ಚಳ್ಳಕೆರೆ: ಹಂಜನ್ನು ಕೂಡಲೇ ಬಂಧಿಸಲು ಕನ್ನಡ ಸಾಂಸ್ಕೃತಿಕ ಸಂಸ್ಥೆಯ ಆಗ್ರಹ

ಚಳ್ಳಕೆರೆ

ಸಾಂಸ್ಕೃತಿಕ ನಾಯಕ, ವಿಶ್ವ ಗುರು ಬಸವಣ್ಣನವರ ಆದರ್ಶಕ್ಕೆ ಧಕ್ಕೆ ಬರುವ ರೀತಿಯಲ್ಲಿ ‘ಬಸವ ಮಂಟಪ’ ಕೃತಿ ಬರೆದಿರುವ ರವಿ ಹಂಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊರ್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಜಾತಿ ರಹಿತ ಸಮಾಜ ಕಟ್ಟಲು ಹನ್ನೆರಡನೇ ಶತಮಾನದಲ್ಲಿ ನುಡಿದಂತೆ ನಡೆದುಕೊಂಡ ಬಸವಣ್ಣನವರು,ವಚನ ಸಾಹಿತ್ಯ ಮೂಲಕ ಮನುಕುಲಕ್ಕೆ ಜಾಗೃತಿ ಮೂಡಿಸಿದವರು.

ಕಾಯಕವೇ ಕೈಲಾಸ ಎನ್ನುವ ಸತ್ಯ ಸಂದೇಶ ಲೋಕಕ್ಕೆ ಸಾರಿವವರು.‌ ಇಂತಹ ಆದರ್ಶ ಪುರುಷನ ಬಗ್ಗೆ ಅಧ್ಯಯನ ಮಾಡದೆ, ಕಪೋಕಲ್ಪಿತವಾಗಿ,ಆದಾರ ರಹಿತವಾಗಿ ನಿಂಧನೆ ಮಾಡಿರುವ ರವಿ ಹಂಜ್ ಅವರನ್ನು ಶಿಕ್ಷೆಗೆ ಗುರಿ ಪಡಿಸಬೇಕು.

ಮುಂದಿನ ದಿನಗಳಲ್ಲಿ ಕಿಡಿಗೇಡಿತನದಿಂದ ಕೃತಿ ರಚಿಸಲು ಯಾರೊಬ್ಬರೂ ಕೈಹಾಕಬಾರದು. ಅದೇರೀತಿ ಶರಣರ ವಚನಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಸಮಾಜದಲ್ಲಿ ಶಾಂತಿ ಕದಡುತ್ತಿರುವ ಸ್ವಾಮೀಜಿ ಮುಸುಕಿನಲ್ಲಿರುವ ಕನ್ನೇರು ಸ್ವಾಮಿ ಮತ್ತು ಸಮಾಜದಲ್ಲಿ ಸಾಮರಸ್ಯ ಕಾಪಾಡಬೇಕಿರುವ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ನಡತೆ ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ರವಿ ಹಂಜ್ ಅಮೇರಿಕಾದ ಅನಿವಾಸಿ ಭಾರತೀಯನಾಗಿರುವ ಕಾರಣ ಹೇಳಿಕೊಂಡು ವಿಳಂಬ ಮಾಡದೆ,ಕಾನೂನು ತೊಡಕು ಸರಿಪಡಿಸಿಕೊಂಡು ಕೂಡಲೇ ಬಂಧಿಸಬೇಕು.

ಕೃತಿ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ನಾಟಕೀಯ ಮಾತು ಹೇಳಿ ನಂತರ ಜಿಲ್ಲಾ ಮಟ್ಟದಲ್ಲಿ ಶೀಘ್ರವಾಗಿ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳುವ ಮೂಲಕ ಜನರ ಸಿಟ್ಡು ಸ್ಪೋಟಗೊಳ್ಳಲು ಪ್ರಚೋದನೆ ನೀಡಿದ್ದಾರೆ.

ಜತೆಗೆ, ಅಮೇರಿಕಕ್ಕೆ ತೆರಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಳೇ ಪೋಟೋ ಹಾಕುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸುವ ಕೆಲಸ ಮಾಡಿರುವ ರವಿ ಹಂಜ್ ಅವರಿಗೆ ಕಠಿಣ ಶಿಕ್ಷೆ ಆಗಬೇಕು, ಎಂದರು.

ಸಾಮಾಜಿಕ ಹೋರಾಟಗಾರ ಎಸ್.ಎಚ್. ಸೈಯದ್, ಬುದ್ದ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿದರು.

ಕರವೇ ( ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪಿ. ಮಂಜುನಾಥ, ಸಿ.ಜಿ. ತಿಪ್ಪೇಸ್ವಾಮಿ, ಎಚ್.ಲಂಕೇಶ್,ಸುರೇಶ್ ಬೆಳೆಗೆರೆ, ಬಿ. ಮೂರ್ತಿ, ಎನ್. ಕುಶ, ಆರ್. ರವಿವರ್ಮ, ಎಂ.ಯತೀಶ್,ಎಸ್. ಪ್ರಭು ಕುಮಾರ್, ಎಚ್.ಸಿದ್ದೇಶ್ವರ,ದಾದಾಪೀರ್,ಎನ್. ಪೆನ್ನಯ್ಯ,ಸಿ.ಶಿವಣ್ಣ, ಟಿ.ದ್ಯಾಮಕುಮಾರ್ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *