ನಂಜನಗೂಡು:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಗಳಾದ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಶಾಸಕರಾದ ದರ್ಶನ್ ಧ್ರುವನಾರಾಯಣ ಅವರು ಚಾಲನೆ ನೀಡಿದರು.

ಮುಖ್ಯ ಭಾಷಣಕಾರರಾಗಿ ಶರಣತತ್ವ ಪ್ರಚಾರಕರು ಹಾಗು ವಿಶ್ವಬಸವ ಸೇನೆಯ ಅಧ್ಯಕ್ಷರಾದ ಬಸವಯೋಗೇಶ ಸ್ವಾಮಿಗಳು, ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ ಮತ್ತು ಅನುಭವ ಮಂಟಪದಲ್ಲಿ ಅವರ ಅದ್ವಿತೀಯ ಕಾರ್ಯ ಮತ್ತು ಅವರ ವಚನಗಳ ಬಗ್ಗೆ ಮಾತನಾಡಿದರು.
12ನೇ ಶತಮಾನದಲ್ಲಿ ಸಮುದಾಯ ಸಮುದಾಯಗಳ ಬಗ್ಗೆ ಇದ್ದಂತಹ ಮೌಢ್ಯಗಳ ತೊಡೆದು ಹಾಕಲು ಬಸವಣ್ಣನವರು ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಅನುಭವ ಮಂಟಪದಲ್ಲಿ ಎಲ್ಲ ಕಾಯಕ ಸಮುದಾಯಗಳ ಒಡಗೂಡಿ ಸಮಾಜದ ಉದ್ಧಾರಕ್ಕಾಗಿ ದುಡಿದ ಕಾಯಕ ಶರಣರಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಮಹತ್ತರವಾಗಿದ್ದರ ಬಗ್ಗೆ ಮಾತನಾಡಿದರು.
ತಹಸೀಲ್ದಾರ್ ಸ್ಮಿತಾ ರಾಮು ಅವರು, ಸಮಾಜ 21ನೇ ಶತಮಾನಕ್ಕೆ ಕಾಲಿಟ್ಟರೂ ಇನ್ನು ಮೌಡ್ಯಾಚರಣೆಯಲ್ಲಿದೆ. 12ನೇ ಶತಮಾನದಲ್ಲಿಯೇ ಮೌಡ್ಯಗಳನ್ನು ಅರಿತಿದ್ದ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ಆಪ್ತಕಾರ್ಯದರ್ಶಿಯಾಗಿ ನೇಮಿಸಿಕೊಂಡು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ್ದು ಅವಿಸ್ಮರಣೀಯ ಎಂದು ನುಡಿದರು.
ಶಾಸಕರಾದ ದರ್ಶನ್ ದೃವನಾರಾಯಣ ಅವರು ಕಾರ್ಯಕ್ರಮದ ಕುರಿತು ಮಾತನಾಡುತ್ತ, ತಾಲೂಕಿನಲ್ಲಿ ಎಲ್ಲ ಶರಣರ ವಚನಗಳ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರ ಬಗ್ಗೆ ಮಾತನಾಡಿದರು.

ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಹಡಪದ ಸಮಾಜದ ಕೇಶಾಲಂಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪುಟ್ಟರಾಜು, ಗೌರವಾಧ್ಯಕ್ಷರಾದ ಆನಂದ, ಉಪಾಧ್ಯಕ್ಷರಾದ ಕೆಂಪರಾಜು, ಕಾರ್ಯದರ್ಶಿಗಳಾದ ಶ್ರೀಕಂಠ ಪ್ರಸಾದ, ಖಜಾಂಚಿ ಶಿವಪ್ರಸಾದ, ಮಹೇಶ, ನಿರ್ದೇಶಕರು ರವಿ, ಬಸವಣ್ಣ, ಸುಧಾ, ಸಿದ್ದರಾಜು, ರವಿ, ಸೌಭಾಗ್ಯ, ಸುಜಿತ್, ಲಿಂಗಾಯತ ಮುಖಂಡರಾದ ಚನ್ನಪ್ಪ, ಮುದ್ದಹಳ್ಳಿ ಅಶೋಕ, ಭೋವಿ ಸಮುದಾಯದ ಮುಖಂಡರಾದ ಪಾಳ್ಯ ಪಾಪಣ್ಣನವರು, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಬ್ದುಲ್ ಖಾದರ್, ಗುರುಮಲ್ಲಪ್ಪ, ಹಾಗು ಸದಸ್ಯರು ಮತ್ತು ತಾಲೂಕಿನ ವಿವಿಧ ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಮಸ್ಥರುಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

ಜಯಂತಿ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಸಾಧಕರುಗಳಿಗೆ ಹಡಪದ ಅಪ್ಪಣ್ಣನವರ ಭಾವಚಿತ್ರ ನೀಡಿ ಗೌರವಿಸಲಾಯಿತು. ಮತ್ತು ಸನ್ಮಾನ ಮಾಡಲಾಯಿತು.

ಬಸವಯೋಗೇಶ್ ರವರಿಗೆ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ನಡೆಸಿದ ಎಲ್ಲರಿಗೂ ಅನಂತ ಶರಣು