ಬಸವನಬಾಗೇವಾಡಿ:
ಪಟ್ಟಣದ ಬಸವೇಶ್ವರ (ಮೂಲನಂದೀಶ್ವರ) ಜಾತ್ರೆ ಅಂಗವಾಗಿ ದಾಸೋಹಕ್ಕೆ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳ ಬುಟ್ಟಿಗಳನ್ನು ಶನಿವಾರ ಸಂಜೆ ಮೆರವಣಿಗೆ ಮೂಲಕ ದೇವಸ್ಥಾನದ ದಾಸೋಹ ಭವನಕ್ಕೆ ತಲುಪಿಸಿದರು.
ಸ್ಥಳೀಯ ವಿರಕ್ತಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ರೊಟ್ಟಿಯ ಬುಟ್ಟಿಗಳಿಗೆ ಸಿದ್ಧಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ನಂತರ ಮಹಿಳೆಯರು ರೊಟ್ಟಿಯ ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡು ಬಸವಜನ್ಮ ಸ್ಮಾರಕ, ಪಲ್ಲೇದ ಕಟ್ಟಿ, ಅಗಸಿ, ಬಸವೇಶ್ವರ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳಿದರು.
ಪಟ್ಟಣದ ಮಹಿಳೆಯರು ಐದು ಸಾವಿರಕ್ಕಿಂತ ಹೆಚ್ಚು ರೊಟ್ಟಿಗಳನ್ನು ಹಾಗೂ ತಾಳಿಕೋಟೆ ತಾಲ್ಲೂಕಿನ ಹಗರಗುಂಡ ಎಲ್.ಟಿ ಯ ಸುರೇಶ ರಾಠೋಡ ಅವರು ಟ್ರ್ಯಾಕ್ಟರ ಮೂಲಕ ಎರಡು ಸಾವಿರ ರೊಟ್ಟಿಗಳನ್ನು ದಾಸೋಹ ಭವನಕ್ಕೆ ತಲುಪಿಸಿದರು.

ಜಾತ್ರೆಗೆ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ನಿರಂತರವಾಗಿ ದಾಸೋಹ ನಡೆಯುತ್ತದೆ. ಪಟ್ಟಣದ ವಿವಿಧ ಬಡಾವಣೆಗಳ ಮಹಿಳೆಯರು ತಮ್ಮ ಮನೆಯಲ್ಲಿ ಮಾಡಿದ ರೊಟ್ಟಿಗಳನ್ನು ದಾಸೋಹಕ್ಕೆ ನೀಡುತ್ತಿರುವುದು ವಿಶೇಷ. ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಲಿದೆ. ಜಾತ್ರೆಯ ಮೆರಗನ್ನು ಹೆಚ್ಚಿಸಲಿದೆ ಎಂದು ಶ್ರೀಗಳು ತಿಳಿಸಿದರು.

ಮೆರವಣಿಗೆಯಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಅನಿಲ ರೊಟ್ಟಿ ಶೇಖರ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೇಕಾರ, , ಬಾಬುಗೌಡ ಪಾಟೀಲ, ಶ್ರೀಕಾಂತ ಪಟ್ಡಣಶೆಟ್ಟಿ, ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ರಾಯಣ್ಣ ಮಸಬಿನಾಳ, ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರಶೇಖರಗೌಡ ಪಾಟೀಲ, ಎಂ.ಬಿ.ತೋಟದ, ಪ್ತಭಾಕರ ಖೇಡದ, ಕೊಟ್ರೆಶಿ ಹೆಗಡ್ಯಾಳ, ಮಹಾದೇವಿ ಬಿರಾದಾರ, ಲಲಿತಾ ಗಬ್ಬೂರ, ಪುಷ್ಪಾ ಸಂಗಮ, ಮಹಾದೇವಿ ಪಡಶೆಟ್ಟಿ, ಶಾಂತಾಬಾಯಿ ಕುಂಬಾರ ಮತ್ತೀತರರು ಭಾಗವಹಿಸಿದ್ದರು.