ಧಾರವಾಡ: ಡಾ ರಾಜಶೇಖರ ಮಠಪತಿ (ರಾಗಂ) ಅವರ ‘ಯೋಗಸ್ಠ:’ ಕೃತಿಯ ಅವಲೋಕನ ಹಾಗೂ ಲಿಂಗಾಯತ ನೌಕರರ ಜಿಲ್ಲಾ ಘಟಕದ ಚಾಲನ ಸಮಾರಂಭವು ಭಾನುವಾರ ಧಾರವಾಡದ ಮುರಘಾಮಠದಲ್ಲಿ ನೇರವೇರಿತು.
‘ಯೋಗಸ್ಠ:’ ಕೃತಿಯ ಅವಲೋಕನವನ್ನು ಬೆಂಗಳೂರಿನ ಲಕ್ಷ್ಮೀದೇವಿ ಹೊಸಮನಿ ಮಾಡಿದರು. ಶ್ರೀ ಡಾ ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಲಿಂಗಾಯತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ನಾಗೂರ ವಹಿಸಿದ್ದರು.
ಪ್ರೋ ಜಿ ಎ ತಿಗಡಿ ಉದ್ಘಾಟಿಸಿ ಗುರುವಿನ ಮಹತ್ವ ಕುರಿತು ಮಾತನಾಡಿದರು. ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್.ಎಫ್.ಸಿದ್ದನಗೌಡ್ರ, ಡಿ ಎಂ ಹಿರೇಮಠ, ಶಂಕರ ಗಂಗಣ್ಣವರ, ಎಂ ಬಿ ಬಿರಾದಾರ, ಗುರು ತಿಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಮಾ ಬಾಗಲಕೋಟ ನಿರೂಪಣೆ, ಶಾರದಮ್ಮ ಕುರವತ್ತಿ ವಚನ ಪ್ರಾರ್ಥನೆ, ಕೆ ಎಫ್ ಜಾವೂರ ಸ್ವಾಗತ, ಆತ್ಮಾನಂದ ಗೆದ್ದಿಕೇರಿ ವಂದಿಸಿದರು.