‘ಬಸವಕಲ್ಯಾಣದ ಪುನರುಜ್ಜೀವನದ ರೂವಾರಿ ಬಾಬಾಸಾಹೇಬ ವಾರದ’

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ವಿಜಯೋತ್ಸವ  

ಬಸವಕಲ್ಯಾಣ :

ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ಆದರ್ಶಗಳನ್ನು ಸಾರುವ ಈ ನೆಲದ ಸಾಂಸ್ಕೃತಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಬಾಬಾಸಾಹೇಬ ವಾರದ ಅವರ ಕೊಡುಗೆ ಮಹತ್ವದ್ದು ಎಂದು ಕಲಬುರಗಿ ಸಿಯುಕೆ ಶಾಸ್ತ್ರೀಯ ಕನ್ನಡ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ. ಬಿ.ಬಿ. ಪೂಜಾರ ಹೇಳಿದರು.

ಅವರು ಅಂರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಎಂಟನೇ ದಿನದ ಕಾರ್ಯಕ್ರಮದ ಬಸವಕಲ್ಯಾಣದ ಪುನರುಜ್ಜೀವನದ ರೂವಾರಿ ಬಾಬಾಸಾಹೇಬ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಸೋಲಪುರದಲ್ಲಿ ಲಿಂಗಾಯತ ಸಮಾಜ ಉಳಿವಿನಲ್ಲಿ ಅವರ ಅತಿ ಕೊಡುಗೆಯಿದೆ. ಅತ್ಯಂತ ಶ್ರೀಮಂತ ಕುಟುಂಬದವರಾದರು ಸುಖ ಕ್ಷಣಿಕ ಎಂದು ತಿಳಿದು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಸುಮಾರು ೧೪೦ ಶರಣ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಲ್ಯಾಣಕ್ಕೆ ಬಸವಕಲ್ಯಾಣ ಎಂದು ಹೆಸರಿಟ್ಟಿದಾರೆ. ಇದರ ಅಭಿವೃದ್ಧಿಗಾಗಿ ಸುಮಾರು ೪೭ ಯೋಜನೆಗಳನ್ನು ರೂಪಿಸಿದರು ಎಂದರು.

ಡಾ. ನೀಲಾಂಬಿಕಾ ಶೇರಿಕಾರ ಅನುಭಾವ ನೀಡಿ, ಬಸವಣ್ಣನವರಿಂದ ಲಿಂಗಾಯತ ಧರ್ಮ, ಅನುಭವ ಮಂಟಪ, ಪರುಷಕಟ್ಟೆ ಹೊರಬಂದವು. ಆದರೆ ಇನ್ನೊಬ್ಬರ ಪಾಲಿಗೆ ಹೋಗುತ್ತಿರುವುದು ದುರಂತ. ದೇಶದ ೧೨ ಲಿಂಗಾಯತ ರತ್ನರಲ್ಲಿ ಬಾಬಾಸಾಹೇಬ ವಾರದ ಒಬ್ಬರು. ಅನುಭವ ಮಂಟಪವೇ ಗುರು, ಮಹಾಮನೆಯೇ ಲಿಂಗ, ಪರುಷಕಟ್ಟೆ ಜಂಗಮವಾಗಿತ್ತು. ಜಗತ್ತಿನಲ್ಲಿ ಆಗದ ಕ್ರಾಂತಿ ಕಲ್ಯಾಣದಲ್ಲಿ ನಡೆದದ್ದು, ಅದಕ್ಕಾಗಿ ಗೌರವ ಪಡಬೇಕು. ವಚನ ಸಾಹಿತ್ಯ ಮುಂದಿನ ಪೀಳಿಗೆ ಹೋದರೆ ನಮಗೆ ಉಳಿಗಾಲವಿಲ್ಲ ಎಂದು ವಚನ ಸಾಹಿತ್ಯ ಅಳಿಸಲು ಪ್ರಯತ್ನಿಸಿದರು.

೧೯೪೭ರಲ್ಲಿ ಬಸವಕಲ್ಯಾಣಕ್ಕೆ ಬಂದು ಶರಣ ಸ್ಮಾರಕಗಳ ರಕ್ಷಣೆಗಾಗಿ ೧೯೪೮ ರಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಹುಟ್ಟು ಹಾಕಿ ಮೊದಲು ಬಸವ ಜಂಯಂತಿ ಆರಂಭಿಸಿದರು. ಅದಕ್ಕೆ ಭಕ್ತಿ, ಜ್ಞಾನ, ಕ್ರಿಯೇಗಳು ಭದ್ರ ಬುನಾದಿಯಾಗಿದ್ದವು.

ಕಲ್ಯಾಣಕ್ಕೆ  ತಾಲೂಕಾ ಮಾಡಿದವರು. ಬಸವಕಲ್ಯಾಣದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಇವರ ಸ್ಮಾರಕ ನಿರ್ಮಾಣವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ ಡಾ. ಸೋಮನಾಥ ಯಾಳವಾರ ಮಾತನಾಡಿ, ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮದ ಮೂಲಕ ಬಸವಕಲ್ಯಾಣಕ್ಕೆ ಹೊಸತನವನ್ನು ತಂದ ಕೀರ್ತಿ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರಿಗೆ ಸಲ್ಲುತ್ತದೆ. ಇಡೀ ಕರ್ನಾಟಕದ ಜನತೆ ಕಲ್ಯಾಣದ ಕಡೆ ನೋಡುವಂತೆ ಮಾಡಿದ್ದಾರೆ. ಕಲ್ಯಾಣಕ್ಕಾಗಿ ದುಡಿದ ಮಹನೀಯರ ನೆನೆಸುವಂತಹ ಕಾರ್ಯ ನಿರಂತರ ನಡೆದು ಮುಂದಿನ ಪೀಳಿಗೆಗೆ ಮುಟ್ಟಿಸಬೇಕಾಗಿದೆ ಎಂದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ, ಮಾತನಾಡಿ, ಬಾಬಾಸಾಹೇಬ ವಾರದ ಅವರು ಬಸವಕಲ್ಯಾಣದ ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಶ್ರಮಿಸಿದ ಪ್ರಮುಖ ವ್ಯಕ್ತಿ ಎಂದು ನುಡಿದರು.

ಸಾನಿಧ್ಯ ವಹಿಸಿದ ಪೂಜ್ಯ ಗಾಯತ್ರಿತಾಯಿ ಆಶಿರ್ವಚನ ನೀಡಿದರು. ಪೂಜ್ಯ ಗಂಗಾಂಧರ ದೇವರು ಮಾತನಾಡಿದರು. ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ.ಎಸ್. ಭುರಾಳೆ, ಹುಮನಾಬಾದ ಬಸವತೀರ್ಥ ವಿದ್ಯಾಪೀಠದ ಅಧ್ಯಕ್ಷ ಕಂಟೆಪ್ಪ ದಾನಾ, ಉದ್ಯಮಿ ಗುರುಪಾದಪ್ಪ ಪಾಟೀಲ, ವಿಜಯಕುಮಾರ ಕುಮಸಿ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಅಕ್ಕಣ್ಣ, ಧುಮ್ಮನೂಸೂರ ಬಸವ ಸೇವಾ ಪ್ರತಿಷ್ಠಾನದ ಬಾಬುರಾವ ನಿಂಬೂರ, ಶ್ರೀಕಾಂತ ಪಾಟೀಲ, ಚಿಟ್ಟಗುಪ್ಪಾ ಬಸವ ಸೇವಾ ಪ್ರತಿಷ್ಠಾನದ ರಮೇಶ ಪಾರಾ, ಕರುಣಾ ಸಲಗರ, ಸರೋಜಿನಿ ಕಲ್ಯಾಣಕರ್ ಪ್ರಮುಖರಾದ ನಾಗರಾಜ ಶೇರಿಕಾರ, ರಾಜಮತಿ ಭುರಾಳೆ, ಸುಭಾಷ ಬಾವಗೆ, ಗುರುಪಾದಪ್ಪ ಖರೋಣಿ, ಲೋಕೇಶ ಮೋಳಕೇರಿ, ನಾಗಪ್ಪಾ ಚಾಮಾಲೆ ಉಪಸ್ಥಿತರಿದ್ದರು.

ಪ್ರೊ. ಮೀನಾಕ್ಷಿ ಬಿರಾದಾದ ಸ್ವಾಗತಿಸಿದರೆ, ರೇಖಾ ಗುದಗೆ ನಿರೂಪಿಸಿದರು. ಬನಶಂಕರಿ ಭಜನಾ ಮಂಡಳಿಯಿಂದ ವಚನ ಭಜನೆ, ತರಂಗಿಣಿ ಮಹಾಶಕ್ತಿಕೂಟದವರಿಂದ ಜನಪದ ನೃತ್ಯ, ಮಮತಾ ಭೂಸೆ ಮತ್ತು ಸುಮಿತ್ರಾ ಡಾವಣಗಾಂವೆ ಅವರಿಂವ ವಚನ ಉಗ್ಘಡನೆ ನಡೆಯಿತು. ಮಲ್ಲಿಕಾರ್ಜುನ ಕುಮಸಿ ಕವನ ವಾಚಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *