ಗುಬ್ಬಿ:
ರಾಷ್ಟ್ರೀಯ ವೀರಗಣಾಚಾರ ಸಂಘ( RVS), ಜಾಗತಿಕ ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಹಾಗೂ ಗುಬ್ಬಿ ತಾಲ್ಲೂಕು ಘಟಕಗಳ ಸಹಯೋಗದೊಂದಿಗೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ 2 ಮತ್ತು 3 ಅಕ್ಟೋಬರ್ -2026ರ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಲಿಂಗಾಯತ ಇತಿಹಾಸ, ಸಿದ್ಧಾಂತ, ಸಂಘಟನೆ, ಅಧ್ಯಯನ ಮತ್ತು ಗಣಾಚಾರಿಗಳ ತರಬೇತಿ ಶಿಬಿರ ನಡೆಯಲಿದೆ.
ಶರಣ ಸಂಸ್ಕೃತಿಯ ಪ್ರಸಾರ ಮತ್ತು ಗಣಾಚಾರಿಗಳಿಗೆ ಶಿಸ್ತುಬದ್ಧ ತರಬೇತಿ ನೀಡುವ ಸಲುವಾಗಿ ಈ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶರಣ ಚಳುವಳಿಯ ಆಳವಾದ ಅರಿವು ಇಲ್ಲಿ ಪಡೆಯಬಹುದಾಗಿದೆ.
ಇದೇ ಸಂದರ್ಭದಲ್ಲಿ ಚೇಳೂರು ಹೋಬಳಿ ಮಟ್ಟದ ಜಾಗತಿಕ ಲಿಂಗಾಯತ ಮಹಾಸಭಾ ಘಟಕದ ಉದ್ಘಾಟನೆ ಮತ್ತು ಸೇವಾ ದೀಕ್ಷೆ ಸ್ವೀಕಾರ ಸಮಾರಂಭ ನಡೆಯಲಿದೆ.

ವಿಜಯಪುರದ ಶರಣತತ್ವ ಇತಿಹಾಸಕಾರ, ಚಿಂತಕರಾದ ಡಾ. ಜೆ. ಎಸ್. ಪಾಟೀಲ ಅವರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಚಂದ್ರಶೇಖರ ಮಹಾಸ್ವಾಮಿಗಳು ಗವಿಮಠಾಧ್ಯಕ್ಷರು, ಬೆಟ್ಟದಹಳ್ಳಿ, ಸಮ್ಮುಖವನ್ನು ಪೂಜ್ಯ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತೆವಡೆಹಳ್ಳಿ, ಪೂಜ್ಯ ವಿಭವ ವಿದ್ಯಾಶಂಕರ ದೇಶೀಕೇಂದ್ರ ಮಹಾಸ್ವಾಮಿಗಳು ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ, ಗೊಲ್ಲಹಳ್ಳಿ ಅವರುಗಳು ವಹಿಸುವರು.
ಶಿಬಿರ ಶ್ರೀ ಮರಳು ಬಸವೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆಯುವದು. ಆಸಕ್ತರು ಮಾಹಿತಿಗಾಗಿ 95354 74895 ಈ ನಂಬರ್ ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.

ಶಿಬಿರಾರ್ಥಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಶರಣ ಬಂಧುಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಷ್ಟ್ರೀಯ ವೀರಗಣಾಚಾರ ಸಂಘ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳು ಪ್ರಕಟಣೆಯಲ್ಲಿ ಕೋರಿವೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
