ಲಿಂಗಾಯತರ ಮೇಲೆ ದಾಳಿ ಮಾಡುತ್ತಿರುವ ಸಂಘಟನೆಗಳ ಪ್ರತಿನಿಧಿಯನ್ನು ಶರಣ ಸಾಹಿತ್ಯ ಸಮಾವೇಶಕ್ಕೆ ಕರೆದಿರುವ ಕಾರಣವೇನು?
ಬೆಂಗಳೂರು
(ಶರಣ ಸಾಹಿತ್ಯ ಸಮಾವೇಶದ ವಿವಾದದ ಬಗ್ಗೆ ಬಸವ ಮೀಡಿಯಾ ಕೇಳಿದ ಪ್ರಶ್ನೆಗಳಿಗೆ ಎಸ್ ಎಂ ಜಾಮದಾರ್ ಅವರ ಪ್ರತಿಕ್ರಿಯೆ)
ವಚನ ದರ್ಶನದ ಮಲ್ಲೇಪುರಂ ವೆಂಕಟೇಶ್ ಅವರನ್ನು ಶರಣ ಸಾಹಿತ್ಯ ಸಮ್ಮೇಳನಕ್ಕೆ ಕರೆದಿರುವ ಬಗ್ಗೆ ಹಲವಾರು ಜಿಲ್ಲೆಗಳಲ್ಲಿ ಉಗ್ರ ವಿರೋಧ ವ್ಯಕ್ತವಾಗುತ್ತಿದೆ. ಖಾಸಗಿಯಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಪೂರ್ತಿ ಈ ವಿಷಯ ಚರ್ಚೆಯಾಗುತ್ತಿದೆ.
ಹಾಗಿದ್ದಾಗ್ಯೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ ಸೋಮಶೇಖರ್ ಅವರು ಇದು ತಮ್ಮ ಒಪ್ಪಿಗೆಯಿಲ್ಲದೆ ಜಿಲ್ಲಾ ಘಟಕ ತೆಗೆದುಕೊಂಡಿರುವ ನಿರ್ಧಾರ ಎಂದು ಹೇಳಿದ್ದು ಯಾರೂ ಒಪ್ಪುವ ಮಾತಲ್ಲ.
ಸಾವಿರಾರು ಜನ, ಪ್ರಮುಖ ಸ್ವಾಮೀಜಿಗಳು, ಚಿಂತಕರು ಬರುತ್ತಿರುವ ಈ ಸಮಾವೇಶದಲ್ಲಿ ಅಧ್ಯಕ್ಷರ ಪಾತ್ರ ಏನೂ ಇಲ್ಲವೆಂದು ಹೇಳುವುದು ಹಾಸ್ಯಾಸ್ಪದ. ಇದು ಬಿಸಿ ತಟ್ಟಿದ ಮೇಲೆ ಯಾರೋ ಬಡಪಾಯಿಯ ಮೇಲೆ ಗೂಬೆ ಕೂರಿಸಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ.
ಕಳೆದ ಒಂದು ವರ್ಷದಿಂದ ಬಸವಾದಿ ಶರಣರಿಗೆ ಅಪಚಾರವೆಸಗುವ, ಅವರ ಮೂಲ ಆಶಯಗಳನ್ನು, ವಚನಗಳನ್ನು ತಿರುಚುವ, ಬಸವ ತತ್ವದ, ಲಿಂಗಾಯತ ಸಮಾಜದ ಮೇಲೆ ದಬ್ಬಾಳಿಕೆ ಮಾಡುವ, ಬೌದ್ಧಿಕ ದೌರ್ಜನ್ಯವೆಸಗುವ, ಪ್ರಯತ್ನ ನಡೆಯುತ್ತಿದೆ.
ಈ ದಾಳಿಯ ಹಿಂದಿರುವ ಸಂಘಟನೆಗಳ ಪ್ರತಿನಿಧಿಗೆ ಶರಣ ಸಾಹಿತ್ಯ ಸಮಾವೇಶದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿರುವುದರ ಹಿಂದಿನ ತರ್ಕವೇನು? ಲಿಂಗಾಯತ ಪ್ರೇಕ್ಷಕರಲ್ಲಿ ವಚನ ದರ್ಶನದ ವಾದಗಳನ್ನು ಬಿತ್ತಲು ಇವರಿಗೆ ಬಂದಿರುವ ಒತ್ತಡವೇನು?
ಪರಿಷತ್ತಿನ ಅಧ್ಯಕ್ಷರು ಲಿಂಗಾಯತರ ಮೇಲಿನ ದಾಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನೂ ಗಮನಿಸಬೇಕು.
ಇದು ಮೊದಲಿನ ಲಿಂಗಾಯತ ಸಮಾಜವಲ್ಲ. ಇಂದು ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಏಳು ನೂರು ಲಿಂಗಾಯತ ಸಂಘಟನೆಗಳಿವೆ.
ಇವುಗಳಲ್ಲಿ ಅಧ್ಯಾತ್ಮಕ್ಕೆ ಸೀಮಿತವಾದ ಸೌಮ್ಯವಾದಿಗಳಿದ್ದಾರೆ, ಗಂಭೀರವಾದ ಅಧ್ಯಯನ ಮಾಡಿರುವ ಚಿಂತಕರಿದ್ದಾರೆ, ಮೊದಲು ಭಾವನಾತ್ಮಕವಾಗಿ ಸ್ಪಂದಿಸುವ ಉಗ್ರವಾದಿಗಳು ಇದ್ದಾರೆ, ಬಸವಣ್ಣನವರನ್ನೇ ನಂಬಿ ಬದುಕುತ್ತಿರುವ ಜನ ಸಾಮಾನ್ಯರೂ ಇದ್ದಾರೆ.
ಬಸವಣ್ಣನವರಿಗೆ ಅಪಚಾರವೆಸಗುವ ಪ್ರಯತ್ನಗಳು ಕಂಡಾಗ ಇವರೆಲ್ಲ ಒಂದೇ ಉಸಿರಿನಂತೆ ಹೇಗೆ ಒಂದಾಗುತ್ತಾರೆ ಎಂದು ಅರಿವಿರುವ ಯಾರೂ ಇಂತಹ ಸಾಹಸಕ್ಕೆ ಕೈ ಹಾಕುವುದಿಲ್ಲ.
ಬಹಳ ವರ್ಷಗಳಿಂದ ಲಿಂಗಾಯತರ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಲಿಂಗಾಯತ ಸಂಘಟನೆಗಳು ಮತ್ತು ಕೆಲವು ಮಠಾಧೀಶರು ಬಸವ ತತ್ವಕ್ಕೆ ವಿರುದ್ದವಾಗಿ ನಡೆಯುವ ಚಟ ಮಾಡಿಕೊಂಡಿದ್ದಾರೆ. ಅವರಿಗೆ ಈಗ ಪ್ರಬಲ ವಿರೋಧ ಬರಲು ಶುರುವಾಗಿದೆ.
ಬದಲಾದ ಕಾಲಕ್ಕೆ ತಕ್ಕಂತೆ ಇವರ ಮನಸ್ಥಿತಿ ಬದಲಾಗದಿದ್ದರೆ ಬರುವ ದಿನಗಳಲ್ಲಿ ಇವರಿಗೆ ಸಮಸ್ಯೆಯಾಗಲಿದೆ.
ಶರಣ ಸಾಹಿತ್ಯ ಪರಿಷತ್ತಿಗೆ ಇಂತಹ ವಿವಾದ ಸದ್ಯಕ್ಕೆ ಬೇಕಿರಲಿಲ್ಲ. ಗೊರುಚ ಅವರು ಸಕ್ರಿಯ ಪಾತ್ರದಿಂದ ನಿರ್ಗಮನವಾದ ಮೇಲೆ ಈ ಸಂಸ್ಥೆ ತನ್ನ ಗುಣಮಟ್ಟ ಉಳಿಸಿಕೊಂಡಿಲ್ಲ. ಅದರ ಸಂಘಟನೆಯಲ್ಲಿ ಸಮಸ್ಯೆಗಳು ಕಾಣುತ್ತಿವೆ. ಅದು ಪ್ರಕಟ ಮಾಡುವ ‘ಮಹಾಮನೆ’ ಮಾಸ ಪತ್ರಿಕೆಯಲ್ಲಿ ಆಗಾಗ ಪ್ರಶ್ನಾರ್ಹ ಲೇಖನಗಳೂ ಬರುತ್ತಿವೆ.
ಶರಣ ಸಾಹಿತ್ಯ ಪರಿಷತ್ ಸುತ್ತೂರು ಮಠ ಸ್ಥಾಪಿಸಿ, ನಡೆಸುತ್ತಿರುವ ಸಂಸ್ಥೆ. ನಾಡಿನ ಪ್ರಮುಖ ಮಠಾಧೀಶರು ಇದರಲ್ಲಿ ಪದಾಧಿಕಾರಿಗಳಾಗಿದ್ದಾರೆ. ಒಂದು ಕಾಲದಲ್ಲಿ ಪ್ರತಿಷ್ಠಿತವಾಗಿದ್ದ ಈ ಸಂಸ್ಥೆಗೆ ಸರಿಯಾಗಿ ಸರಿಯಾದ ಮಾರ್ಗದರ್ಶನವನ್ನು ಇವರುಗಳೆಲ್ಲಾ ಮಾಡಬೇಕೆಂದು ವಿನಂತಸಿಕೊಳ್ಳುತೇನೆ.
ಜಾಮದಾರ್ ಸಾರ್ ಹೇಳಿರುವದಕ್ಕೆಲ್ಲ ನನ್ನ ಬೆಂಬಲವಿದೆ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೇ ಈಗಲೂ ಕಾಲ ಮಿಂಚಿಲ್ಲ. ಬಸವ ವಿರೋಧಿ ಸಂಘಟನೆ ಗಳೊಂದಿಗೆ ಕೈ ಜೋಡಿಸಿದ ಸಂಸ್ಕೃತ ಪಂಡಿತರನ್ನು ಕರೆಯಬೇಡಿ.
ಶರಣ ಸಾಹಿತ್ಯ ಪರಿಷತ್ತು ನಿಧಾನವಾಗಿ ಮನುವಾದಿಗಳ ಅಜ್ಙೆಯಂತೆ ಕೆಲಸ ಯಯಮಾಡುತ್ತಿದೆಯೇನೋ ಅಂತ ಅನಿಸುತ್ತದೆ
ಜಾಮದಾರ್ ಸರ್ ಹೇಳಿರುವುದಕ್ಕೆ / ಪ್ರಶ್ನೆ ಮಾಡಿರುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ………ಶರಣು ಶರಣಾರ್ಥಿಗಳು ಸಾರ್
🙏🙏
ಸಾವಿರಾರು ಕೋಟಿ ಆಸ್ತಿ ಬೆಳೆಸಲು ನನ್ನ ಕಾಲದಲ್ಲೇ ಸಾಧ್ಯವಾಯಿತು ಇದನ್ನು ಉಳಿಸಿ ಬೆಳೆಸಲು ನನ್ನ ರಕ್ತಸಂಬಂಧಿಯೇ ಉತ್ತರಾಧಿಕಾರಿಯಾಗಬೇಕು ಎಂಬ ಧೋರಣೆ ಯುಳ್ಳ ವಿರಕ್ತ ಕಾವಿಧಾರಿಗಳನ್ನು ಸರ್ವ ಸಂಗ ಪರಿತ್ಯಾಗಿಗಳೆನ್ನಬಹುದೇ? ಕೂರು ಎಂದಾಗ ಕೂರು ನಿಲ್ಲು ಎಂದಾಗ ನಿಲ್ಲುವಂತಹ ಭಕ್ತರು ಮಾತ್ರ ಬೇಕೆ? ಲಿಂಗಾಯತ ಸಮಾಜ ಕಟ್ಟಿಕೊಂಡು ನನಗೇನಾಗಬೇಕು… ನಾನಿರುವತನಕ ಎಂಬ ಧೋರಣೆ ಪ್ರಶ್ನಾರ್ಹವಲ್ಲವೇ?!
ಶರಣು ಶರಣಾರ್ಥಿ. ಬಸವಪರ ಸಂಘಟನೆಗಳನ್ಮು ದುರ್ಬಲಗೊಳಿಸಲು, ಗೋಮುಖ ವ್ಯಾಘ್ರರಂತೆ ಸನಾತನ ಮಾಫಿಯ ಕೆಲಸ ಮಾಡುತ್ತಿರುವ ಸೂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮೊದಲಿಗಿಂತಲೂ ಲಿಂಗಾಯತರು ಈಗ ಹೆಚ್ಚು ಜಾಗ್ರತರಾಗುವ ಅಗತ್ಯ ಇದೆ
ಮೈಸೂರ್ ನಲ್ಲಿ ಇದೆ ತಿಂಗಳ 23 ರಂದು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮಕ್ಕೆ ವಚನ ಸಾಹಿತ್ಯ ವಿರೋಧಿ ಮನುವಾದಿಗಳ ಪರ ವಕಾಲತ್ತು ವಹಿಸುವ ಮತ್ತು ವಚನಗಳ ಮೂಲ ವೇದ, ಆಗಮ,ಉಪನಿಷತ್ತುಗಳು ಹಾಗೂ ಸಿದ್ಧಾಂತ ಶಿಖಾಮಣಿ ಎಂದು ವಚನ ದರ್ಶನ ಪುಸ್ತಕದ ಮುನ್ನುಡಿ ಬರೆದಿರುವ ಶ್ರಮಿಕ ವರ್ಗದಿಂದ ಬಂದರೂ ಪುರೋಹಿತ ಶಾಹಿ ಶಕ್ತಿಗಳ ಬೆಂಬಲಿಗರಾಗಿರುವ ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ಆಹ್ವಾನಿಸಿರುವುದು ಶರಣ ಸಾಹಿತ್ಯದ ಅನುಯಾಯಿಗಳಿಗೆ ಅವಮಾನ ಮಾಡಿದಂತೆ ಆಗಿದೆ. ಜಮಾದಾರ್ ಸರ್ ಅಭಿಪ್ರಾಯ ಸರಿ ಇದೆ.
ಈಗೂ ಕಾಲ ಮಿಂಚಿಲ್ಲ ಆ ಸಂಗಿ ಹೆಸರನ್ನು ತಗೆದು ಹಾಕಿ. ಅಧ್ಯಕ್ಷರು ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲಿ. ನಾವು ಸುಮ್ಮನೆ ಕೂಡುವವರಲ್ಲ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶರಣರ ವಚನ ಸಾಹಿತ್ಯವನ್ನು ಪ್ರಚಾರ, ಪ್ರಸಾರ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿಯೇ ಸಾವಿರಾರು ಜನ ಸದಸ್ಯರಾಗಿದ್ದಾರೆ. ವಚನ ವಿರೋಧಿಗಳನ್ನು ಕರೆಸಿ ಸಮಾರೋಪ ಕಾರ್ಯಕ್ರಮದಲ್ಲಿ ಉಪನ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದು ಸಾವಿರಾರು ಸದಸ್ಯರಿಗೆ, ಬಸವ ಭಕ್ತರಿಗೆ ಅತ್ಯಂತ ನೋವಿನ ಸಂಗತಿ. ಅಧ್ಕಕ್ಷರು ಇದನ್ನು ಅಲಕ್ಷಿದೆ, ತುರ್ತು ಗಮನ ಹರಿಸಿ ಅದ ಪ್ರಮಾದವನ್ನು ಸರಿಪಡಿಸಬೇಕು. ಡಾ. ಜಾಮದಾರ ಸರ ಅವರ ಸಮಯೋಚಿತ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ಪುನರ್ ರೂಪಿಸಿ ಸದಸ್ಯರ ಭಾವನೆಗೆ ಸ್ಪಂದಿಸಬೇಕು. ಇಲ್ಲವಾದರೆ ಅದು ಒಂದು ವಚನ ವಿರೋಧಿ, ಶರಣ ವಿರೋಧಿ ಸಂಘಟನೆ ಆದೀತು. ಸರ್ವ ಬಸವಾಭಿಮಾನಿಗಳು ಅಸಮಾಧಾನ ಆಗುವದರಲ್ಲಿ ಸಂದೇಹವಿಲ್ಲ.
ಪರ್ಯಾಯವಾದ ಬಸವಾದಿ ಶರಣರ ವಚನ ಪರಿಷತ್ ಅವಶ್ಯಕತೆ ಇದೇ……
ಈ ಕುನ್ನಿಗಳು ಶರಣಸಾಹಿತ್ಯವನ್ನು ಮನುವಾದಕ್ಕೆ ಅಂಟಿಸಿಬಿಡುತ್ತಾರೆ…
ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ನಡೆದು ಶರಣರನ್ನು ಹತ್ಯೆಗೈದ ಪಳೆಯುಳಿಕೆಗಳೊಂದಿಗೆ ಕೈಜೋಡಿಸುವ ಜನರೇ.ನಾಚಿಕೆ ಆಗೋದಿಲ್ವಾ ನಿಮಗೆ?!
ಜಾಮದಾರ ಸರ್ ಅವರ ಹೇಳಿಕೆಗೆ ಸಂಪೂರ್ಣ ನಮ್ಮ ಬೆಂಬಲವಿದೆ. ಲಿಂಗಾಯತರು ಈಗ ಕೈ ಕಟ್ಟಿ ಕೂಡುವ
ಕಾಲವಲ್ಲ ಹುಸಿ ಬಸವತತ್ವ ಸೋಗು ಹಾಕಿಕೊಂಡ
ಅಂತರಂಗ ವೈರಿಗಳನ್ನು ಮತ್ತು ಲಿಂಗಾಯತಕ್ಕೆ ಸ್ವತಂತ್ರ
ಮಾನ್ಯತೆ ಸಿಗಬಾರದು ಎಂದು ಬಸವ ಧರ್ಮವನ್ನು
ವೈದಿಕಕರಣ ಗೂಳಿ ಸುತ್ತಿರುವ ಬಹಿರಂಗ ಕೋಮುವಾದಿ
ವೈರಿಗಳನ್ನು ಏಕಕಾಲಕ್ಕೆ ಹಿಮ್ಮೆಟ್ಟಿಸುವ ಹೋರಾಟ ತೀವ್ರಗೂಳಿಸಬೇಕಾಗಿದೆ.
ಸಂಬಂದ ಪಟ್ಟ ಮಹನೀಯರು ಕೂಡಲೆ ಲಿಂಗಾಯತರ ಕೂಗಿ ಮನ್ನಣೆ ನೀಡಿ ಮಲ್ಲೇಪುರಂ ವೇಂಕಟೇಷ್ ರವರನ್ನು ಕಾರ್ಯಕ್ರಮದಿಂದ ಕೈಬಿಟ್ಟು ಕಾರ್ಯಕ್ರಮ ನಡೆಸಲು ಮುಂದಾಗಬೇಕು.
ಜಮಾದಾರ್ ಅವರು ಹೇಳಿದಂತೆ ಅಧ್ಯಕ್ಷರ ಗಮನಕ್ಕೆ ತಾರದೆ ಮಲ್ಲೇಪುರಂ ವೆಂಕಟೇಶ್ ಅವರನ್ನು ಮೈಸೂರು ಜಿಲ್ಲಾ ಘಟಕ ಆಹ್ವಾನಿಸಿದೆ ಅನ್ನುವ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ. ಬದಲಾಗಿ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ಅವರ ಆಹ್ವಾನವನ್ನು ಹಿಂತೆಗೆದುಕೊಳ್ಳಲಿ ಮತ್ತು ಮುಂದೆ ಇಂತಹ ಪ್ರಮಾದಗಳು ಆಗದಂತೆ ಎಚ್ಚರವಹಿಸಲಿ. ಲಿಂಗಾಯತ ಸಮಾಜ ಜಾಗೃತಗೊಂಡಿದೆ.
ಹೌದು ಜಾಮದಾರ್ ಸರ್ ಹೇಳುವಂತೆ ಇತ್ತೀಚೆಗೆ ಲಿಂಗಾಯತ ಸಂವೇದನೆ ತೀಕ್ಷ್ಣವಾಗಿದೆ ಇದರಿಂದ ಯಾವ ಸ್ವಾಮೀಜಿಯಾಗಲಿ ಮತ್ತೆ ಯಾವುದೇ ಅಹಂಕಾರಿಯಾಗಲೀ ಸ್ವಲ್ಪ ಎಚ್ಚರ ತಪ್ಪಿದರೂ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ
ಹೌದು ಈ ಜನ ಮೇಲಿಂದ ಮೇಲೆ ಲಿಂಗಾಯತ ತತ್ವದ ಮೇಲೆ ದಾಳಿ ಮಾಡುತ್ತಲೆ ಇದ್ದಾರೆ ಇದೆಲ್ಲಾ ನೋಡಿ ಸುಮ್ಮನಿರಲಾಗದು. ಇವರು ಪುರೋಹಿತಶಾಹಿಗಳು ಯಾವಾಗಲು ನಾವು ಮೇಲೆ ಎನ್ನುವ ಅಹಂ ಇವರಲ್ಲಿದೆ. ಧಕ್ಕಾರವಿರಲಿ ಇವರಿಗೆ.
ನಿಜವಾದ ಲಿಂಗಾಯತ ಧರ್ಮದ ಪೋಷಕರಾದ ಜಮದಾರ್ ಸರ್ ಅವರಿಗೆ ನನ್ನ ಅನಂತಕೋಟಿ ಪ್ರಣಾಮಗಳು ಹ್ಯಾಟ್ಸಾಫ್ ಸರ್ ಅಭಿನಂದನೆಗಳು ಧರ್ಮೋ ರಕ್ಷತಿ ರಕ್ಷತಹಾ: ಲಿಂಗಾಯತ ಧರ್ಮಕೇ ಜಯವಾಗಲಿ ಜೈ ಬಸವೇಶ್ವರ.🙏🙏🌹 ಶರಣು ಶರಣಾರ್ಥಿಗಳು.
👍👏sir we are saport