ಹಿಂದುತ್ವ ಸಮಾವೇಶದ ವಿರುದ್ಧ ಕಠಿಣ ಕ್ರಮಕ್ಕೆ ಲಿಂಗಾಯತ ಮಠಾಧಿಪತಿಗಳ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಸೆಪ್ಟೆಂಬರ್ 25 ಕಲಬುರಗಿ ಹೋರಾಟಕ್ಕೆ ಬೆಂಬಲ ಘೋಷಣೆ

ಭಾಲ್ಕಿ

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಸೆಪ್ಟೆಂಬರ್ 25 ಕಲಬುರಗಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಬೆಂಬಲ ಘೋಷಿಸಿದೆ.

ಕನ್ನೇರಿ ಸ್ವಾಮಿಯ ನೇತೃತ್ವದಲ್ಲಿ ಸೆಪ್ಟೆಂಬರ್ 27 ನಡೆಯುತ್ತಿರುವ ಸಮಾವೇಶವನ್ನು ಪ್ರತಿಭಟಿಸಲು ನಾಡಿನ ಬಸವಪರ, ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ.

“ಸರಕಾರ ಹಾಗೂ ಆಡಳಿತಾತ್ಮಕ ಮುಖ್ಯಸ್ಥರು ಕಠಿಣ ಕ್ರಮವನ್ನು ಕೈಗೊಂಡು, ನಾಡಿನಲ್ಲಿ ಶಾಂತಿ, ಸಮಾಧಾನ ನೆಲೆಸುವಂತೆ ನೋಡಿಕೊಳ್ಳಬೇಕೆಂದು,” ಮಠಾಧಿಪತಿಗಳ ಒಕ್ಕೂಟ ಒತ್ತಾಯಿಸಿದೆ.

ಸೋಮವಾರ ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ “ಬಸವಾದಿ ಶಿವ ಶರಣರ ಮೂಲ ಆಶಯಗಳಿಗೆ ಧಕ್ಕೆ ತರುವ ಕಾರ್ಯವನ್ನು ನಾವೆಲ್ಲರೂ ನೈತಿಕ ನೆಲಗಟ್ಟಿನ ಮೇಲೆ ಸಂವಿಧಾನಿಕ ಹಿನ್ನೆಲೆಯಲ್ಲಿ ವಿರೋಧಿಸಬೇಕಿದೆ.

ಬಸವಾದಿ ಶಿವಶರಣರ ಹೆಸರಿನಲ್ಲಿನ ಹಿಂದೂ ಸಮಾವೇಶವನ್ನು ನಾಡಿನ ಪ್ರಗತಿಪರ ಚಿಂತಕರು, ಎಲ್ಲ ತಳ ಸಮುದಾಯಗಳ ಜನರು ಇದೆ 25ರಂದು ಕಲಬುರಗಿಯಲ್ಲಿ ಪ್ರತಿಭಟಿಸುತ್ತಿರುವುದು ಯಾವುದೇ ದುರುದ್ದೇಶದಿಂದ ಅಲ್ಲ,” ಎಂದು ಒಕ್ಕೂಟ ತಿಳಿಸಿದೆ.

“ಬಸವಾದಿ ಶರಣರು ಶ್ರೇಣಿಕೃತ ಜಾತಿಯ ವ್ಯವಸ್ಥೆಯನ್ನು ವಿರೋಧಿಸಿದವರು. ಸಮಾನತೆಗಾಗಿ ಜೀವ ತೆತ್ತವರು. ಸಮಾಜೋ ಧಾರ್ಮಿಕ ಅರಿವಿನೊಂದಿಗೆ ಕಾಯಕ ದಾಸೋಹ ಸಮಾನತೆಯ ದಿಕ್ಷೆ ನೀಡಿದವರು. ಅವರ ತ್ಯಾಗ ಬಲಿದಾನಗಳನ್ನು ನಾವು ಮರೆಯಲಾಗುವುದಿಲ್ಲ,” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆಪ್ಟಂಬರ್ 25ರಂದು ಕಲಬುರಗಿಯಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 11 ಗಂಟೆಗೆ ಕನ್ನಡ ಭವನದಿಂದ ಜಗತ್‌ ವೃತ್ತದವರೆಗೆ ಬೃಹತ್ ರ್ಯಾಲಿ ನಡೆಸಿ, ಅಲ್ಲಿ ವಿಚಾರ ಸಂಕಿರಣ ನಡೆಸಲಾಗುವುದು ಎಂದು ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಪ್ರಮುಖರಾದ ಆರ್.ಜಿ. ಶೆಟಗಾರ ಮತ್ತು ಮೀನಾಕ್ಷಿ ಬಾಳಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ.ಹೋರಾಟ ನಡೆಯಬೇಕು ಬಸವ ತತ್ವದ ನಿಜಾಚರಣೆ ಸಲುವಾಗಿ.

Leave a Reply

Your email address will not be published. Required fields are marked *