ಬಸವ ನಿಂದನೆ: ‘ಬಸವ ಮಂಟಪ’ ಕೃತಿ ಲೇಖಕ, ಪ್ರಕಾಶಕ ವಿರುದ್ಧ ಕ್ರಮಕ್ಕೆ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ವಿವಿಧ ಬಸವಪರ ಸಂಘಟನೆಗಳ ಪ್ರತಿಭಟನೆ

ಹಾವೇರಿ :

ವಿಶ್ವವಾಣಿ ಪತ್ರಿಕೆಯ ಅಂಕಣಕಾರ, ಲೇಖಕ ರವಿ ಹಂಜ್ ( ಹಂಜಗಿಮಠ) ಅವರು ರಚಿಸಿರುವ ‘ಬಸವ ಮಂಟಪ’ ಕೃತಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹಾಗೂ ನಿಂದನಾತ್ಮಕ ಅಂಶಗಳನ್ನು ಪ್ರಕಟಿಸಿರುವುದನ್ನು ಖಂಡಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಶನಿವಾರ ಹಾವೇರಿಯ ವಿವಿಧ ಬಸವಪರ ಸಂಘಟನೆಗಳು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಬಸವ ಬಳಗ, ಬಸವ ದಳ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಲಿಂಗಾಯತ ಮಹಾಸಭಾ, ಅಕ್ಕನ ಬಳಗ, ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳು ಹಾಗೂ ಬಸವಾಭಿಮಾನಿಗಳು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ವಿಶ್ವಗುರು ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಿದ ಮಹಾನ್ ದಾರ್ಶನಿಕರು. ಇಂತಹ ಮಹಾನ್ ವ್ಯಕ್ತಿತ್ವದ ಬಸವಣ್ಣನವರ ಕುರಿತು ಕೃತಿಯಲ್ಲಿ ಅವಹೇಳನಕಾರಿ, ನಿಂದನೆಯ ಅಂಶಗಳನ್ನು ಸೇರಿಸಿರುವುದು ಬಸವತತ್ವದ ಅನುಯಾಯಿಗಳು ಹಾಗೂ ಬಸವಾಭಿಮಾನಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ.

ಕರ್ನಾಟಕದ ಸಾಂಸ್ಕೃತಿಕ ನಾಯಕರಿಗೆ ಇಂತಹ ಅವಮಾನಕರ ಕೃತ್ಯ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಲೇಖಕರು, ಪ್ರಕಾಶಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ವಕೀಲರಾದ ಕೆ.ಸಿ. ಪಾವಲಿ, ಪ್ರಭು ಬೆನ್ನೂರ, ಮುರಿಗೆಪ್ಪ ಕಡೆಕೊಪ್ಪ, ಮಲ್ಲಿಕಾರ್ಜುನ ಹಿಂಚಿಗೇರಿ, ಶಿವಬಸಪ್ಪ ಮುದ್ದಿ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರ, ಚಂದ್ರಶೇಖರ ಮಾಳಗಿ, ಎನ್.ಬಿ. ಕಾಳೆ, ಶಂಕ್ರಪ್ಪ ಜಾಯಗೊಂಡ, ಇಂದೂಧರ ಯರೇಸೀಮೆ, ಗಂಗಣ್ಣ ಮಾಸೂರ, ಜಗದೀಶ ಹತ್ತಿಕೋಟಿ, ನಾಗೇಂದ್ರಪ್ಪ ಮಂಡಕ್ಕಿ, ಚನ್ನಬಸವಣ್ಣ ರೊಡ್ಡನವರ, ನಾಗರಾಜ ವಿಭೂತಿ, ಪ್ರಭುಗೌಡ ಬಸನಗೌಡ, ಮಾಂತಣ್ಣ ಮಾಸೂರ, ಸಿದ್ದಲಿಂಗಪ್ಪ ಮಹಾರಾಜಪೇಟೆ, ಶಿವರಾಜ ಕಾಯಕದ, ಶಿವಬಸಪ್ಪ ಚೌಶೆಟ್ಟಿ, ಶಿವಯೋಗಿ ಅಂಗಡಿ, ಜಗದೀಶ ಅಂಕಲಕೋಟಿ, ಸಿ.ಬಿ. ಇಟಗಿ, ಶಿವಾನಂದ ಅಂಗಡಿ, ಮಾಲತೇಶ ಕರಿಮಣ್ಣವರ, ಯು.ಜೆ. ಶಶಿಧರ, ಬಸವರಾಜ ಮುಳಗುಂದ, ವಿಶ್ವನಾಥ ಅಂಗಡಿ, ಮಾಂತೇಶ ಯಡ್ರಾಮಿ, ಆನಂದ ಹೊಸಮನಿ, ಗಿರೀಶ ಶೆಟ್ಟರ್, ಜಿ.ಬಿ. ನಾವಿ, ಜಯಶ್ರೀ ಶಿವಪುರ, ಚಂಪಾ ಹುಣಸಿಕಟ್ಟಿ, ಕಮಲ ಬುಕ್ಕಶೆಟ್ಟಿ, ರಾಜೇಶ್ವರಿ ಬಿಷ್ಟನಗೌಡ್ರು, ಕಾವ್ಯ ಅಂಗಡಿ, ಕವಿತಾ ಕಾಯಕದ ಸೇರಿದಂತೆ ಅನೇಕ ಸಂಘಟನೆಗಳು ಕಾರ್ಯಕರ್ತರು ಭಾಗಿಯಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *