕಾಶಿಯಲ್ಲಿ ಮರಳು ರಾಶಿಯನ್ನು ಅನ್ನವನ್ನಾಗಿ ಮಾಡಿದರು, ಗಂಗಾ ನದಿಯನ್ನು ಕ್ಷೀರಸಾಗರವನ್ನಾಗಿ ಹರಿಸಿದರು, ರಾಣಿ ಚಾಮಲಾ ದೇವಿಯ ಹರಸಿದರು, ಅಷ್ಟೇ ಅಲ್ಲ ಬಹಮನಿ ಸುಲ್ತಾನನಿಗೆ ಭಾಗ್ಯದ ದೇವಿ ಯಾಗಿದ್ದರು ಅಂತ ಹೇಳಿಲಾಗುತ್ತದೆ .ಈ ಘಟನೆಗಳೆಲ್ಲವೂ ತುಂಬಾ ಆಶ್ಚರ್ಯವನ್ನು ಉಂಟು ಮಾಡುವಂತಹವುಆಗಿದ್ದರು…

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಶರಣರ ಪ್ರಚಾರ ಮಾಡುತ್ತ ಕೊನೆಗೆ ಮತ್ತೆ ಶಿವಯೋಗಿ ಸಿದ್ದರಾಮನ ದರ್ಶನಕ್ಕೆ ಇಬ್ಬರು ದಂಪತಿಗಳು ಹೋಗುತ್ತಾರೆ ಭಾರತದ ಪರ್ಯಾಟನ ‌ಮುಗಿಸಿ ಸಿದ್ಧರಾಮರ ಜೊತೆ ಕಲ್ಯಾಣದತ್ತ ನಡೆದಿರುತ್ತಾರೆ .

ಅಲ್ಲಿ ಕಲ್ಯಾಣದ ಕ್ರಾಂತಿ ಪ್ರಾರಂಭಗೊಂಡಾಗ ಶರಣರನ್ನು, ವಚನ ಸಾಹಿತ್ಯದ ಭಂಡಾರವನ್ನು ಸಿದ್ದರಾಮೇಶ್ವರರ ಸಹಿತವಾಗಿ ಗಣಾಚಾರವನ್ನು ಸ್ವೀಕರಿಸಿ ಕೈಯಲ್ಲಿ ಖಡ್ಗವನ್ನು ಹಿಡಿದು ಶರಣರನ್ನು ರಕ್ಷಿಸುತ್ತಾರೆ .
ಅಲ್ಲಿಂದ ಅಂತರಂಗದಲ್ಲಿ ತಾನು ಮಾಡಬೇಕಾದ ಕರ್ತವ್ಯ ಮುಗಿತು ಸೂಕ್ಷ್ಮ ದೇಹದಲ್ಲಿ ಆತ್ಮ
ಲೀನವಾಗುವದಾಗಿ ಸಿದ್ದರಾಮೇಶ್ವರರಿಗೆ ಅರುಹಿದರು . ಅನುಮತಿಯನ್ನು ಪಡೆದು ಗುಡ್ಡ ಪುರಕ್ಕೆ ಮರಳಿದರು .ಇಡೀ ಭಾರತ ದೇಶದ ತುಂಬೆಲ್ಲಿನೆಲಸಿದ ಭಕ್ತರನ್ನು ಕರೆ ಹೇಳಿದರು ..ಇಬ್ಬರು ದಂಪತಿಗಳು ಲಿಂಗ ಪೂಜೆಯನ್ನು ಮಾಡುತ್ತಾ ಧ್ಯಾನಸ್ತರಾಗಿ ಅಲ್ಲಿಯೇ ಕಲ್ಲಿನ ಮೂರ್ತಿಯಾದರು. ಅನ್ನುವ ಹೇಳಿಕೆ ಇದೆ.

ಹೀಗೆ ಶುದ್ಧ- ಸಿದ್ದಿ -ಪ್ರಸಿದ್ಧ -ಪ್ರಸಾದಿಯಾದ ಮಹಾಶರಣಿ ದಾನಂಬೆ -ವರದಾಂಬೆ -ಗುಡ್ಡಾಂಬೆ- ಗುಡ್ಡವ್ವ-ದಾನಮ್ಮ ದೇವಿಯು, ದಾಸೋಹ ಭಾವ ಶಿವಯೋಗ ಸಾಧನೆಯಾಯಿತು, ನಡೆದ್ದದೆಲ್ಲ ಬಸವ ಪಥವಾಯಿತು, ಜನರ ಜೀವನದಲ್ಲಿ ಕವಿದ ಕತ್ತಲೆಯ ಕಳೆಯುವ ಚಿತ್ಪ್ರಪ್ರಕಾಶದಂತೆ ಬೆಳಗಿದಳು . ಈಗಲು ಅವರ ಮಹಿಮೆಯ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತವೆ.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಅರ್ಚನೆ ,ಅಭಿಷೇಕ ,ಅನ್ನ ಸಂತರ್ಪಣೆಗಳು ನಡೆಯುತ್ತವೆ . ಇಲ್ಲಿ ಬಸವ ತತ್ವದ ಆಚರಣೆಗಳಿಂದ ದೂರಸರಿದು ಸಕಲ ಸದ್ ಭಕ್ತಾದಿಗಳು ದಾನಮ್ಮನನ್ನು ಲಕ್ಷ್ಮಿ ಸ್ವರೂಪಿಯಂತೆ ಪೂಜಿಸುತ್ತಾರೆ ,ಆರಾಧಿಸುತ್ತಾರೆ .ಕಾಯಿ ,ಕರ್ಪೂರ ಸೀರೆ- ಬಂಗಾರ ,ಮುತ್ತು ಬೆಳ್ಳಿ ಆಭರಣಗಳಿಂದ ಅವಳನ್ನು ಅಲಂಕರಿಸಿ ತಮ್ಮ ಹರಿಕೆಯನ್ನು ಪೂರೈಸುತ್ತಾರೆ . ಹೋಳಿಗೆ ಎಡಿಯನ್ನು ಮಾಡುತ್ತಾರೆ. ಅನೇಕ ಭಕ್ತರ ಇಷ್ಟಾನುಸಾರ ಹೋಮ ಯಾಗ ಯಜ್ಞಗಳು ನಡೆಯುತ್ತವೆ .ಅದು ಅವರವರ ಅನುಭವಕ್ಕೆ ಸಂಬಂಧಪಟ್ಟದು.
ಇಂಥ ಮಹಾನ್ ಬಸವಯೋಗದ ಶರಣಿಯು ನಮ್ಮ ಕಲ್ಯಾಣ ನಾಡಿನ ಸುಪುತ್ರ -ಮಹಾತಾಯಿ, ಅಲ್ಲಮ- ಬಸವ -ಸಿದ್ದರಾಮರ ಅನುಯಾಯಿ,ನಮ್ಮ ಕರುನಾಡ ನಾಡಿನ ಅನಘ್ನೇ ರತ್ನ.

Share This Article
Leave a comment

Leave a Reply

Your email address will not be published. Required fields are marked *