ಕಲಬುರಗಿ:
ಇದೇ ಜೂನ್ ೨೭ ಮತ್ತು ೨೮ರಂದು ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ “ಮಹಾದೇವಿಯಕ್ಕಗಳ-೧೬” ಸಮ್ಮೇಳನ ಜರುಗಲಿದೆ.
ಕಲಬುರಗಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಇವುಗಳ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಲೇಖಕಿ ಮತ್ತು ವಿಶ್ರಾಂತ ಪ್ರಾಧ್ಯಾಪಕಿಯರಾದ ಡಾ. ನೀಲಮ್ಮ ಕತ್ನಳ್ಳಿ ಅವರು ಆಯ್ಕೆಯಾಗಿದ್ದಾರೆ.

“ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ-೨೦೨೬” ಈ ಪ್ರಶಸ್ತಿಯನ್ನು ಮತ್ತೊಬ್ಬ ಲೇಖಕಿ ಪ್ರೊ. ಗಂಗಮ್ಮ ಸತ್ಯಂಪೇಟೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಶಾಲೆಗಳಲ್ಲಿ ೩೫ ರಿಂದ ೫೦ ವರ್ಷ ಶಿಕ್ಷಕರಾಗಿ, ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಶಾರದಾ ರಾಂಪೂರೆ, ಶಶಿಕಲಾ ಸಾಲೋಕ್ಯ, ಶಾಂತಾ ಪಾಟೀಲ, ಉಮಾ ಪಾಟೀಲ, ನಂದಾ ಪಾಟೀಲ ಅವರೆಲ್ಲರಿಗೆ ಗೌರವ ಸನ್ಮಾನ ಜರುಗಲಿದೆ.
ಈ ಸಮ್ಮೇಳನದ ವಿಶೇಷವೆಂದರೆ ಸುಮಾರು ೨೦೦ ಜನ ಮಹಿಳೆಯರು, ವಿದ್ಯಾರ್ಥಿನಿಯರು ವೇದಿಕೆಯಲ್ಲಿ ತಮ್ಮ ಅನುಭವ ಮತ್ತು ಪ್ರತಿಭೆಯನ್ನು ವ್ಯಕ್ತಪಡಿಸುತ್ತಾರೆ.
೨೭ ರಂದು ಬೆಳಿಗ್ಗೆ ಈ ಸಮ್ಮೇಳನವನ್ನು ಭಾಲ್ಕಿಯ ಡಾ. ಗೀತಾ ಖಂಡ್ರೆ ಅವರು ಉದ್ಘಾಟಿಸುವವರು. ಸಮ್ಮೇಳನದಲ್ಲಿ ೫ ಸಾಹಿತ್ಯಿಕ ಗೋಷ್ಠಿಗಳು ಜರುಗಲಿವೆ. ಎರಡು ವಿಶೇಷ ಉಪನ್ಯಾಸಗಳಿರುತ್ತವೆ. ಏಳು ಭಾಗಗಳಲ್ಲಿ ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
ಸಮ್ಮೇಳನಕ್ಕೂ ಮುನ್ನ ೨೫ ಮತ್ತು ೨೬ ಎರಡು ದಿನಗಳಂದು ಬೆಳಗ್ಗೆ ೧೧ ಗಂಟೆಯಿಂದ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳಿರುತ್ತವೆ.
ಸತತವಾಗಿ ೧೬ ಪ್ರತಿ ವರ್ಷಗಳಿಂದ “ಮಹಾದೇವಿಯಕ್ಕಗಳ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ.
ಕಲಬುರಗಿಯ ನಾಗರಿಕರು ಈ ಸಮ್ಮೇಳನಕ್ಕೆ ಪ್ರೇಕ್ಷಕರಾಗಿ ಆಗಮಿಸಿ, ಪ್ರೋತ್ಸಾಹಿಸಬೇಕೆಂದು ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಶರಣಮ್ಮ ಕಲಬುರಗಿ, ಕಾರ್ಯದರ್ಶಿಗಳಾದ ಅನಸೂಯಾ ನಡಕಟ್ಟಿ, ಕಾರ್ಯಾಧ್ಯಕ್ಷರು, ಸಂಚಾಲಕರೂ ಆದ ಡಾ. ಜಯಶ್ರೀ ದಂಡೆ ಅವರು ವಿನಂತಿಸಿಕೊಂಡಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
