ಬಸವ ಕಲ್ಯಾಣ
ಕನ್ನೇರಿ ಸ್ವಾಮಿ ನೇತೃತ್ವದ ಜೂನ್ 28 ಸಮಾವೇಶಕ್ಕೆ ಅನುಮತಿ ನೀಡಲು ತಾಲ್ಲೂಕು ಆಡಳಿತ ನಿರಾಕರಿಸಿದೆ.
ಇದರಿಂದ ಹಿನ್ನಡೆಯಾದರೂ ಬಸವಕಲ್ಯಾಣ, ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ಅಧ್ಯಕ್ಷ ಗುಂಡುರೆಡ್ಡಿ ಕಮಲಾಪುರ ಸಮಾವೇಶ ಆಯೋಜಿಸುವ ಪ್ರಯತ್ನ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
“ಸಮಾವೇಶಕ್ಕೆ ಅನುಮತಿ ನಿರಾಕರಣೆ ಮಾಡಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡುತ್ತೇವೆ. ಮತ್ತೆ ಅನುಮತಿ ಪಡೆದು ಸಮಾವೇಶ ನಡೆಸಿಯೇ ನಡೆಸುತ್ತೇವೆ. ಕಾನೂನಿನ ಮೇಲೆ ನಮಗೆ ವಿಶ್ವಾಸವಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನಿಗದಿಯಂತೆ ಸಮಾವೇಶ ನಾವು ಮಾಡಿಯೇ ತೀರುತ್ತೇವೆ. ಕನ್ನೇರಿ ಸ್ವಾಮಿಗಳು ಬಂದೇ ಬರುತ್ತಾರೆ. ಸರ್ಕಾರ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಿಸುವುದು ತಪ್ಪು. ನಾವೇನು ಪಾಕಿಸ್ತಾನದವರೇ, ಕಾನೂನು ಹೋರಾಟ ಮಾಡುತ್ತೇವೆ,” ಎಂದು ಬಸವ ಮೀಡಿಯಾಕ್ಕೆ ಹೇಳಿದರು.
ಸರಕಾರ ಹಿಂದೂ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದರೂ ಹೋರಾಟ ಮುಂದುವರೆಯಲಿದೆ ಎಂದು ಬಸವ ಸಂಘಟನೆಗಳೂ ತಿಳಿಸಿವೆ.
