ನಂಜನಗೂಡು :
ಮುದ್ದಹಳ್ಳಿ ಗ್ರಾಮದ ಜಯಮ್ಮ ಮತ್ತು ಮಹಾದೇವಪ್ಪ ಶರಣ ದಂಪತಿಯ ಸೊಸೆ ಜ್ಯೋತಿ ಎಂ. ಮತ್ತು ಮಗ ಲೋಕೇಶ ಎಂ. ದಂಪತಿಯ ಮುದ್ದು ಮಗು ಲಿಖಿತ್ ಲಿಂಗಾಯತನ ನಾಮಕರಣ ಮಾಡುವ ಮತ್ತು ತೊಟ್ಟಿಲು ಕಟ್ಟುವ ಕಾರ್ಯಕ್ರಮವನ್ನು ಲಿಂಗಾಯತ ಪದ್ಧತಿಯಂತೆ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಶ್ರೀ ಉದ್ಧಾನೇಶ್ವರ ವಿರಕ್ತಮಠದ ಅಧ್ಯಕ್ಷರಾದ ಪೂಜ್ಯ ಇಮ್ಮಡಿ ಉದ್ದಾನ ಸ್ವಾಮಿಗಳವರ ಸಾನಿಧ್ಯ ಮತ್ತು ಬಸವಣ್ಣನವರ ಅರಿವಿನ ಮನೆಯ ಬಸವಯೋಗೇಶ ಗುರುಗಳ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಮೊದಲಿಗೆ ಷಟಸ್ಥಲ ಧ್ವಜಾರೋಹಣ ಮತ್ತು ಬಸವಣ್ಣನವರ ಪುತ್ತಳಿಗೆ ಪುಷ್ಪಾರ್ಚನೆ ಮಾಡಲಾಯಿತು.


ಬಸವಕಲ್ಯಾಣ ಅನುಭವ ಮಂಟಪದ ಬಸವತತ್ವ ಪ್ರಸಾರಕರಾದ ಬಸವದೇವರು ಅವರಿಂದ ಇಷ್ಟಲಿಂಗ ಪೂಜೆ ಹಾಗೂ ಮಗುವಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿ ನಾಮಕರಣ ಕಾರ್ಯ ಮಾಡಲಾಯಿತು.
ತದನಂತರ ತೊಟ್ಟಿಲು ಕಟ್ಟುವ ಕಾರ್ಯವನ್ನು ಬಸವಭಕ್ತರು, ಸಂಬಂಧಿಕರು ಮತ್ತು ಕುಟುಂಬಸ್ಥರು ಸೇರಿಕೊಂಡು ಜ್ಯೋತಿ ಬೆಳಗಿಸಿ ಮಗುವಿಗೆ ಆರತಿ ಮಾಡಿ ಪೂಜಾ ಕಾರ್ಯ ನೆರವೇರಿಸಿದರು.

ಬಸವಧ್ವಜ ಗೀತೆ ಮತ್ತು ವಚನ ಗಾಯನವನ್ನು ನಂಜನಗೂಡಿನ ನೀಲಾಂಬಿಕೆ ಬಳಗ ಮತ್ತು ಅಕ್ಕನಾಗಮ್ಮ ವಚನ ಬಳಗದವರು ನಡೆಸಿಕೊಟ್ಟರು.
ವಿಶ್ವಬಸವ ಸೇನೆ, ಕಾಯಕಯೋಗಿ ಬಸವೇಶ್ವರ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಹಲವು ಗ್ರಾಮದ ಬಸವಭಕ್ತರು ಬಂದು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ಮಗುವಿಗೆ ಎಲ್ಲರೂ ಸೇರಿ ಸಕಲ ಜೀವಾತ್ಮರಿಗೆ ಒಳ್ಳೆಯದನ್ನೇ ಬಯಸುವವನಾಗು.
ರೈತರು, ಸೈನಿಕರಿಗೆ ಗೌರವಿಸುವ ರಾಷ್ಟ್ರಭಕ್ತನಾಗು, ಬಸವಣ್ಣನಂತಾಗು, ಶರಣರಂತಾಗು ಎಂದು ಹೇಳುತ್ತ, ಪುಷ್ಪ ಹಾಕಿ ಶುಭ ಕೋರಿದರು.

ಕಾರ್ಯಕ್ರಮವನ್ನು ಕಂಡು ಮುದ್ದಹಳ್ಳಿ ಗ್ರಾಮ ಮತ್ತು ಆಗಮಿಸಿದ್ದ ಹಲವು ಗ್ರಾಮಗಳ ಜನ ಹಾಗೂ ಬಸವಭಕ್ತರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಕಂಡುಬಂತು.
ಮಗುವಿನ ದೊಡ್ಡಮ್ಮ ರೇಖಾ ಮತ್ತು ದೊಡ್ಡಪ್ಪ ಅಶೋಕಕುಮಾರ ಕೆ. ಎಂ. ಅವರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ