ಮೈಸೂರು ಶರಣ ಸಾಹಿತ್ಯ ಸಮ್ಮೇಳನದಿಂದ ಹಿಂದೆ ಸರಿದ ಮಲ್ಲೇಪುರಂ ವೆಂಕಟೇಶ್

ಬಸವ ಮೀಡಿಯಾ
ಬಸವ ಮೀಡಿಯಾ

ನಾಳಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಮಲ್ಲೇಪುರಂ ವೆಂಕಟೇಶ್ ಶರಣ ಸಾಹಿತ್ಯ ಪರಿಷತ್ತಿನ ಮ.ಗು. ಸದಾನಂದಯ್ಯ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ

ಮೈಸೂರು

ನಗರದಲ್ಲಿ ನಾಳೆ ನಡೆಯುತ್ತಿರುವ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಲ್ಲೇಪುರಂ ವೆಂಕಟೇಶ್ ಅವರು ಭಾಗವಹಿಸುತ್ತಿಲ್ಲ ಎಂದು ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷ ಮ.ಗು. ಸದಾನಂದಯ್ಯ ಹೇಳಿದ್ದಾರೆ.

ಬಸವಾದಿ ಶರಣರ ಸಂದೇಶವನ್ನು ತಿರುಚಿರುವ ವಚನ ದರ್ಶನ ಪುಸ್ತಕದ ತಂಡದ ಮಲ್ಲೇಪುರಂ ವೆಂಕಟೇಶ್ ಅವರನ್ನು ಸಮ್ಮೇಳನಕ್ಕೆ ಆಹ್ವಾನಿಸಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು.

ಬಸವ ತತ್ವ ವಿರೋಧಿಗಳಿಗೆ ಲಿಂಗಾಯತ ಸಮಾವೇಶದಲ್ಲಿ ವೇದಿಕೆ ಕಲ್ಪಿಸುವ ಶರಣ ಸಾಹಿತ್ಯದ ಪರಿಷತ್ತಿನ ಉದ್ದೇಶ, ಕಾರ್ಯ ವೈಖರಿ, ಬಸವ ಬದ್ಧತೆಯನ್ನು ಅನೇಕರು ಪ್ರಶ್ನಿಸಿದ್ದರು.

ಬಸವ ಮೀಡಿಯಾದ ಜತೆ ಮಾತನಾಡುತ್ತ ಸದಾನಂದಯ್ಯ “ನೆನ್ನೆ ಮಲ್ಲೇಪುರಂ ವೆಂಕಟೇಶ್ ಅವರು ಕರೆ ಮಾಡಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು,” ಎಂದು ತಿಳಿಸಿದರು.

“ಇಷ್ಟೊಂದು ದೊಡ್ಡ ವಿವಾದವಾಗಿರುವುದು ಗೊತ್ತಾಗಿದೆ. 39 ವರ್ಷಗಳ ನಂತರ ಒಳ್ಳೆಯ ಕಾರ್ಯಕ್ರಮ ನಡೆಸುತ್ತಿದೀರ. ನನಗೆ ಶರಣ ಸಾಹಿತ್ಯ ಪರಿಷತ್ತಿನ ಬಗ್ಗೆ ಮತ್ತು ಬಸವಾದಿ ಶರಣರ ಬಗ್ಗೆ ತುಂಬಾ ಅಭಿಮಾನವಿದೆ. ನನ್ನಿಂದ ಗೊಂದಲವಾಗುವುದು ಬೇಡ,” ಎಂದು ಮಲ್ಲೇಪುರಂ ವೆಂಕಟೇಶ್ ಸದಾನಂದಯ್ಯ ಅವರಿಗೆ ತಿಳಿಸಿದರು.

ನಾಳಿನ ಸಮಾವೇಶದಲ್ಲಿ ವಿಚಾರ ಸಂಕಿರಣದ ನಂತರ ಮಲ್ಲೇಪುರಂ ವೆಂಕಟೇಶ್ ಅವರು ಸಮಾರೋಪ ಭಾಷಣ ಮಾಡಬೇಕಿತ್ತು. ಈಗ ಅವರ ಬದಲು ಸಮ್ಮೇಳನದ ಸರ್ವಾಧ್ಯಕ್ಷರಾದ ಓ ಎಲ್ ನಾಗಭೂಷಣ ಸ್ವಾಮಿಯವರು ಸಮಾರೋಪದ ಭಾಷಣ ಮಾಡುತ್ತಾರೆ, ಎಂದು ಸದಾನಂದಯ್ಯ ಹೇಳಿದರು.

ಮಲ್ಲೇಪುರಂ ವೆಂಕಟೇಶ್ ಅವರು ಭಾಗವಹಿಸಿದ್ದು ವಿವಾದವಾದ ಮೇಲೆ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿರುವ ಮೂರು ಪ್ರಸಿದ್ಧ ಚಿಂತಕರು ಸಮಾವೇಶವನ್ನು ಬಹಿಷ್ಕರಿಸುವ ನಿರ್ಧಾರವನ್ನು ಇಂದು ಆಯೋಜಕರಿಗೆ ಮತ್ತು ಮಾಧ್ಯಮಗಳಿಗೆ ತಿಳಿಸುವವರಿದ್ದರು.

ಈಗ ಮಲ್ಲೇಪುರಂ ವೆಂಕಟೇಶ್ ಅವರ ತಾವಾಗಿಯೇ ಹಿಂದೆ ಸರಿದಿರುವುದರಿಂದ ಇವರೆಲ್ಲರೂ ಮತ್ತೆ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

“ಈ ಸಮಾವೇಶದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ವಿಚಾರ ಸಂಕಿರಣಕ್ಕೆ ಕೊಟ್ಟಿರುವ ವಿಷಯಗಳಲ್ಲಿಯೂ ವೈದಿಕತೆ ತುರುಕುವ ಪ್ರಯತ್ನ ನಡೆದಿದೆ. ಇದರ ಬಗ್ಗೆಯೂ ಗಮನವಿರಲಿ,”


ಇವರಲ್ಲಿ ಒಬ್ಬರು ಬಸವ ಮೀಡಿಯಾದ ಜೊತೆ ಮಾತನಾಡುತ್ತ “ಈ ಸಮಾವೇಶದಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ವಿಚಾರ ಸಂಕಿರಣಕ್ಕೆ ಕೊಟ್ಟಿರುವ ವಿಷಯಗಳಲ್ಲಿಯೂ ವೈದಿಕತೆ ತುರುಕುವ ಪ್ರಯತ್ನ ನಡೆದಿದೆ. ಇದರ ಬಗ್ಗೆಯೂ ಗಮನವಿರಲಿ,” ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
8 Comments
    • ಲಿಂಗಾಯಮತ ತತ್ವ ಮತ್ತು ಆಚರಣೆಗಳಿಗೆ ಬದ್ಧತೆಯಿಂದ ನಡೆದುಕೊಳ್ಳದ ಮಠ ಮಾನ್ಯಗಳ ನಡೆಯನ್ನು ಪ್ರಶ್ನಿಸುವ ಬಸವಾಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ.

  • ಜಾಗೃತ ಲಿಂಗಾಯತ ಸಮಾಜ ಅದರ ಮೇಲೆ ನಡೆಯುವ ಇಂತಹ ಕುಕೃತ್ಯಗಳನ್ನು ಖಂಡಿತಾ ಸಹಿಸುವುದಿಲ್ಲ.

  • ಭಕ್ತರಿಂದ ಮಠ, ಗುರು.

    ದಾರಿ ತಪ್ಪಿದ ಗುರುಗೇ ಶಿಷ್ಯರು, ಹೊರಗಿನ ದಾರಿ ತೋರಿಸಬೇಕು.
    ಕನ್ನೇರೀಮಠದ ಕುಂ ಕುಂ ದಾರಿಗೂ ಅವರು ಪ್ರತಿಪಾದಿಸುವ ಹಿಂದೂ ಧರ್ಮ ಪ್ರಚಾರಕ್ಕೆ ಅನುಕೂಲ ಮಾಡಿಕೊಡಲು ಭಕ್ತರು, ಅವರ ದಾರಿ ಅವರಿಗೆ ಮುಕ್ತ ಮಾಡಿ, ಬೇರೆ ಬಸವ ತತ್ವದ ಮೇಲೆ ನಂಬಿಕೆ ಇರುವ ವವರನ್ನು ಪೀಠಕ್ಕೆ ನೇಮಿಸಬೇಕು.

    • ಹೌದು ದೇಶಿ ಮತ್ತು ಸಾವಯವ ಕೃಷಿಯ ಬಗ್ಗೆ ಅವರು ಮಾಡುತ್ತಿರುವ ಸಲಹೆ, ಉಪದೇಶಗಳನ್ನು ನಾವೂ ಕೂಡ ಗೌರವಿಸುತ್ತಿದ್ದೇವು ಈಗ ಅವರ ಬಗ್ಗೆ ಬೇಸರವಾಗುತ್ತಿದೆ.

  • ಬಸವತತ್ತ್ವವಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಎಡಬಿಡಂಗಿಗಳಿಗೆ ತಮ್ಮ ಆಟ ನಡೆಯುವುದಿಲ್ಲ ಎಂದು ಮನವರಿಕೆಯಾಗುತ್ತಿದೆ. ಇದು ಸಂತಸದಾಯಕ ಬೆಳವಣಿಗೆ🙏🙏

  • ಬಸವ ಭಕ್ತರ ನಿರಂತರ ಪ್ರಬಲ ವಿರೋಧಕ್ಕೆ ಜಯವಾಗಿದೆ.ಶರಣರ ಮೇಲಿನ ಅಪಾರ ಗೌರವ ಭಕ್ತಿ,ಶಕ್ತಿ ಸಂದ ಜಯವಾಗಿದೆ. ಇನ್ನು ಮುಂದಾದರೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳು ಯೋಚಿಸಿ ಶರಣರ ಬಗೆಗಿನ ಕಾರ್ಯಕ್ರಮ ಹಮ್ಮಿಕೊಳ್ಳುವತ್ತ ಯೋಚಿಸಲಿ

  • ಇದೊಂದು ಜಾಗೃತಿಯ ಬೆಳವಣಿಗೆ ,ಇಂಥಹ ಜಾಗೃತಿ ಕಾಯ೯ಗಳು ಮುಂದೆ ನಡೆಯುವ ಯಲ್ಲಾ ಕಾಯ೯ಕ್ರಮಗಳಲ್ಲಿ ನಡೆದು ಲಿಂಗಾಯತ ಧಮ೯ & ಶರಣ ಪರಂಪರೆಗೆ ಅಪಚಾರವಾಗದಿರಲೆಂದು ನಮ್ಮೆಲ್ಲರ ಅಶಯವಾಗಲಿ.

Leave a Reply

Your email address will not be published. Required fields are marked *