ಬೆಂಗಳೂರು
ವಿಶ್ವವಾಣಿ ಅಂಕಣಕಾರ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಪುಸ್ತಕವನ್ನು ಮುಟ್ಟುಗೋಲು ಹಾಕಲು ಸಚಿವ ಈಶ್ವರ ಖಂಡ್ರೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಇಂದು ಬೆಳಗ್ಗೆ ಬಸವ ಸಮಿತಿಯಲ್ಲಿ ಸಚಿವರಾದ ಎಂ ಬಿ ಪಾಟೀಲ್, ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸುದ್ದಿ ಗೋಷ್ಠಿಯ ಹಿನ್ನೆಲೆಯಲ್ಲಿಯೇ ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಸಂಬಂಧ ವಿಡಿಯೋ ಹೇಳಿಕೆ ನೀಡಿರುವ ಖಂಡ್ರೆ “ಇಡೀ ಲಿಂಗಾಯತ ಸಮುದಾಯಕ್ಕೆ ಮತ್ತು ವಿಶ್ವಗುರು ಬಸವಣ್ಣನವರ ಅನುಯಾಯಿಗಳಿಗೆ ಘಾಸಿ ಉಂಟು ಮಾಡುವಂತೆ ಆಧಾರರಹಿತ ಆರೋಪ ಮಾಡಿರುವ ರವಿ ಹಂಜ್ ಅವರ ಕೃತಿ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಿದೆ.
ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಬಿಜ್ಜಳನ ಖಜಾನೆ ದುರುಪಯೋಗಪಡಿಸಿಕೊಂಡು ಶರಣ ದಾಸೋಹ ಮಾಡಿದ್ದಾರೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡುವವರನ್ನು ಒಪ್ಪಲು ಸಾಧ್ಯವೇ ಇಲ್ಲ.
ಲಿಂಗಾಯತರನ್ನು ‘ಲಿಂಗಾಹತರು’ ಎಂದು ಹೇಳಿದ್ದಾರೆ. ಇದು ಪ್ರಚೋದನಕಾರಿ ಹೇಳಿಕೆಯಾಗಿದೆ.
ಹೀಗಾಗಿ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಜೊತೆಗೆ ರವಿ ಹಂಜ್ ಅವರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
ಭಾವನಾತ್ಮಕ ವಿಚಾರಗಳ ಬಗ್ಗೆ ಯಾವುದೇ ಸಂಶೋಧನೆ ಇಲ್ಲದೆ, ಸ್ವಯಂಘೋಷಿತ ಸಂಶೋಧಕರೆಂದು ಮಾತನಾಡುವ ಈ ವ್ಯಕ್ತಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಅಲ್ಲದೆ, ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
ವಿಜಯೇಂದ್ರ ಹೇಳಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಬಸವಣ್ಣನವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ಅಥವಾ ಕೃತಿಗಳನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ರವಿ ಹಂಜ್ ಅವರು ಬಸವಣ್ಣನವರ ಗೌರವಕ್ಕೆ ಮತ್ತು ಚಿಂತನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಷಯಗಳನ್ನು ಮಂಡಿಸಿರುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ವಿವಾದಾತ್ಮಕ ಕೃತಿ ಕುರಿತಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.
ರಾಜ್ಯ ಸರ್ಕಾರ ಬಸವಣ್ಣನವರನ್ನು ಕೇವಲ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು. ಬಸವಣ್ಣನವರ ಚಿಂತನೆ ಮತ್ತು ಸಿದ್ಧಾಂತಗಳಿಗೆ ಪೂರಕವಾಗಿಯೂ ನಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಈ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಬೇಕು. ವಿವಾದಾತ್ಮಕ ಕೃತಿಯನ್ನು ಮುಟ್ಟುಗೋಲ ಹಾಕಿಕೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ.

ಇಬ್ಬರದೂ ಉತ್ತಮ ಪ್ರತಿಕ್ರಿಯೆ ಧನ್ಯವಾದಗಳು 🙏 ಆದರೆ ಮೇಲ್ನೋಟಕ್ಜೆ ಹಂಜ್ ವಿರುದ್ದ ಹೇಳಿಕೆ ಕೊಟ್ಟು ನಂತರ ಒಳಗೊಳಗೇ ಅವನಿಗೆ ಸಪೋರ್ಟ್ ಮಾಡಬಾರದು ಎಂಬುದು ಬಸವಾಭಿಮಾನಿಗಳ ಆಗ್ರಹ
ಬಸವಣ್ಣನವರ ಭಕ್ತರಾಗಿ ಅವರ ಈ ಹೇಳಿಕೆ ಸ್ವಾಗತಾರ್ಹ. ಆದರೆ ಉಪಯೋಗಿಸಿದ ಶಬ್ದ ” ವೀರಶೈವ ಲಿಂಗಾಯತ” ಇದು ಒಳ ಒಳಗೆ ಇವರು ವೀರಶೈವರ ಪರ ಎಂಬುದನ್ನು ಸೂಚಿಸುತ್ತದೆ. ವೀರಶೈವರು ಬಹಳಷ್ಟು ಲಿಂಗಾಯತರ ಕ್ರಿಯಾ ಕರ್ಮಗಳನ್ನು ಮಾಡುತ್ತಾ ಅವರ ಮೇಲೆ ಆವರಿಸಿಕೊಂಡಿದ್ದಾರೆ. ಲಿಂಗಾಯತರು ತಮ್ಮದೇ ಆದ ಪ್ರತ್ಯೇಕ ಸರಳ ವಿಧಿ ವಿಧಾನಗಳನ್ನು ರೂಪಿಸುವ ತನಕ ಅವರ ಪುರೋಹಿತಶಾಹಿ ಮುಷ್ಟಿಯಿಂದ ಹೊರಬರುವುದು ಬಲು ಕಷ್ಟ. ವಚನಗಳ ಓದು ಮತ್ತು ಆಚರಣೆ ಹೆಚ್ಚಿದಂತೆ ಅವುಗಳ ಪ್ರಭಾವ ಕಡಿಮೆ ಆಗಬಹುದು.
ಇದೆಲ್ಲಾ ಲಿಂಗಾಯತರಲ್ಲಿ ರಾಜಕೀಯ ಪ್ರಜ್ಞೆ ಜಾಗೃತಗೊಳ್ಳುತ್ತಿರುವ ಸಂಕೇತ.
ಮಾನ್ಯ ಈಶ್ವರ್ ಕಂಡ್ರೆಜಿಯವರೇ ಸರ್ಕಾರ ಆಮೇಲೆ ಮೊದಲು ಬಸವಣ್ಣನ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ಓಪನ್ ಆಗಿ ಮಾಧ್ಯಮಗಳಲ್ಲಿ ಬಸವಣ್ಣನವರನ್ನು ಹೀಯಾಳಿಸಿ ಕಳ್ಳ ಸುಳ್ಳ ದರೋಡೆಕೋರ ಎನ್ನುವ ಶಬ್ದಗಳನ್ನು ಬಳಸಿದಂತಹ ರವಿ ಅಂಜೆಯವರನ್ನು ಏಕೆ ಸಹಿಸಿಕೊಳ್ಳುತ್ತಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ
ಆಮೇಲೆ ಸರಕಾರ ಅವರನ್ನುಮೊದಲು ಗಡಿಪಾರು ಮಾಡಿ ಆದೇಶ ಹೊರಡಿಸಿ ಸರ್ಕಾರ ನಿಮ್ಮ ಕೈಯಲ್ಲಿದೆ
Ravi hajirge atani gadiparu madi ega basava bhakataru odagabeku
ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನ ಗಡಿ ಪಾರು ಮಾಡಬೇಕೆಂದು ಮನವಿ.ಇದು ಎಲ್ಲಾ ಬಸವಪರ ಸಂಘಟನೆಗಳ,ಬಸವ ಭಕ್ತರ ಒತ್ತಾಯ
ಇದರ ಬೆನ್ನೆಲುಬು ವಿಶ್ವ ಭಟ್ ನ ಮೇಲೆ ಕ್ರಮ, ಬೇಡವೆ❓❓