ಬಸವ ಶಕ್ತಿ ಗೂಗಲ್ ಮೀಟ್ ವಿಡಿಯೋ
ಬೆಂಗಳೂರು
ಮುಂದಿನ ವರ್ಷ ಲೋಕಾರ್ಪಣೆಯಾಗಲಿರುವ ಅನುಭವ ಮಂಟಪದ ನಿರ್ವಹಣೆಗೆ ಮುಂದೆ ಬರಲು ಬಸವ ಕಾರ್ಯಕರ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ಕರೆ ನೀಡಿದ್ದಾರೆ.
ಶನಿವಾರ ರಾತ್ರಿ ಬಸವ ರೇಡಿಯೋ ಗೂಗಲ್ ಮೀಟಿನಲ್ಲಿ ‘ಅನುಭವ ಮಂಟಪ ಮುಂದೇನು’ ವಿಷಯದ ಮೇಲೆ ಮಾತನಾಡಿದರು.
ಅಪಾರ ವೆಚ್ಚದಲ್ಲಿ ಸರಕಾರ ನಿರ್ಮಿಸುತ್ತಿರುವ ಅನುಭವ ಮಂಟಪವನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಅದನ್ನು ಬಸವಣ್ಣನವರ ಸೈದ್ಧಾಂತಿಕ ವಿರೋಧಿಗಳಿಂದ ರಕ್ಷಿಸಲು ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿರುವ ಬಸವ ಕಾರ್ಯಕರ್ತರು ಮುಂದೆ ಬಂದು ಹೆಸರು ಕೊಡಬೇಕು.
ಅನುಭವ ಮಂಟಪ ನಿರ್ವಹಣೆಗೆ ಒಂದು ಸಂಘಟನೆ ರೂಪಿಸಿಕೊಂಡು, ತಾಲೂಕು, ಜಿಲ್ಲಾ, ವಲಯಗಳ ಮಟ್ಟದಲ್ಲಿ ಕಾರ್ಯಕರ್ತರ ತಂಡ ರಚಿಸಿಕೊಂಡು ತಕ್ಷಣವೇ ಕೆಲಸ ಶುರು ಮಾಡಬೇಕು, ಎಂದು ಹೇಳಿದರು.
ಅನುಭವ ಮಂಟಪದ ಉದ್ದೇಶ
ಶಂಕರಾಚಾರ್ಯ, ರಾಮಾನುಜ, ಮದ್ವಾಚಾರ್ಯರ ಮೇಲೆ ಸರಕಾರ ನೂರಾರು ಕೋಟಿ ಖರ್ಚು ಮಾಡಿ ಗುಡಿ ಕಟ್ಟಿಲ್ಲ, ಆದರೆ ಅನುಭವ ಮಂಟಪ ಯಾಕೆ ಕಟ್ಟುತ್ತಿದೆ, ಎಂದು ಅರ್ಥ ಮಾಡಿಕೊಳ್ಳಬೇಕು.
ಪ್ರಜಾಪ್ರಭುತ್ವದ ಶಿಕ್ಷಣ ನೀಡುವುದು, ಜಾತ್ಯತೀತ ಸಿದ್ದಾಂತವನ್ನು ಜಾರಿಗೊಳಿಸುವುದು, ಅನುಭವ ಮಂಟಪದ ಉದ್ದೇಶ.
ಪಾರ್ಲಿಮೆಂಟಿನಲ್ಲಿಯೂ ಇದೇ ಉದ್ದೇಶದಿಂದ ಬಸವಣ್ಣನವರ ಮೂರ್ತಿ ಇಡಲಾಗಿದೆ. ಅಲ್ಲಿ ಬೇರೆ ಯಾವ ಧರ್ಮದ ಮೂರ್ತಿಯೂ ಇಲ್ಲ, ಇದರ ಬಗ್ಗೆ ನಾವು ವಿಚಾರ ಮಾಡಬೇಕು
ಈ ದೀರ್ಘಕಾಲೀನ ಗಂಭೀರ ಸದ್ದುದ್ದೇಶದಿಂದ ಸರಕಾರ ಇಷ್ಟೊಂದು ಹಣ ಖರ್ಚು ಮಾಡುತ್ತಿದೆ. ಈ ಕಾರ್ಯದಲ್ಲಿ ಶರಣ ತತ್ವಗಳನ್ನ, ವಚನಗಳನ್ನ ಹೇಗೆ ಬಳಸಿಕೊಳ್ಳಬೇಕು, ಸಮಾಜವನ್ನು ಹೇಗೆ ತಿದ್ದಬೇಕು ಎಂಬುದರ ಬಗ್ಗೆ ಚಿಂತನೆಯಾಗಿ ಕಾರ್ಯರೂಪಕ್ಕೆ ತರಬೇಕು.
ಅನುಭವ ಮಂಟಪ ಸ್ಥಾವರವಾಗಿ ಉಳಿಯಬಾರದು, ಶರಣ ತತ್ವ ಪ್ರಚಾರ, ಪ್ರಸಾರ ಮಾಡುವ ಜಂಗಮ ಕೇಂದ್ರವಾಗಬೇಕು.
ಸಿಖ್ಖರು ಸುವರ್ಣ ಮಂದಿರ ನಿರ್ವಹಣೆ ಮಾಡುವಂತೆ ಬಸವ ಅನುಯಾಯಿಗಳು ಅನುಭವ ಮಂಟಪ ನಿರ್ವಹಿಸಬೇಕು.

ಸಡಿಲ ಬಿಟ್ಟರೆ ಧ್ವಜ ಹಾಕುತ್ತಾರೆ
ಅನುಭವ ಮಂಟಪ ಯಾವುದೇ ಪಕ್ಷದ ಅಥವಾ ಸಂಘಟನೆಯ ಸಿದ್ದಾಂತ ಪೋಷಿಸುವ ಕೇಂದ್ರವಾಗದಂತೆ ನೋಡಿಕೊಳ್ಳಬೇಕು.
ಅನುಭವ ಮಂಟಪದ ನಿರ್ವಹಣೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆಯದಂತೆ ನೋಡಿಕೊಳ್ಳಬೇಕು.
ಈ ವಿಷಯದಲ್ಲಿ ಸಡಿಲ ಬಿಟ್ಟರೆ ರಾಜಕೀಯ ಶಕ್ತಿಯಿರುವ ಕೆಲವು ಸಂಘಟನೆಗಳ ತರಬೇತಿ ಕೇಂದ್ರವಾಗಿ ಬದಲಾಗುತ್ತದೆ. ಅವರು ಧ್ವಜ ಹಾಕುತ್ತಾರೆ. ಈ ಬಗ್ಗೆ ಹುನ್ನಾರಗಳು ಆಗಲೇ ಶುರುವಾಗಿವೆ. ಇದರ ಬಗ್ಗೆ ಮತ್ತೊಮ್ಮೆ ಸಾರ್ವಜನಿಕವಾಗಿ ವಿವರಗಳನ್ನು ತಿಳಿಸ್ತೀನಿ, ಎಂದು ಜಾಮದಾರ್ ಹೇಳಿದರು.
ಈ ಹುನ್ನಾರಗಳು ಈಗಲೇ ಶುರವಾಗಿದೆ. 2028 ಚುನಾವಣೆಯ ಮುಂಚೆ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಬಸವ ಭಾರತ ಉತ್ಸವ ಅಂತ ಲಕ್ಷ ಲಕ್ಷ ಜನರನ್ನ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಅದು ಯಶಸ್ವಿಯಾದರೆ ಅನುಭವ ಮಂಟಪ ಅವರ ಕೇಂದ್ರವಾಗಿ ಪರಿವರ್ತನೆಯಾಗುತ್ತದೆ.
ಅನುಭವ ಮಂಟಪದ ಶಂಕುಸ್ಥಾಪನೆ ಮಾಡುವಾಗ ಪತ್ರಿಕೆಗಳಲ್ಲಿ ‘ಸನಾತನ ಧರ್ಮದ ಪುನರುತ್ತಾನದ ಮೊದಲ ಹೆಜ್ಜೆ’ ಎಂದು ಯಡಿಯೂರಪ್ಪ ಸರಕಾರ ಜಾಹಿರಾತು ಹಾಕಿತ್ತು. ನಾವು ಅದನ್ನ ಪ್ರತಿಭಟನೆ ಮಾಡಿದ್ವಿ.
ಆದರೆ ಈಗ ಬಸವ ಅನುಯಾಯಿಗಳಲ್ಲಿ ಜಾಗೃತಿಯಾಗುತ್ತಿದೆ, ಬಸವ ಕಲ್ಯಾಣದಲ್ಲಿ ಕನ್ನೇರಿ ಸ್ವಾಮಿ ತಡೆಯುವ ಪ್ರಯತ್ನ ಚೆನ್ನಾಗಿ ನಡೆಯುತ್ತಿದೆ. ಅದನ್ನು ಮುಂದುವರೆಸಬೇಕು.
ಅನುಭವ ಮಂಟಪ ಅನುಭವ ಮಂಟಪವಾಗಿಯೇ ಉಳಿಯಬೇಕು. ಶರಣತತ್ವಗಳ ಪ್ರಚಾರ ಕೇಂದ್ರವಾಗಬೇಕು. ಸಂವಿಧಾನದ ಮೂಲ ಬಿಂದುಗಳ ಪ್ರಚಾರ ಕೇಂದ್ರವಾಗಬೇಕು. ಬಸವತತ್ವವೆಂದರೆ ಸಂವಿಧಾನದ ತತ್ವ.
ಇದು ದಾರಿ ತಪ್ಪದಂತೆ ನೋಡಿಕೊಳ್ಳುವುದು ಕಾರ್ಯಕರ್ತರ ಜವಾಬ್ದಾರಿ. ಈ ವಿಷಯದಲ್ಲಿ ಮಠಾಧೀಶರು ಎಚ್ಛೆತ್ತುಕೊಳ್ಳುವ ಹಾಗೆ ನೋಡಿಕೊಳ್ಳಬೇಕು.
ಸಂಘಟನೆ ಅಗತ್ಯವಿದೆ
ಅನುಭವ ನಿರ್ವಹಣೆಗೆ ಸಂಘಟನೆಯ ಅಗತ್ಯವಿದೆ. ಸಕ್ರಿಯವಾಗಿ, ಗಂಭೀರವಾಗಿ ಭಾಗವಹಿಸಲು ಸಿದ್ಧರಿರುವವರು
ಹೆಸರು ಕೊಡಿ. ನಿಮ್ಮ ಜಿಲ್ಲೆ, ಊರುಗಳಲ್ಲಿ ಕೆಲಸ ಚಾಲೂ ಮಾಡಿ. ಮೊದಲು ಮಠಾಧೀಶರ ಬಳಿ ಹೋಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ಮನವರಿಕೆ ಮಾಡಿಕೊಡಿ.
ಅನುಭವ ಮಂಟಪ ನಿರ್ವಹಣೆಗೆ ಬೇರೆ ಬೇರೆ ಸಮಿತಿಗಳ ರಚನೆಯಾಗಬೇಕು. ಉದಾಹರಣೆಗೆ ದಿನನಿತ್ಯ ಯಾವ ಯಾವ ಕಾರ್ಯಕ್ರಮಗಳು ನಡೆಯಬೇಕು ಎಂದು ನಿರ್ಧರಿಸಲು ಒಂದು ಸಮಿತಿಯಾಗಬೇಕು.
ಬರುವ ಲಕ್ಷಾಂತರ ಜನಕ್ಕೆ ನಿರಂತರ ದಾಸೋಹ ನಡೆಯಬೇಕು. ಅಡುಗೆ ಮಾಡಲು, ಬಡಿಸಲು, ಸ್ವಚ್ಛ ಮಾಡಲು, ದುಡ್ಡು ಸಂಗ್ರಹಿಸಲು ಎಲ್ಲರೂ ಕೈ ಜೋಡಿಸಬೇಕು.
ಸಿಖ್ಖರ ಗುರುದ್ವಾರಗಳಲ್ಲಿ ಕೆಲಸ ನಡೆಯುವಂತೆ ಅನುಭವ ಮಂಟಪದಲ್ಲಿಯೂ ನಡೆಯಬೇಕು. ಅಲ್ಲಿ ಅನ್ನ ದಾಸೋಹ, ಕರ ಸೇವಾ ಭಕ್ತರೇ ಮಾಡುತ್ತಾರೆ.
ಇದನ್ನೆಲ್ಲಾ ಮಾಡುವ ಶಕ್ತಿಯಿದೆ. ಮಠಾಧೀಶರು, ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳಿಗೆ ಹಣ ನೀಡುವ ಶಕ್ತಿ ಮನಸ್ಸಿದೆ. ಇದನ್ನೆಲ್ಲಾ ಕಾರ್ಯರೂಪಕ್ಕೆ ತರುವ ಪ್ರಯತ್ನವಾಗಬೇಕು ಅಷ್ಟೇ.
ಲಿಂಗಾಯತರು ಸಾಯಿಬಾಬ ಮಂದಿರಕ್ಕೆ ಹೋಗಿ ದುಡಿಯುತ್ತಾರೆ. ಇಲ್ಲಿ ಯಾಕೆ ಮಾಡುವುದಿಲ್ಲ ಅಂದರೆ ಅಂತಹ ವಾತಾವರಣವಿಲ್ಲ. ಆ ವಾತಾವರಣ ನಾವು ಸೃಷ್ಟಿಸಬೇಕು.
ಬಸವ ರೇಡಿಯೋದ ಎಚ್ ಎಂ ಸೋಮಶೇಖರಪ್ಪ ಕಾರ್ಯಕ್ರಮ ನಿರ್ವಹಿಸಿದರು, ಅಪರ್ಣ ವಾಲಿ ನಿರೂಪಿಸಿದರು.

ನಾವೆಲ್ಲ ಅವರ ಮಾರ್ಗದರ್ಶನ ದಲ್ಲಿ ನಡೆದು ಲಿಂಗಾಯತ ಉಳಿಸೋಣ 💐👏🏻👏🏻
We have work like Gurudwar
ಈಶ್ವರ ಖಂಡ್ರೆ ಅಂತವರು ಇದರಲ್ಲಿ ಮೂಗು ತೂರಿಸಲು ಬಿಡಬಾರದು.. ಜರ ಜಾಗ ಕೊಟ್ಟರೆ ವೀರಶೈವ ಮಹಾಸಭಾದವರನ್ನ ತಂದು ಕೂಡಿಸತಾರೆ ? ರೇಣುಕಾಚಾರ್ಯ ತಂದು ಕೂಡಿಸತಾರೆ..
ಇದರ ಬಗ್ಗೆ ಮೊದಲೆ ಜಾಗ್ರತೆ ವಹಿಸಬೇಕು..
ರಾಜಕಾರಣಿಗಳಿಗೆ ಪ್ರವೇಶ ಕೊಡಬಾರದು…
ಒಳ್ಳೆಯ ವ್ಯಕ್ತಿಗಳನ್ನು ಸಮಾಜಿಕವಾಗಿ ವಿಚಾರಮಾಡುವರನ್ನ ಬಸವ ತತ್ವವನ್ನು ಗಟ್ಟಿಯಾಗಿ ಅರ್ಥವನ್ನು ಬಸವೇಶ್ವರ ಚಿಂತೆ ಮಾಡುವವರನ್ನು ವಚನ ಸಾಹಿತ್ಯವನ್ನು ತಿಳಿದವರನ್ನು ನೇಮಕ ಮಾಡುವರು ಒಳ್ಳೆಯ ಉತ್ತಮ ಎನ್ನುವುದು ನನ್ನ ವಿಚಾರ.. 🙏🙏
ಒಳ್ಳೆಯ ಸಂದೇಶ ಸರ್
ನಿನ್ನೆ ದಿನ JLM ನ ಅಧ್ಯಕ್ಷರು ಹಾಗೂ ಬಸವ ಧರ್ಮದ ಬಗ್ಗೆ ಅಪಾರ ಜ್ಞಾನವುಳ್ಳ ಶರಣ ಶ್ರೀ ಶಿವಾನಂದ ಜಾಮಾದರ ಶರಣರೊಂದಿಗೆ ಗೂಗಲ್ ಮೀಟನಲ್ಲಿ ಸಾಮಾನ್ಯರಾದ ನಮ್ಮಂತವರಿಗೆ ವೇದಿಕೆ ಕಲ್ಲಿಸಿದ ಬಸವಾ ಮಿಡಿಯಾ ಬಳಗಕ್ಕೆ ಧನ್ಯವಾದಗಳು .
ಶರಣರಾದ ಜಾಮದಾರ ವರು ಯೋಚಿಸಿ ಯೋಜಿಸಿದಂತೆ ಅನುಭವ ಮಂಟಪ ವೆಂಬುದು ಶರಣರ ವಚನ ಧರ್ಮವನ್ನು
” ಕೆಟ್ಮ ಕ್ರಿಮಿಗಳು” ಒಳ ನುಸುಳದಂತೆ ಮೂಲದೊಂದಿಗೆ ಜಗತ್ತಿಗೆ ಗೊತ್ತು ಪಡಿಸಲು ನಾವೆಲ್ಲ ಕಟಿಬದ್ದರಾಗುತ್ತೇವೆ.
ನಿನ್ನೆ ಭಾಗವಹಿಸಿದ ಎಲ್ಲಾ ಶರಣರಿಗೆ ಧನ್ಯವಾದಗಳು.
ನಿನ್ನೆ ಭಾಗವಹಿಸಿದವರೆಲ್ಲರೂ ಹೆಚ್ಚಿನ ಬಸವ ಪ್ರಜ್ಞೆ ಬಯಸಿದರೇ
ಜಾಮದಾರವರ
ವಚನ ದರ್ಶನ ” ಸತ್ಯ vs ಮಿತ್ಯ”
ಹಾಗೂ ಜೆ ಎಸ್ ಪಾಟೀಲರ್ “ಲಿಂಗಾಯತ ಮುಖಾಮುಖಿ” ಇತ್ಯಾದಿ ಪುಸ್ತಕಗಳನ್ನು ಓದಿಕೊಳ್ಳಲು ಹಾಗೂ ಲಿಂಗಾಯತ ಧರ್ಮದ ಬಗ್ಗೆ ಅರಿವಿನ ಕೊರತೆಯುಳ್ಳವರಿಗೆ ಓದಿಸಲು ಕಳಕಳಿಯ ಮನವಿ.
ಶರಣು ಶರಣಾರ್ಥಿಗಳು
ಇದನ್ನು ವಚನ ಸಾಹಿತ್ಯ ವಿಶ್ವವಿದ್ಯಾನಿಲಯವನ್ನಾಗಿ ಬೆಳೆಸಬೇಕಾಗಿದೆ.
Sir, one has to lead the Basava movement so i am always with you sir. Lord Basava bless you. Sharnu sheranarthi. 🙏
Sharanu Sharanarthi
ಸರ್ಕಾರದಿಂದ ನಿರ್ಮಿಸುತ್ತಿರುವ ಅನುಭವ ಮಂಟಪ ಯಾರೊಬ್ಬರ ಸ್ವತ್ತಲ್ಲ ಎಲ್ಲರಿಗೂ ಸಮಾನವಾದ ಅವಕಾಶವಿರಬೇಕು ಅಂದಿನ ಅನುಭವ ಮಂಟಪ ಎಲ್ಲಾ ಜಾತಿ ಜನಾಂಗದ ವರಿಗೂ ಅವಕಾಶವಿತ್ತು
ರಾಜಕೀಯ ಹಿತಾಶಕ್ತಿಗೆ ಅಲ್ಲಿ ಅವಕಾಶವಿರದಂತೆ ನೋಡಿಕೊಳ್ಳಬೇಕು. ಈಗಾಗಲೇ ಅನುಭವ ಮಂಟಪದ ಬೖಲಾ ತಯಾರಾಗಿರಬೇಕು. ಅದನ್ನು ಬಸವ ಸಂಘಟನೆಗಳ ಪ್ರಾಜ್ಞರು ಪರಿಶೀಲಿಸಿ ತ್ರಿಕಾಲದಲ್ಲಿ ಅವು ಅನ್ವಯವಾಗುವಂತೆ ಮತ್ತೊಮ್ಮೆ ಪರಿಸ್ಕರಿಸಬೇಕು!
ಇಲ್ಲಿ ಶರಣರ ವಚನ ಸಾಹಿತ್ಯದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಮೂಲಕ ಅವರೆಲ್ಲರ ಕನಸಾದ ಜಾತಿ ವರ್ಗ ವರ್ಣರಹಿತ, ಧರ್ಮ ಸಹಿತ, ಸತ್ಯ ಸಮತಾ ಸಾಮ್ರಾಜ್ಯವನ್ನು ನಾವೆಲ್ಲರೂ ಕೂಡಿಕೊಂಡು ಕಟ್ಟಬೇಕಾಗಿದೆ.
We are ready to work with jlm
🙏ಆತ್ಮಿಯ ಪೂಜ್ಯರಲ್ಲಿ🙏ಎಲ್ಪ್ತಶರಣರಲ್ಲಿ ಶರಣು ಶರಣಾರ್ಥಿ ಗಳು ಒಳ್ಳೆಯ ನಂಬುಗೆಯಿಂದ ಭಾವ ಭಕ್ತಿ ಶ್ರಧೆಯಿಂದ ಬಸವ ವಚನ ಸುಧೆ ಬೇಳಸಿಧ್ಧ್ ಶರಣರನಾಡವಾದ ಬಸವ ಕಲ್ಯಾಣದ ಅನುಭವ ಮಟಂಪದ ಕಟ್ಟಡಕಾರ್ಯ ಮುಗಿವ ಹಂತ ಹಂತ ನನ್ನ ಸೇವಾ ಅವಕಾಸ ಒದಗಿದ್ದ ಪೂಜ್ಯ ಲಿಂಗೖಕ್ಯ ಚನ್ನಬಸವ ಪಟ್ಟದೆವವ ಸನ್ನಿಧಾನದಲ್ಲಿ ಶರಣರಾದ ವಿ ಸಿದ್ದರಾಮಣ್ಣಾ ಹಾಗು ಗುರುನಾಥ ಗಡ್ಡೆಅವರು ಸೇವಾ ಭಾವದಲ್ಲಿ🙏 ಗಂದಿಗುಡೆ, ಗುರುಪಾದಪ್ಪಾಅವರು ಆಗಾಗ ವಿಕ್ಷಣೆ ಮಾಡಲು ಶರಣಿಯರಾದ ಜಯದೇವಿ ತಾಯಿ ಲಿಗಾಡೆ ಅಮ್ಮನವರು ಬಿ. ಡಿ ಜತ್ತಿ ಅವರ ಬಳಗ ದವರು ವಿಶ್ವಾನಾಥ ಮುದ್ನಾಳ ಹಾಗು ಕರ್ನಾಟಕ ರಾಜ್ಯದ ಹೆಸರಾಂತ ಸನ್ಮಾನ ಲಿಂಗೖಕ್ಯರಾದ ಶರಣರಾದ ಭಿಮಣ್ಣಾ ಖಂಡ್ರೆ ಮಾಜಿ. ಮಂತ್ರಿ ಗಳು ಶಾಷಕರು ಮತು ಶ್ರೀ ಬಸವರಾಜ ತಂಬಾಕೆ ತಾಳಮಂಡಗಿ ಗುರುಗಳಾದ ಮಾದಪ್ಪಾ ಮಿಶೆ ಅವರುಗಳು ಹೀಗೆ 🙏ಅನೇಕ ಮುತಾಂದ ಸೇವಾ ಮಾಡುವರು ಶಿಷ್ಯರು ಅವರ ಎಲ್ಲರ ಜ್ಯೋತೇಯಲ್ಲಿ ನನ್ನ ಗೆ ಸಹ ಆ ಕಾಲ ದಲ್ವಿ ಶಾರರಿಕ ಪರಿಶ್ರಮ ಕಾಯಕ ಮಾಡಿದ ವರ್ಷ1981🙏ಸಮಯದ ಅವಕಾಶ ಸಿಕಿದು ನನ್ನ ಸುದೃವ ನಾನು ಹೆಮ್ಮೆಯಿಂದ ಎಲರಲ್ಲಿ ಮಾಹಿತಿ ಗಾಗಿ ಹಂಚಿಕೊಳ್ಳುತೆನೆ. ಈ ವಿಷಯ ಪುಜ್ಯ ಗುರುಗಳಾದ ಅನುಭವ ಮಂಟಂಪ ಅದ್ಯಕ್ಷರು ಬಸವಲಿಂಗ ಪಟದೇವರು ಸನ್ನಿಧಿಯ ಮಾಹಿತಿ– -:ಯ ಲಿಂಗ ಅನುಭವ ತರುಬಯಸುವೆ. ಪ್ರತಿ ತಾಲುಕಿನ ಸಮಿತಿ ರಚನೆ ಮಾಡುವ ಭಹಳ ಪ್ಪ್ರಮುಖ ಸಂಗಟನೆ ಬಹಳ ದೊಡ್ಡ 🙏ಕಾರ್ಯ ಕರ್ತವ. ರುಪಕ್ಕೆ ಬರುತ್ತದೆ. ನಾನು ಶ್ರಿ ಶಿವಲಿಂಗಯ್ಯಾ ಸ್ವಾಮಿ ಭಾಲ್ಕಿ. ಶರಣಧರ್ಮ ಬಸವ ತತ್ವ ಬಗ್ಗೆ 🙏ಸ್ವಾಭಿಮಾನ ಇದರಲ್ಲಿ ಬೆಳದಿದೆನೆ …