‘ದಾಸೋಹದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಗುರು ಮಲ್ಲೇಶ್ವರರು’
ನಂಜನಗೂಡು
ತಾಲೂಕಿನ ದೇವನೂರಿನಲ್ಲಿ ಗುರುಮಲ್ಲೇಶ್ವರರ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಹಸಿದ ಹೊಟ್ಟೆಗೆ ಅನ್ನ ನೀಡಿ ದಾಸೋಹದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟ ಗುರು ಮಲ್ಲೇಶ್ವರರು ಬಡವರು ಹಾಗೂ ನಿರ್ಗತಿಕರಿಗೆ ನೆರವಾಗಿದ್ದರು ಎಂದು ವಿಜಯೇಂದ್ರ ಹೇಳಿದರು.
ರಾಜ್ಯದಲ್ಲಿ ಲಿಂಗಾಯತ ಮಠ ಮಾನ್ಯಗಳವರ ಸೇವೆ ಒಂದೇ ಜಾತಿಗೆ ಸೀಮಿತವಾಗಿಲ್ಲ, ಸಮಾಜದ ಎಲ್ಲ ವರ್ಗದ ಜನರಿಗೆ ಶಿಕ್ಷಣ, ಆರೋಗ್ಯ ಹಾಗೂ ದಾಸೋಹ ಸೇವೆಯನ್ನು ಜಾತಿ, ಮತ ಹಾಗೂ ಧರ್ಮದ ಯಾವುದೇ ಬೇಧ ತೋರದೆ ಸಮಾನವಾಗಿ ನೀಡುವ ಮೂಲಕ ಬಸವಣ್ಣನವರ ಆಶಯದ ಸಮಾಜ ನಿರ್ಮಾಣಕ್ಕೆ ಮುಂದಾಗಿವೆ.

ಗುರು ಮಲ್ಲೇಶ್ವರರಿಗೆ ಪೂಜೆ ಸಲ್ಲಿಸಿ 2018ರಲ್ಲಿ ವರುಣಾ ಕ್ಷೇತ್ರದಿಂದ ವಿಧಾನ ಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದೆನಾದರೂ ಬದಲಾದ ಸನ್ನಿವೇಶದಲ್ಲಿ ಚುನಾವಣಾ ಸ್ಪರ್ಧೆಗೆ ಅವಕಾಶ ಲಭ್ಯವಾಗಲಿಲ್ಲ.
ಆದರೆ ರಾಜಕೀಯವಾಗಿ ನಾಯಕತ್ವದ ಅವಕಾಶ ವರುಣ ಕ್ಷೇತ್ರದಿಂದಲೇ ನನಗೆ ಲಭ್ಯವಾಯಿತು, ಹೀಗಾಗಿ ಈ ಭಾಗದ ಜನರು ನನಗೆ ನೀಡಿದ ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ ಚಾಮರಾಜನಗರ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕೆರೆಗಳಿಗೆ ನದಿ ಮೂಲದ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ರೈತರಿಗೆ ನೆರವಾಗಿದ್ದರು. ಹೀಗಾಗಿ ಈ ಭಾಗದ ಜನರು ಯಡಿಯೂರಪ್ಪನವರನ್ನು ನೆನೆಯುತ್ತಾರೆ, ಎಂದು ಹೇಳಿದರು.

ಕಬಿನಿ, ಕಾವೇರಿ ಹಾಗೂ ಹೇಮಾವತಿ ಅಣೆಕಟ್ಟೆಗಳು ಬರಿದಾಗಿದ್ದು, ರೈತರು ಭವಿಷ್ಯದ ಕೃಷಿ ಚಟುವಟಿಕೆ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ, ಆದ್ದರಿಂದ ಗುರುಮಲ್ಲೇಶ್ವರರ ಪುಣ್ಯಾರಾಧನೆ ಸಮಯದಲ್ಲಿ ಉತ್ತಮ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ತಾವೆಲ್ಲರೂ ಹೆಮ್ಮೆ ಪಡುವಂತೆ ಪಕ್ಷವನ್ನು ಸಂಘಟಿಸುವ ಮೂಲಕ ಜನರ ನಿರೀಕ್ಷೆಯಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ ಗುರು ಮಲ್ಲೇಶ್ವರರು ಅನ್ನ, ಅಕ್ಷರ ದಾಸೋಹ ಮಾಡುವ ಮೂಲಕ ನಮ್ಮ ಭಾಗದಲ್ಲಿ ಬಸವಾದಿ ಶರಣರ ತತ್ವ ಆದರ್ಶಗಳನ್ನು ಜಾರಿ ಮಾಡಿದರು, ಈಗಲೂ ಶ್ರೀಮಠ ದಾಸೋಹಕ್ಕೆ ಹೆಸರಾಗಿದೆ, ಎಂದು ಹೇಳಿದರು.
ಗುರುಮಲ್ಲೇಶ್ವರ ಮಹಾಸಂಸ್ಥಾನ ಮಠಾಧ್ಯಕ್ಷ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ ಗುರುಮಲ್ಲೇಶ್ವರರ 127ನೇ ಪುಣ್ಯಾರಾಧನೆಯ ಎರಡೂ ದಿನಗಳ ಕಾರ್ಯಕ್ರಮದಲ್ಲಿ ಭಕ್ತರು ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದ್ದಾರೆ ಎಂದು ಹೇಳಿದರು.
ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಶಾಸಕರಾದ ಸಿ.ಎಸ್. ನಿರಂಜನಕುಮಾರ್, ಪರಿಮಳ ನಾಗಪ್ಪ, ಎಸ್. ಮಹದೇವಯ್ಯ ಇದ್ದರು.

ಸಮವೆಂದು ತಿಳಿದ ಮಹಾತ್ಮರು ಲೋಕದೊಳಗೆ ಇದ್ದು ಇಲ್ಲದ ಕ್ರಿಯಾ ಜಂಗಮ ಮೂರ್ತಿಗಳು ಯಾರಿಗೂ ನೋವಾಗದಂತೆ ನಡೆದುಕೊಳ್ಳುವದು ಅವಶ್ಯವಾಗಿತ್ತು. ಭಕ್ತರ ಭಕ್ತಿಯ ಮುಂದೆ ತಪಸ್ಸಿಯ ಇಚ್ಛೆ ಅಪೇಕ್ಷೆ ಶಿವಶರಣರು ನಡೆದುಕೊಂಡ ಪದ್ಧತಿಯಂತೆ ಎತ್ತು ಸಾಗಿದ ಮಾರ್ಗ ಕುತೂಹಲ ಆತುರ ಭವ್ಯ ಭವಿಷ್ಯತ್ತಿನ ಗುರುಮನೆ ನಿರ್ಮಾಣ ಮಾಡುವ ಹೋಗೆಯನ್ನು ಸಕಲ ಜೀವಾವಳಿಗೆ ಲೇಸನ್ನೆ ಬಯಸುವದು.
ಇಪ್ಪತ್ತೊಂಬತ್ತು29
ಕನಿಷ್ಠ ಪಕ್ಷ ಹಿರಿಯರು ಹೇಳಿದಂತೆ ಅನ್ನದೊಳಗೆ ಒಂದು ಅಗುಳ ಹೊನ್ನಿನೊಳಗೆ ಒಂದು ವರೆಯ ನೂಲಿನೊಳಗೆ ಒಂದು ಎಳೆಯ ಇಂದಿಗೆ ನಾಳೆಗೆ ಎಂದು ಬಯಸಿದರೆ ನಿಮ್ಮೊಳೆ ನಿಮ್ಮ ಪ್ರಮಥರ ಆಣೆ ಪ್ರಮಾಣ ಮಾಡಿದ ವಿಶ್ವಗುರು ಬಸವಣ್ಣನವರು ಅಪೇಕ್ಷೆ ಕೊಡಿಸಿದಂತೆ ಹೊನ್ನು ಹೆಣ್ಣು ಮಣ್ಣು ಅಲ್ಲಗಳೆಯಲಿಲ್ಲ. ಬಯಸಿ ಅಪೇಕ್ಷೆ ಮಾಡಿ ಪಡೆಯುವದು ಯೋಗ್ಯವಲ್ಲ ಒತ್ತಾಯ ಮಾಡಿ ನಿರಂತರ ಜ್ಞಾನ ದಾಸೋಹ ಅನ್ನ ದಾಸೋಹ ಮಾನ ಸನ್ಮಾನ ಕ್ರಿಯಾಗಳು ನಡೆಯಬೇಕಾದರೆ ಅದು ಪಂಚಭೂತಗಳ ಸರಿಯಾದ ಬಳಕೆ ರೀತಿ ಪದ್ಧತಿಗಳು ಊರು ಮಠ ಮಂದಿರ ಅರಮನೆ ಗುರುಮನೆ ಸ್ಥಾಪಿಸಬೇಕಾದರೆ ಅಂದಿನ ಪದ್ಧತಿಗಳು ನೀರು ಭೂಮಿ ಗಾಳಿ ಬೆಳಕು ಸಮರ್ಪಕ ಸ್ಥಳಗಳ ಆಯ್ಕೆ ಪ್ರಮುಖವಾಗಿ ಪದ್ಧತಿಪ್ರಕಾರ ನಡೆಯುತ್ತಿದ್ದವು. ಅದರಂತೆ ಫಲಹಾರ ಶಿವಯೋಗಿಗಳು ಅಸೂಟಿ ಮಠವೂ ಕೂಡಾ ದೀನ ದಲಿತರ ಕಾಯಕ ಜೀವಿಗಳಾದ ಅಂಬಿಗರು ಕುರುಬರು ಕುಂಬಾರ ಕಂಬಾರ ಹಡಪದ ಮಾದಾರ ಚೆನ್ನಯ್ಯ ಹೊಲೆಯ ಮಾದಿಗರೆಂಬ ಬೇದ ಭಾವವಿಲ್ಲದೆ ಬಂದಿ ವಡ್ಡರು ಬ್ರಾಹ್ಮಣರು ಜಂಗಮರು ಲಿಂಗವಂತರು ಗೌಡರು ಕಾಯಕ ಜೀವಿಗಳು ಸಮೀಪವೇ ವಾಸಿಸುತ್ತಿದ್ದರು. ಅದರಂತೆ ನಡೆದುಕೊಂಡು ಬಂದಿರುವ ಫಲಹಾರ ಶಿವಯೋಗಿಗಳವರು ಊರ ಹಿರೇಮಠದ ಅರಿವು ಆಚಾರ ಕ್ರಿಯಾಶೀಲ ಜಂಗಮ ತಂದೆ ತಾಯಿಗಳನ್ನು ಪಡೆದಿರುವುದು ಒಂದು ಇತಿಹಾಸವು ಆಗಿರುವುದು ನೆನಪಿಸಿಕೊಂಡರೆ, ಜಗವ ಸುತ್ತಿಪುದು ನಿಮ್ಮಾಯೆ ನಿಮ್ಮ ಸುತ್ತಿಪುದು ನಮ್ಮ ಮನ ನೋಡಾ ಜನಕ್ಕೆ ಒಲಿದ ನಿಮ್ಮ ನಿನಗ ಒಲಿದನಾನು ಎಂಬ ಬಸವಣ್ಣವರ ವಚನದಂತೆ ಕಂಟಲಿ ಬಸವನ ಲೋಕದಂತೆ ಲೌಕಿಕರು ಹೇಳುವ ವಿಚಾರ ತಿಳಿದು ತಿಳಿಯದಂತೆ ಮುಗ್ಧತೆಯಿಂದ ಊರು ಸ್ಥಳ ಪರಿಶೀಲನೆ ಮಾಡುವುದು ರಾಜರಿಗೆ ಭಕ್ತರಿಗೆ ಒಂದು ಚಿಂತೆಯಾಗಿತ್ತು. ಆದರೆ ಬೆಳ್ಳಗೆ ಕಾಯಿ ಭಾರವೇ ? ಭಕ್ತ ಜನರ ಮನಸ್ಸು ಇಚ್ಛೆ ಅಪೇಕ್ಷೆಗಳು ಹೆಚ್ಚಳವಾಗಿತ್ತು, ಅದರಂತೆ ಒಳ್ಳೆಯ ದಿವಸದಂದು ಅವರಾದಿ ಗ್ರಾಮದ ರುದ್ರಭೂಮಿ ಸ್ಥಾನ ಭೂಮಿಯಲ್ಲಿ ಬಂದು ಮಲಗಿಕೊಳ್ಳುತ್ತದೆ. ಮಲಪ್ರಭೆಯ ನದಿಯ ದಂಡೆಯ ಮೇಲೆ ರಾಮದುರ್ಗ ನಗರುಂದ ಸೀಮೆಗಳ ನಡು ಸೀಮೆಗೆ ಬಂದು ಪಡದಿಸುತ್ತೆ. ಅಂದರೆ ಶರಣರು ಫಲಹಾರ ಶಿವಯೋಗಿಗಳು ಪಶುಪಕ್ಷಿ ಪ್ರಾಣಿಗಳು ನಂಬಿಗೆ ವಿಶ್ವಾಸಕ್ಕೆ ಪಾತ್ರವೆಂಬುದು ತಿಳಿಸಲಿಕ್ಕೆ ನಿರ್ಧಾರ ಸೂಚಿಸುವ ಐತಿಹಾಸಿಕ ಸತ್ಯಘಟನೆಗೆ ನಿತ್ಯವು ನಮಗೆ ನೋಡಲು ಸುಲಭ ಸಾಧ್ಯವಾಗಿರುವ ಕಂಟಲಿ ಎತ್ತು ನೋಡಿದರೆ ಸತ್ಯ ಗೋಚರಿಸಲು ಸಾಧ್ಯವಾಗುವಂತೆ ಅಂದು ಇಂದು ಮುಂದೆ ಕವಿ ಪಂಡಿತ ಪಾಮರರಿಗೂ ಅರ್ಥವಾಗುವ ಪದ್ಧತಿಯನ್ನು ಪ್ರೀತಿ ವಿಶ್ವಾಸಗಳಿಗೆ ಪಾತ್ರಾಗಿ ನಗರುಂದದ ಜನರ ಕುರಿತು ದಕ್ಷಿಣ ಬಾಗಿಲು ಶ್ರೀಶೈಲ ಪೂರ್ವ ದಿಕ್ಕಿಗೆ ಇರುವಂತೆ ಈಶಾನ್ಯ ಬಾಗಿಲು ಮಠದ ರೂಪರೇಷೆ ವೈಜ್ಞಾನಿಕವಾಗಿಯೂ ರೀತಿ ಪದ್ಧತಿಗಳ ಪ್ರಕಾರ ಆರಂಭಿಸುತ್ತಾರೆ. ಅರಮನೆ ಗುರುಮನೆ ನಿರಂತರಜ್ಞಾನಾರಿವೃತ್ತಿಯಗೆ ಅವರಾದಿ ಗ್ರಾಮದಲ್ಲಿ ತಮ್ಮ ಲಿಂಗಪೂಜಾ ಪಾತ್ರರಾಗಿ ಸದಾ ಸ್ಮರಣೀಯ ಕ್ರಿಯಾ ಜಂಗಮರಾಗಿದ್ದು ಲೋಕಪೂಜ್ಯರಾಗಿ ಸ್ಥಳ ಮಹಿಮೆ ಸ್ಥಳ ಮೂಹೂರ್ತ ಸಾಧಿಸಿ ಕೋರಿಸಿ ಎತ್ತು ಜಾಗೃತ ರೈತ ಜನಮಾನಸದ ದೇವರಾಗಿಸಿದರು.
ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ