‘ಹೋಟೆಲ್ ಮಾಲೀಕ ಮೊದಲು ಬಸವಣ್ಣನವರ ಫೋಟೋ ತೆಗೆದು, ವಿಭೂತಿ ಅಳಿಸಲಿ’
ಲಿಂಗಸುಗೂರು
ಅಸ್ಪೃಶ್ಯತೆ ಆಚರಿಸಿದ್ದ ತಾಲ್ಲೂಕಿನ ಈಚನಾಳ ಗ್ರಾಮದ ಹೋಟೆಲ್ ಮಾಲೀಕನ ವಿರುದ್ಧ ಬುಧವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್ ಮಾಲೀಕ ಶಿವಪ್ಪ ಶರಣಪ್ಪ ಹಡಪದ ಅವರು ವ್ಯಕ್ತಿಯೊಬ್ಬರಿಗೆ ಕುಡಿವ ನೀರನ್ನು ಬೊಗಸೆಗೆ ಸುರಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .
ಈಚನಾಳದಲ್ಲಿ ಗ್ರಾಮಕ್ಕೆ ತೆರಳಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಲಿಂಗಸುಗೂರು ತಹಶೀಲ್ದಾರ್ ಸತ್ಯಮ್ಮ ಮಂಗಳವಾರ ಪ್ರತಿಕ್ರಿಯೆ ನೀಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ಅವರು ನೀಡಿದ ದೂರು ಆಧರಿಸಿ ಶಿವಪ್ಪ ಶರಣಪ್ಪ ಹಡಪದ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಸ್ಪ್ರಶ್ಯತೆ ಆಚರಣೆ
‘ಕೆಲ ಹೋಟೆಲ್ ಮಾಲೀಕರು ದಲಿತರಿಗೆ ನೀರನ್ನು ಮೇಲಿಂದ ಹಾಕುತ್ತಾರೆ. ಅದನ್ನು ಬೊಗಸೆಯಲ್ಲಿ ಕುಡಿಯಬೇಕಾಗಿದೆ’ ಎಂದು ಗ್ರಾಮಸ್ಥ ಅಮರಪ್ಪ ಗಾಳಿಪೂಜೆ ಆರೋಪಿಸಿದ್ದಾರೆ.
ಹೋಟೆಲ್‌ಗಳಲ್ಲಿ ಗ್ರಾಹಕರನ್ನು ಜಾತಿ ಆಧಾರದ ಮೇಲೆ ಕೂರಿಸಲಾಗುತ್ತದೆ. ಎಲ್ಲರೊಂದಿಗೆ ಸಮಾನವಾಗಿ ಕುಳಿತು ಉಪಾಹಾರ ಸೇವಿಸಲು ಅವಕಾಶ ನೀಡುತ್ತಿಲ್ಲ. ಕೆಲವರಿಗೆ ಪ್ರತ್ಯೇಕ ಲೋಟ ನೀಡಲಾಗುತ್ತಿದೆ.
ಗ್ರಾಮದ ಕ್ಷೌರದ ಅಂಗಡಿಗಳಲ್ಲಿಯೂ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಕೆಲವರಿಗೆ ಅಂಗಡಿಯಲ್ಲಿ, ಇನ್ನು ಕೆಲವರಿಗೆ ಗ್ರಾಮದ ಹೊರಗಡೆ ಕ್ಷೌರ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತೀವ್ರ ಆಕ್ರೋಶ
ಗ್ರಾಮದಲ್ಲಿ ನಡೆಯುತ್ತಿರುವ ಅಸ್ಪ್ರಶ್ಯತೆ ಆಚರಣೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಾತೀಯತೆ ವಿರುದ್ಧ ಹೋರಾಡಿದ ಬಸವಾದಿ ಶರಣರಿಗೆ ಇದು ಅವರ ಅನುಯಾಯಿಗಳಿಂದಲೇ ನಡೆಯುತ್ತಿರುವ ಅಪಚಾರ.
ಹೋಟೆಲ್ ಮಾಲೀಕ ಮೊದಲು ಅಲ್ಲಿ ಹಾಕಿರುವ ಬಸವಣ್ಣನವರ ಫೋಟೋ ತೆಗೆದು, ವಿಭೂತಿ ಅಳಿಸಲಿ ಎಂಬ ಮಾತುಗಳೂ ಕೇಳಿಬರುತ್ತಿವೆ.
“ಲಿಂಗಧಾರಿಗಳುನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ,ಮೇಲುತನ ಮೆರಿವ
ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ.”
ಬಸವಣ್ಣನವರು ಜಾತಿ-ಅಸ್ಪೃಶ್ಯತೆಯನ್ನು ತಿರಸ್ಕರಿಸಿ ಸಮಾನತೆ ಸಾರಿದರು. ಇನ್ನೂ ಅದನ್ನು ಆಚರಿಸುವವರು ಲಿಂಗಾಯತರಲ್ಲ, ಅವರ ತತ್ವಗಳಿಗೆ ದ್ರೋಹಿಗಳು. ಇವರು ಆ ಹಿಂದೆ ಇರುವ ಬಸವಣ್ಣನ ಫೋಟೋ, ಇಷ್ಟಲಿಂಗ, ಹಣೆಯಲ್ಲಿರುವ ವಿಭೂತಿ ತೆಗೆದು… https://t.co/PoDjZd3wYs— LINGAYATH OFFICIAL (@AkhandLINGAYATH) September 10, 2026

This is utterly shameful. Must be condemned in the highest order.
True followers of shri Vishwaguru Basaweshwarji oppose untouchability system in lingayat community. We all are one infront of God. In Basava dharma no untouchability. So Basava dharma is great and is acceptable by all human beings. Basava dharma is Rashtra dharma .Jai hind vandematram
ಹೊಟೇಲ್ ಮಾಲಿಕನ ಖಂಡನೆ ಮಾಡಿ.ಜೈ ಬಸವ