ಪ್ರಗತಿಪರ ಸಂಘಟನೆಗಳ ಹೇಳುವ ಪ್ರಕಾರ ಹಿಂದೆಂದೂ ನೋಡದ ಪ್ರಮಾಣದಲ್ಲಿ ಬಸವ ಪಂಚಮಿ ಕಾರ್ಯಕ್ರಮಗಳು ಈ ವರ್ಷ ನಡೆಯುತ್ತಿವೆ.
ವಿವಿಧ ಜಿಲ್ಲೆಗಳಲ್ಲಿ ಮಾನವ ಬಂಧುತ್ವ ವೇದಿಕೆ, ಬಸವ ಪರ, ದಲಿತ ಮತ್ತು ಇತರ ಪ್ರಗತಿ ಪರ ಸಂಘಟನೆಗಳು ನಡೆಸುತ್ತಿರುವ ಬಸವ ಪಂಚಮಿ ಕಾರ್ಯಕ್ರಮಗಳ ಸಂಕ್ಷಿಪ್ತವಾಗಿ ನೋಟ.
ಬೆಂಗಳೂರಿನ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10ರಂದು ನಡೆದ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಬಸವ ಪಂಚಮಿ ಕಾರ್ಯಕ್ರಮ.
ಕಲ್ಲು ದೇವರಿಗೆ ಹಾಲು ಸುರಿಯಲು ಬಂದ ಭಕ್ತರ ಮನ ಬದಲಿಸಿದ ರಾಷ್ಟ್ರೀಯ ಬಸವ ದಳದ ಶರಣೆಯರು
ಕಲಬುರ್ಗಿಯಲ್ಲಿ ಎಲ್ಲರಿಗೂ ಸ್ಪೂರ್ತಿ ತುಂಬುವಂತಹ ಸಾಧನೆಯನ್ನು ರಾಷ್ಟ್ರೀಯ ಬಸವ ದಳದ ಶರಣೆಯರು ಮಾಡಿದ್ದಾರೆ. ನಾಗರಕಲ್ಲಿನ ಮೂರ್ತಿಗೆ ಹಾಲೆರೆಯಲು ಮಹಿಳೆಯರ ಮನ ಬದಲಿಸಿ ಅರಿವು ಮೂಡಿಸಿದ್ದಾರೆ. ರವೀಂದ್ರ ಹೊನವಾಡ ಮತ್ತು ಅಪರ್ಣ ಎಸ್ ಕುಮಾರ್ ಅವರ ವಿಶೇಷ ವರದಿ. ಪರಿವರ್ತನೆಯೆಂದರೆ ಇದೇ ಅಲವೇ?
ಕಲಬುರ್ಗಿಯಲ್ಲಿ ನಾಗರ ಪಂಚಮಿಗೆ ಹಾಲು ಸುರಿಯಲು ಬಂದ ಭಕ್ತರ ಮನ ಪರಿವರ್ತಿಸಿದ ರಾಷ್ಟ್ರೀಯ ಬಸವ ದಳದ ಅಕ್ಕನಾಗಲಾಂಬಿಕೆ ಮಹಿಳಾ ಗಣದ ತಂಡ ದೃಶ್ಯಗಳು
ಕಲಬುರ್ಗಿಯಲ್ಲಿ ನಾಗರ ಪಂಚಮಿಗೆ ಹಾಲು ಸುರಿಯಲು ಬಂದ ಭಕ್ತರ ಮನ ಪರಿವರ್ತಿಸಿದ ರಾಷ್ಟ್ರೀಯ ಬಸವ ದಳದ ಅಕ್ಕನಾಗಲಾಂಬಿಕೆ ಮಹಿಳಾ ಗಣದ ತಂಡದ ವಿಡಿಯೋ
ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ರೋಗಿಗಳಿಗೆ ಹಾಲು ನೀಡಿ ‘ಬಸವ ಪಂಚಮಿ’ ಆಚರಿಸಲಾಯಿತು.
ಚಿಕ್ಕೋಡಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಬಸವಪರ ಸಂಘಟನೆಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ‘ಬಸವ ಪಂಚಮಿ’ ಆಚರಿಸಲಾಯಿತು.
ಬಸವ ಪಂಚಮಿ ಪ್ರಯುಕ್ತ ಲಿಂಗಾಯತ ಮಹಾಮಠದ ವತಿಯಿಂದ ಬೀದರ ಚಿಕ್ಕಪೇಟೆಯ ಡಾನ್ ಬೊಸ್ಕೊ ಶಾಲೆಯಲ್ಲಿ ಮಕ್ಕಳಿಗೆ ಪ್ರಸಾದ ವಿತರಿಸಲಾಯಿತು. ಪೂಜ್ಯ ಪ್ರಭುದೇವ ಸ್ವಾಮೀಜಿ ಮಾತನಾಡಿದರು.
ಮುಂಡರಗಿಯ ಬಸವ ಬಳಗ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಕಾರ್ಮಿಕರ ಸಂಘಟನೆ ಮತ್ತು ಮಾನವ ಬಂಧುತ್ವ ವೇದಿಕೆ ವತಿಯಿಂದ, ಕಲ್ಲು ನಾಗರಗೆ ಹಾಲು ಹಾಕುವ ಬದಲು, ಬಡಮಕ್ಕಳ ಬಾಯಿಗೆ ಹಾಲು ಹಾಕುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.
“ಈ ವರ್ಷ ಕರ್ನಾಟಕದ ಎರಡು ಸಾವಿರ ಹಳ್ಳಿಗಳು ಬಸವ ಪಂಚಮಿ ಆಚರಿಸಲಿವೆ”
ಬಸವ ಪಂಚಮಿಯನ್ನು ರೂಢಿಗೆ ತರಲು ಶ್ರಮಿಸುತ್ತಿರುವ ಮಾನವ ಬಂದುತ್ವ ವೇದಿಕೆಯ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ಬಸವ ಮೀಡಿಯಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
“ಬಸವಣ್ಣನವರ ಮಹತ್ವ ಕುಗ್ಗಿಸಲು ಆಚರಣಗೆ ಬಂದಿದ್ದು ನಾಗರ ಪಂಚಮಿ”
ಮಂಡ್ಯದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಅವರ ಮಾತಿದು.
ಕಿತ್ತೊರಿನ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಬಸವ ಪಂಚಮಿಯ ಕೆಲವು ಫೋಟೋಗಳು
ಕಿತ್ತೊರಿನಲ್ಲಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಬಸವ ಪಂಚಮಿ ಆಚರಿಸಲಾಯಿತು
ಅಶೋಕ ಅಳ್ನಾವರ ಅವರ ವರದಿ
ಬಸವ ಮೀಡಿಯಾದ ಆಗಸ್ಟ್ 10ರ ಫೋಟೋ ಗ್ಯಾಲರಿಯಲ್ಲಿ ವಿವಿಧ ಕಡೆ ನಡೆಯುತ್ತಿರುವ ಮಾಹಿತಿ ಫೋಟೋಗಳಿವೆ
ಹಲವಾರು ಕಡೆ ಹಾವುಗಳ ಬದಲು ಬಡ ಮಕ್ಕಳಿಗೆ ಹಾಲು ಕೊಡುವ ಕಾರ್ಯಕ್ರಮಗಳು ನಡೆಯುತ್ತಿವೆ.
3
1