ಭಾಲ್ಕಿ:
ಶ್ರೀ ಚನ್ನಬಸವಾಶ್ರಮದಲ್ಲಿ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ವಿಶ್ವಯೋಗ ದಿನಾಚರಣೆ ನಡೆಯಿತು.
ಸಾನಿಧ್ಯ ವಹಿಸಿದ ಪೂಜ್ಯರು, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ. ಇದು ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲನವನ್ನು ಸಾಧಿಸುವ ಒಂದು ಪ್ರಾಚೀನ ಭಾರತೀಯ ಕಲೆ ಮತ್ತು ವಿಜ್ಞಾನವಾಗಿದೆ.
ಯೋಗ ಮಾಡುವುದರಿಂದ ಮನುಷ್ಯನ ಒತ್ತಡ ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೈನಂದಿನ ಜೀವನದಲ್ಲಿ ಶಿಸ್ತು ಹಾಗೂ ನೆಮ್ಮದಿಯನ್ನು ತರುತ್ತದೆ. ದಿನಾಲು ಯೋಗ ಮಾಡುವುದರಿಂದ ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ. ಬೆನ್ನು ನೋವನ್ನು ನಿವಾರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕ ಶಾಂತಿ ನೀಡುತ್ತದೆ. ಆದುರಿಂದ ನಾವು ಪ್ರತಿನಿತ್ಯ ನಮ್ಮ ಜೀವನದಲ್ಲಿ ಯೋಗ ಮಾಡಲು ರೂಢಿಸಿಕೊಳ್ಳಬೇಕು. ಯೋಗ ಮಾಡಿದರೆ ರೋಗ ದೂರಾಗುತ್ತದೆ.
ಪೂಜ್ಯ ಸಿದ್ಧಬಸವ ಸ್ವಾಮಿಗಳು ಹಾಗೂ ಪೂಜ್ಯ ಶಿವಬಸವ ಸ್ವಾಮಿಗಳು ವಿಶ್ವಯೋಗ ನಿಮಿತ್ಯ ಹಿರೇಮಠ ಶಾಲಾ ಆವರಣದಲ್ಲಿ 7 ದಿವಸಗಳ ಪರ್ಯಂತ ಯೋಗ ಶಿಬಿರ ಆಯೋಜಿಸಲಾಗಿತ್ತು.
ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಸಂಕಲ್ಪದಂತೆ ಯೋಗ ಒಂದು ದಿವಸ ಮಾಡುವುದಲ್ಲ. ಇದು ನಮ್ಮ ಜೀವನದಲ್ಲಿ ಪ್ರತಿನಿತ್ಯ ಅಳವಡಿಸಿಕೊಳ್ಳಬೇಕು. ನಮ್ಮ ಶ್ರೀಮಠದ ಶಾಲೆಯಲ್ಲಿ ಪೂಜ್ಯ ಸಿದ್ಧಬಸವ ಸ್ವಾಮಿಗಳು ಹಾಗೂ ಪೂಜ್ಯ ಶಿವಬಸವ ಸ್ವಾಮಿಗಳವರಿಂದ ಪ್ರತಿನಿತ್ಯ ಬೆಳಿಗ್ಗೆ ಯೋಗ ಹೇಳಿಕೊಡಲಾಗುವುದು. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಶ್ರೀ ಚನ್ನಬಸವೇಶ್ವರ ಗುರುಕುಲ ಶಾಲೆ ಕರಡ್ಯಾಳದಲ್ಲಿ ಕನ್ನಡ ಮಾಧ್ಯದಲ್ಲಿ ಶಾಲೆ ಕಲಿತು ಸರಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಚನ್ನಬಸವ ಧನರಾಜ ಬಂಬುಳಗೆ ಅವರಿಂದ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಶಾಲಾ ವಿದ್ಯಾರ್ಥಿಗಳು ಹಾಗೂ ಗುರುಪ್ರಸಾದ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
