ವಿಚಾರ ಸಂಕಿರಣ: ಕಲಬುರ್ಗಿ ನಂತರದ ಲಿಂಗಾಯತ ಸಂಶೋಧನೆಯ ಸ್ಥಿತಿಗತಿ

ಬಸವ ಮೀಡಿಯಾ
ಬಸವ ಮೀಡಿಯಾ

ಅಕ್ಟೊಬರ್ 18, ಮುರುಘಾ ಮಠದಲ್ಲಿ ಬಸವ ಮೀಡಿಯಾ ಕಾರ್ಯಕ್ರಮ

ಬೆಂಗಳೂರು

ಡಾ. ಎಂ.ಎಂ. ಕಲಬುರ್ಗಿ ನಂತರದ ಲಿಂಗಾಯತ ಸಂಶೋಧನೆ ಸಾಗುತ್ತಿರುವ ದಿಕ್ಕಿನ ಬಗ್ಗೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಒಂದು ದಿನದ ವಿಚಾರ ಸಂಕಿರಣ ಅಕ್ಟೊಬರ್ 18 ನಡೆಯಲಿದೆ.

ಶ್ರೀಮಠದ ‘ಶರಣ ಸಂಸ್ಕೃತಿ ಉತ್ಸವ’ದ ಅಂಗವಾಗಿ ಬಸವ ಮೀಡಿಯಾ ನಾಡಿನ ಹಿರಿಯ ವಿದ್ವಾಂಸರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಮಹತ್ವದ ವಿಚಾರ ಸಂಕಿರಣ ನಾಡಿನ ಹಿರಿಯ ವಿದ್ವಾಂಸರಾದ ಡಾ ವೀರಣ್ಣ ರಾಜೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪ್ರಮುಖ ವಿದ್ವಾಂಸರಾದ ಡಾ. ಏನ್. ಚಿನ್ನಸ್ವಾಮಿ ಸೋಸಲೆ, ಡಾ. ಕೆ. ರವೀಂದ್ರನಾಥ್, ಡಾ. ಗುರುಪಾದ ಮರಿಗುದ್ದಿ, ಡಾ ಸಿ ಕೆ ನಾವಲಗಿ, ಡಾ. ಸಣ್ಣವೀರಪ್ಪ ದೊಡ್ಡಮನಿ, ಡಾ. ಅಕ್ಕಿ ಬಸವೇಶ,
ತಮ್ಮ ಚಿಂತನೆಯನ್ನು ಹಂಚಿಕೊಳ್ಳಲಿದ್ದಾರೆ.

ಬಿರಿಸು ಕಳೆದುಕೊಂಡ ಸಂಶೋಧನೆ

ಡಾ ಎಂ.ಎಂ. ಕಲ್ಬುರ್ಗಿ ಅವರ ನಂತರ ಲಿಂಗಾಯತ ಧರ್ಮ, ಇತಿಹಾಸದ ಸಂಶೋಧನೆಯಲ್ಲಿ ಮೊದಲಿನ ಬಿರಿಸು ಕಾಣುತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಈ ಸಂಶೋಧನಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಎದುರಾಗುತ್ತಿರುವ ತೊಡಕು, ಸವಾಲು ಹಾಗೂ ಅವಕಾಶಗಳನ್ನು ವಿಶ್ಲೇಷಿಸುವುದು ಈ ವಿಚಾರ ಮುಖ್ಯ ಉದ್ದೇಶವಾಗಿದೆ.

“ಈ ಕ್ಷೇತ್ರದ ಸಂಶೋಧನೆಗೆ ಮತ್ತೆ ಚಾಲನೆ ನೀಡುವ ಪ್ರಯತ್ನ ನಡೆಸುವುದು ಈ ವಿಚಾರ ಸಂಕಿರಣದ ಉದ್ದೇಶ,” ಎಂದು ಬಸವ ಮೀಡಿಯಾ ಟ್ರಸ್ಟಿನ ಛೇರ್ಮನ್ ಟಿ ಆರ್ ಚಂದ್ರಶೇಖರ್ ಹೇಳಿದರು.

ನಾಲ್ಕು ಗೋಷ್ಠಿ

‘ಕಲಬುರ್ಗಿ ನಂತರದ ಲಿಂಗಾಯತ ಧರ್ಮ ಮತ್ತು ಇತಿಹಾಸದ ಅಧ್ಯಯನ: ಸಾಧ್ಯತೆ-ಸವಾಲುಗಳು’ ವಿಷಯದ ಮೇಲೆ ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿವುದೆ.

ಗೋಷ್ಠಿ 1: ಕಲಬುರ್ಗಿಯೋತ್ತರ ಬೆಳವಣಿಗೆಗಳು

ಕಲಬುರ್ಗಿಯೋತ್ತರ ಲಭ್ಯವಾಗಿರುವ ಹಸ್ತಪ್ರತಿ, ಶಾಸನ, ವಚನ ಮುಂತಾದ ಆಕರಗಳ ಪರಿಚಯವನ್ನು ಡಾ ವೀರಣ್ಣ ರಾಜೂರ ಮಾಡಿಕೊಡಲಿದ್ದಾರೆ.

ಈಗ ಹಲವೆಡೆ ನಡೆಯುತ್ತಿರುವ ಹಸ್ತಪ್ರತಿಗಳ ಡಿಜಿಟಲೀಕರಣ, ಈ ಪ್ರಕ್ರಿಯೆಯಲ್ಲಿ ಸಿಕ್ಕಿರುವ ಹಸ್ತಪ್ರತಿಗಳು, ಸಂಶೋಧಕರಿಗೆ ಅವುಗಳ ಲಭ್ಯತೆಯ ಸಾಧ್ಯತೆಯ ಬಗ್ಗೆಯೂ ಅವರು ಮಾತನಾಡಲಿದ್ದಾರೆ.

ಗೋಷ್ಠಿ 2: ಕಲಬುರ್ಗಿ ನಂತರದ ಸಂಶೋಧನೆ

ಈ ಗೋಷ್ಠಿಯಲ್ಲಿ ಇಬ್ಬರು ಹಿರಿಯ ವಿದ್ವಾಂಸರು ತಮ್ಮ ಚಿಂತನೆಯನ್ನು ಹಂಚಿಕೊಳ್ಳಲಿದ್ದಾರೆ.

ಇತ್ತೀಚಿನ ಸಂಶೋಧನೆಗಳ ಸಮೀಕ್ಷೆ

ಕಲಬುರ್ಗಿ ನಂತರ ನಡೆದಿರುವ ಸಂಶೋಧನೆಗಳ ಸಮೀಕ್ಷೆಯನ್ನು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೆ. ರವೀಂದ್ರನಾಥ್ ಮಾಡಲಿದ್ದಾರೆ.

ಪ್ರಮುಖ ಸಂಶೋಧನೆಗಳು, ಅವುಗಳ ಆದ್ಯತೆ, ಗುಣಮಟ್ಟ, ಕಲಬುರ್ಗಿ ನಂತರ ಲಿಂಗಾಯತ ಧರ್ಮ, ಇತಿಹಾಸದ ಸಂಶೋಧನೆಯ ಸ್ಥಿತಿಗತಿಯ ಬಗ್ಗೆ ಅವರು ಮಾತನಾಡಲಿದ್ದಾರೆ.

ಸಂಶೋಧನೆ – ಸಮಸ್ಯೆ, ಸವಾಲು

ಇಂದಿನ ಸಂಶೋಧನೆ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು, ಪರಿಹಾರದ ಬಗ್ಗೆ ಸಂಕೇಶ್ವರದ ಪ್ರಸಿದ್ಧ ಕನ್ನಡ ವಿಮರ್ಶಕ, ಸಾಂಸ್ಕೃತಿಕ ಚಿಂತಕರಾಗಿರುವ ಡಾ. ಗುರುಪಾದ ಮರಿಗುದ್ದಿ ಮಾತನಾಡಲಿದ್ದಾರೆ.

ಗೋಷ್ಠಿ 3: ಲಿಂಗಾಯತ ಸಂಶೋಧನೆಗೆ ಉಪೇಕ್ಷಿತ, ಬಹುಶಿಸ್ತೀಯ ವಿಧಾನಗಳ ಬಳಕೆ

ಜನಪರ ಲಿಂಗಾಯತ ಧರ್ಮ, ಇತಿಹಾಸದ ಸಂಶೋಧನೆ ಶಾಸನ, ಹಸ್ತಪ್ರತಿಗಳಿಗೆ ಸೀಮಿತವಾಗಬಾರದು.
ಬಹು ಶಿಸ್ತೀಯ ಅಧ್ಯಯನದಿಂದ ಎರವಲು ಪಡೆದುಕೊಳ್ಳಬಹುದಾದ ಅಧ್ಯಯನ ವಿಧಾನಗಳ, ಆಕರಗಳ, ಬಳಕೆಯಾಗಬೇಕು.

ಈ ವಿಷಯದ ಬಗ್ಗೆ ಇಬ್ಬರು ಪ್ರಮುಖ ವಿದ್ವಾಂಸರು ತಮ್ಮ ಚಿಂತನೆಯನ್ನು ಹಂಚಿಕೊಳ್ಳಲಿದ್ದಾರೆ.

ಮೌಖಿಕ ಇತಿಹಾಸ

ಲಿಂಗಾಯತ ಇತಿಹಾಸದ ಅಧ್ಯಯನಕ್ಕೆ ಮೌಖಿಕ ಇತಿಹಾಸದ ಮಹತ್ವದ ಬಗ್ಗೆ ಗೋಕಾಕಿನ ವಿಶ್ರಾಂತ ಪ್ರಾಚಾರ್ಯರು, ಜಾನಪದ ಚಿಂತಕರಾಗಿರುವ ಡಾ ಸಿ ಕೆ ನಾವಲಗಿ ಮಾತನಾಡಲಿದ್ದಾರೆ.

  • ಸಂಶೋಧನಾ ವಿಧಾನವಾಗಿ ಮೌಖಿಕ ಇತಿಹಾಸ
  • ಜನಪರ ಇತಿಹಾಸ ಕಟ್ಟುವಲ್ಲಿ ಅದರ ಮಹತ್ವ
  • ಇಲ್ಲಿಯವರೆಗೆ ನಡೆದಿರುವ ಕೆಲವು ಪ್ರಮುಖ ಅಧ್ಯಯನಗಳು
  • ಲಿಂಗಾಯತ ಇತಿಹಾಸದಲ್ಲಿ ಸಂಶೋಧನೆ ನಡೆಯಬೇಕಾದ ಕೆಲವು ಕ್ಷೇತ್ರಗಳು
  • ಮುಂತಾದ ವಿಷಯಗಳ ಮೇಲೆ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ.

ಸಮುದಾಯಗಳ ಅಧ್ಯಯನ

ಲಿಂಗಾಯತ ಇತಿಹಾಸ ಸಂಶೋಧನೆಗೆ ಸಮುದಾಯಗಳ ಅಧ್ಯಯನದ ಬಗ್ಗೆ ಗುಳೇದಗುಡ್ಡದ ಜಾನಪದ ತಜ್ಞರಾದ ಡಾ. ಸಣ್ಣವೀರಪ್ಪ ದೊಡ್ಡಮನಿ ಮಾತನಾಡಲಿದ್ದಾರೆ.

  • ಜನಪರ ಇತಿಹಾಸ ಕಟ್ಟುವಲ್ಲಿ ಸಮುದಾಯಗಳ ಅಧ್ಯಯನ ಮಹತ್ವ
  • ಸಮುದಾಯಗಳ ಅಧ್ಯಯನ ವಿಧಾನಗಳು
    (ನಂಬಿಕೆ, ಆಚರಣೆ, ಪುರಾಣ ಇತ್ಯಾದಿಗಳ ಸಂಗ್ರಹಣೆ, ವಿಶ್ಲೇಷಣೆ)
  • ಇಲ್ಲಿಯವರೆಗೆ ನಡೆದಿರುವ ಕೆಲವು ಪ್ರಮುಖ ಅಧ್ಯಯನಗಳು
  • ಲಿಂಗಾಯತ ಇತಿಹಾಸದ ದೃಷ್ಟಿಯಿಂದ ಸಂಶೋಧನೆ ನಡೆಯಬೇಕಾದ ಕೆಲವು ಕ್ಷೇತ್ರಗಳು
  • ಮುಂತಾದ ವಿಷಯಗಳ ಮೇಲೆ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ.

ಗೋಷ್ಠಿ 4: ಲಿಂಗಾಯತ ಧರ್ಮ, ಇತಿಹಾಸದ ಸಂಶೋಧನೆ: ಮುಂದಿನ ಆದ್ಯತೆಗಳು

ಮುಂದಿನ 5-10 ವರ್ಷ ಸಂಶೋಧಕರು ಗಮನ ಹರಿಸಬೇಕಾದ ನಿರ್ದಿಷ್ಟ ವಿಷಯಗಳು, ಕ್ಷೇತ್ರಗಳ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಚಿನ್ನಸ್ವಾಮಿ ಸೋಸಲೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ನಂತರ ಇದೇ ವಿಷಯದ ಮೇಲೆ ಹಗರಿಬೊಮ್ಮನಹಳ್ಳಿಯ ಪ್ರಾಧ್ಯಾಪಕರಾದ ಡಾ. ಅಕ್ಕಿ ಬಸವೇಶ ಮಾತನಾಡಲಿದ್ದಾರೆ.

ಗೋಷ್ಠಿ ನಂತರ ಬಸವ ಮೀಡಿಯಾ ಟ್ರಸ್ಟಿನ ಡಾ. ಎಚ್ ಎಂ ಸೋಮಶೇಖರಪ್ಪ ನಿರ್ಣಯ ಮಂಡನೆ ಮಾಡಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಭಾಗವಹಿಸಲು ನಾಡಿನ ಹಿರಿಯ ವಿದ್ವಾಂಸರಿಗೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಅಹ್ವಾನ ನೀಡಲಾಗುತ್ತಿದೆ.

ಬಸವ ಮೀಡಿಯಾ ಟ್ರಸ್ಟ್ ಛೇರ್ಮನ್ ಟಿ ಆರ್ ಚಂದ್ರಶೇಖರ್ ಸ್ವಾಗತಿಸಲಿದ್ದಾರೆ. ಬಸವ ಮೀಡಿಯಾ ಸಂಪಾದಕ ಎಂ ಎ ಅರುಣ್ ಪ್ರಾಸ್ತಾವಿಕ ನುಡಿಗಳನ್ನು ಹೇಳಲಿದ್ದಾರೆ.

ಯುವ ಸಂಶೋಧಕ ಅಕ್ಕಿ ಮಲ್ಲಿಕಾರ್ಜುನ ಇಡೀ ದಿನದ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *