ಸೋಲಾಪುರದಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಸೋಲಾಪುರ :

ನಗರದ ಘರಕುಲ ಬಡಾವಣೆ, ಕೈಗಾರಿಕಾ ಪ್ರದೇಶದ ಹೊರವಲಯ ನಿವಾಸಿಗಳಾದ ಅನೀಲ್ ಮತ್ತು ವಿಜಯಲಕ್ಷ್ಮಿ ಜೇವೊರೆ ಅವರ ಮಗ ಮತ್ತು ಮಗಳಿಗೆ ಬೆಂಗಳೂರಿನ ವಚನಮೂರ್ತಿ ಶ್ರೀಶೈಲ ಜಿ. ಮಸೂತೆ ಅವರು ಇಷ್ಟಲಿಂಗ ದೀಕ್ಷೆ ನೀಡಿದರು.

ಈ ಸಂದರ್ಭದಲ್ಲಿ ಅವರು ಅನುಭಾವ ನೀಡುತ್ತಾ, ಜಗತ್ತಿನ ಪ್ರತಿಯೊಂದು ಧರ್ಮದ ಪ್ರವೇಶಕ್ಕೆ ತನ್ನದೇ ಆದ ಧಾರ್ಮಿಕ ಆಚರಣೆ ಇದೆ. ಉದಾಹರಣೆಗೆ ಕ್ರೈಸ್ತ ಧರ್ಮಿಯನಾಗಬೇಕಾದರೆ ಬ್ಯಾಪ್ಟಿಸಮ್ ಕ್ರಿಯಾ ವಿಧಾನ ಇದೆ. ಅದರಂತೆ ಲಿಂಗಾಯತ ಧರ್ಮ ಪ್ರವೇಶಕ್ಕೆ ಇಷ್ಟಲಿಂಗ ದೀಕ್ಷೆ ಇರುವುದು.

ಈ ದೀಕ್ಷೆಯನ್ನು ಹೆಣ್ಣು, ಗಂಡು, ಜಾತಿ, ಮತ, ಪಂಥಗಳ‌ ಯಾವುದೇ ಭೇದವಿಲ್ಲದೆ ಎಲ್ಲರಿಗೂ ನೀಡುವ ಅರಿವಿನ ಮತ್ತು ಸಮಾನತೆಯ ಕುರುಹು ಇಷ್ಟಲಿಂಗ ದೀಕ್ಷೆಯಾಗಿದೆ.

ಬಸವಾದಿ ಶರಣರು ದೇವರನ್ನು ಹೊರಗೆ ಹುಡಕಲಿಲ್ಲ ತನ್ನೂಳಗೆ ಹುಡುಕುವ ಮೂಲಕ ತನ್ನ ತಾ ಅರಿತವನೇ ದೇವ ನೋಡಾ ಎಂಬುದನ್ನು ಶರಣ ಬಾಲಸಂಗಯ್ಯನವರ ವಚನಗಳಲ್ಲಿ ಕಾಣುತ್ತೇವೆ.

ವಚನ;

ಕಲ್ಲು ದೇವರು ದೇವರಲ್ಲ

ಮಣ್ಣು ದೇವರು ದೇವರಲ್ಲ

ಮರದ ದೇವರು ದೇವರಲ್ಲ

ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ ಸೇತುಬಂಧ ರಾಮೇಶ್ವರ

ಗೋಕರ್ಣ ಕಾಶಿ ಕೇದಾರ

ಮೊದಲಾದ ಪುಣ್ಯತೀರ್ಥ ಕ್ಷೇತಗಳಲ್ಲಿರುವ ದೇವರುಗಳು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡ ಅಪ್ರಮಾಣ ಕೂಡಲಸಂಗಮದೇವಾ..!!

ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದಲ್ಲಿ ನಿರಾಕಾರ ಶಿವನನ್ನು ಸಾಕಾರ ರೂಪದ ಇಷ್ಟಲಿಂಗದ ಮೂಲಕ ಪ್ರಾಣ ಚೈತನ್ಯವಾದ ಶಿವನನ್ನು ಅರಿಯುವ ಶಿವಯೋಗ ಇರುವುದರಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆಯುವುದು ಕಡ್ಡಾಯವಾಗಿದೆ.

ಇದನ್ನು ವಚನಮೂರ್ತಿ ಮಸೂದೆ ಅವರು ಸರಳವಾಗಿ ತಿಳಿಸುತ್ತ, ಮಕ್ಕಳಿಗೆ ವಚನಗಳನ್ನು ಹೇಳುತ್ತಾ ಮತ್ತು ದೇವರ ಸ್ವರೂಪದ ಬಗ್ಗೆ ವಿವರಣೆ ನೀಡಿದರು.

ಮಹತ್ವದ ಈ ಕಾರ್ಯದಲ್ಲಿ ಜೇವೂರೆ ಕುಟುಂಬದ ಬಂಧುಗಳು ಮತ್ತು ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಮೆರಗು ತಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
2 Comments
  • ಇಷ್ಟಲಿಂಗ ದೀಕ್ಷೆ ಅರಿವನ್ನು ಮೂಡಿಸುವ ಕಾರ್ಯಕ್ರಮ. ಅಭಿನಂದನೆಗಳು. ಶರಣು ಶರಣಾರ್ಥಿಗಳು

  • ವಚನಮೂರ್ತಿ ಶರಣ ಶ್ರೀಶೈಲ ಮಸೂತೆಯವರು ಮಾಡುತ್ತಿರುವ ಜಾಗೃತಿ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಮತ್ತು ಸೇವೆ ಶ್ಲಾಘನೀಯ ಮತ್ತು
    ಉಪಮಾತೀತ.

Leave a Reply

Your email address will not be published. Required fields are marked *