ಮಹಿಳೆಯರಿಗೆ ಕ್ರೀಡಾಕೂಟ, ಸಿರಿಧಾನ್ಯ ಅಡುಗೆ, ರಂಗೋಲಿ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ :

ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಮಹಿಳಾ ಕ್ರೀಡಾಕೂಟ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಎಸ್.ಎನ್. ಚಂದ್ರಶೇಖರ ಮಾತನಾಡಿ, ಕ್ರೀಡೆಗೆ ವಯೋಮಾನದ ಮಿತಿಯಿಲ್ಲ. ಕ್ರೀಡೆ ನಮ್ಮ ದೇಹ ಮತ್ತು ಮನಸ್ಸನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.

೨೫-೫೫ ವರ್ಷ ವಯೋಮಾನದ ೫೦ಕ್ಕೂ ಹೆಚ್ಚು ಮಹಿಳೆಯರು, ೫೫ ವರ್ಷ ಮೇಲ್ಪಟ್ಟ ವಯೋಮಾನದರಲ್ಲಿ ೨೭ಕ್ಕೂ ಹೆಚ್ಚು ಮಹಿಳೆಯರು ಹಗ್ಗಜಗ್ಗಾಟ, ಮ್ಯುಸಿಕಲ್ ಛೇರ್, ಮೆಮೋರಿ ಟೆಸ್ಟ್, ಮಡಿಕೆ ಒಡೆಯುವುದು, ಲೆಮೆನ್ ಸ್ಪೂನ್, ಕ್ವಿಜ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಗಳು, ಗುರುಮಠಕಲ್ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿರಸಂಗಿ ಶ್ರೀ
ಬಸವಮಹಾಂತ ಸ್ವಾಮಿಗಳು, ಶ್ರೀ ಶಾಂತವೀರ ಮುರುಘೇಂದ್ರ ಸ್ವಾಮೀಜಿಗಳು, ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಬಿ. ಗುಡಸಿ, ಹರಗುರು ಚರಮೂರ್ತಿಗಳು, ಸುನಿತಾ ಮಲ್ಲಿಕಾರ್ಜುನ, ದೇವಿಕುಮಾರಿ ವಿಶ್ವನಾಥ, ಮೋಕ್ಷಾ ರುದ್ರಸ್ವಾಮಿ, ರುದ್ರಾಣಿ ಗಂಗಾಧರ, ಶೈಲಾ ಜಯಕುಮಾರ, ಗಾಯತ್ರಿ ಶಿವರಾಂ, ಭಾರತಿ ಜ್ಯೋತಿ, ವೀಣಾ ಸುರೇಶಬಾಬು, ಶೈಲಾಬಾಬು, ಇಂದಿರಾ ಜಯದೇವ, ಎಂ. ಪಲ್ಲವಿ, ಅಮೃತಾ ಸಂತೋಷ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ನಾನಾರಾವ, ನಾಗಾನಾಯ್ಕ, ಗಿರೀಶ, ರಘು, ತಿಮ್ಮೇಶ, ಜ್ಞಾನೇಶ್ವರಿ, ನವೀನ, ರಾಜಾನಾಯ್ಕ ನಡೆಸಿಕೊಟ್ಟರು.

ಬುಧವಾರದಂದು ಶರಣಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದ ರಾಜಾಂಗಣದಲ್ಲಿ ಸಿರಿಧಾನ್ಯಗಳಿಂದ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ
ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಈಗಿನ ಕಾಲದಲ್ಲಿ ಜನರು ತಿನ್ನುವ ಆಹಾರವು ತುಂಬಾ ಕಲುಷಿತವಾಗಿದೆ. ಇದರ ಪರಿಣಾಮವಾಗಿ ಇಂದಿನ ಪೀಳಿಗೆಯವರ ಆರೋಗ್ಯ, ಆಯಸ್ಸು ಕೂಡ ಕ್ಷೀಣೀಸುತ್ತಿದ್ದು, ಕೇವಲ ೪೦-೫೦ ವರ್ಷಗಳಿಗೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಹಿಂದಿನ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯಂದಿರುಗಳು ೧೦೦ ವರ್ಷಗಳ ಕಾಲ ಬದುಕುತ್ತಿದ್ದರು. ಅದಕ್ಕೆ ಕಾರಣ ನಮ್ಮ ಹಿರಿಯರು ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿ ಬದುಕಲು ಸಿರಿಧಾನ್ಯಗಳು ಪ್ರಮುಖ ಪಾತ್ರ ವಹಿಸಿದ್ದವು. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಊದಲು ಮತ್ತು ಹಾರಕ ಇವು ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯ ಪ್ರಮುಖ ಭಾಗಗಳಾಗಿವೆ.

ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅಕ್ಕಿ, ಮೈದಾ ಮತ್ತು ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಹೆಚ್ಚಿಸಿಕೊಂಡಿದ್ದೇವೆ. ಇದರಿಂದಾಗಿ ನಮ್ಮ ಸಾಂಪ್ರದಾಯಿಕ ಸಿರಿಧಾನ್ಯಗಳ ಮಹತ್ವವನ್ನು ಕೆಲವೊಮ್ಮೆ ಮರೆತು ಬಿಟ್ಟಿದ್ದೇವೆ. ಇಂದಿನ ಜನರು ಹೆಚ್ಚು ಹೆಚ್ದು ಜಂಕ್ ಅಹಾರಗಳನ್ನು ಸೇವಿಸದೇ ಮನೆಯಲ್ಲೇ ತಯಾರಿಸಿದ ಉತ್ತಮ ಗುಣಮಟ್ಟದ ಆಹಾರವನ್ನು ಬಳಸಬೇಕು.

ಸಿರಿಧಾನ್ಯಗಳು ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಪೌಷ್ಟಿಕ ಧಾನ್ಯಗಳಾಗಿವೆ. ಇವುಗಳಲ್ಲಿ ನಾರಿನಾಂಶ, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಇತರ ಖನಿಜಾಂಶಗಳು ಇರುತ್ತವೆ. ಸಿರಿಧಾನ್ಯಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳಬಹುದು ಎಂದು ನುಡಿದರು.

ಶ್ರೀಗಳು ಸ್ಪರ್ಧಾಳುಗಳು ತಯಾರಿಸಿದ ಸಿರಿಧಾನ್ಯಗಳ ಆಹಾರವನ್ನು ಸೇವಿಸುವ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.

ಈ ಸ್ಪರ್ಧೆಯಲ್ಲಿ ವಿವಿಧ ಬಗೆಯೆ ಖಾದ್ಯಗಳಾದ ರಾಗಿರೊಟ್ಟಿ, ರಾಗಿ ಹಾಲುಬಾಯಿ, ಹುಣಸೆಗೊಜ್ಜು, ರಾಗಿ ಬಿಸ್ಕೆಟ್, ಸಜ್ಜೆ ಉಂಡೆ, ರಾಗಿ ಬ್ರೌನಿ, ಸಿರಿಧಾನ್ಯದಿಂದ ತಯಾರಿಸಿದ ಪಿಜ್ಜಾ, ಐಸ್ ಕ್ರೀಮ್, ಹಾರಕ ಕಿಲ್ಸ, ಸಿರಿಧಾನ್ಯದ ಸೂಪ್, ಹಾರಕ ಪಾಯಸ, ನವಣಕ್ಕಿ ಬುತ್ತಿ, ಅಗಸೆ ಪುಡಿ, ನವಣೆ ಚಿಕ್ಕಿ ಇನ್ನು ಮುಂತಾದ ಸಿರಿಧಾನ್ಯಗಳ ಅಡುಗೆಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು.

ಸ್ಪರ್ಧೆಯಲ್ಲಿ ೨೫ಕ್ಕೂ ಹೆಚ್ಚು ಜನರು ತಾವು ತಯಾರಿಸಿದ ಖಾದ್ಯಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು
ಸ್ವಾಮಿಗಳು, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಶ್ರೀ. ಬಸವ ಮಹಾಂತ ಸ್ವಾಮೀಜಿ, ಶ್ರೀ ಶಾಂತವೀರ ಮುರುಘೇಂದ್ರ ಸ್ವಾಮೀಜಿ ಮುಂತಾದ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಸ್ಪರ್ಧೆಯನ್ನು ಎಸ್.ಜೆ.ಎಂ. ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಪ್ರಾಂಶುಪಾಲರಾದ ಡಾ. ಹರಿಣಿ ಟಿ.ಸಿ ಆಯೋಜಿಸಿದ್ದರು.
ತೀರ್ಪುಗಾರರಾಗಿ ಶ್ರೀಮತಿ ಅನಿತಾ ಶ್ರೀನಾಥ, ಡಾ. ಅಂಬುಜಾಕ್ಷಿ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಡಾ.ಕೆ.ಎನ್. ವಿಶ್ವನಾಥ ನಿರೂಪಿಸಿ, ಕೊಟ್ರೇಶ ಸ್ವಾಗತಿಸಿ, ವಂದಿಸಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ೧೫ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ತೀರ್ಪುಗಾರರಾಗಿ ನಾಗರಾಜ್ ಬೇಂದ್ರೆ ಮತ್ತು ಕಣ್ಣೇಶ ಕಾರ್ಯ ನಿರ್ವಹಿಸಿದರು. ಸುಮಾ ರಾಜಶೇಖರ, ಪಲ್ಲವಿ ರುದ್ರಮನಿ, ಪುಷ್ಪವಲ್ಲಿ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮಹಿಳೆಯರಿಗೆ ಅರೋಗ್ಯ ಶಿಬಿರವೂ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *