ಶರಣ ಸಾಹಿತ್ಯ ಸಮಾವೇಶದಿಂದ ಮಲ್ಲೇಪುರಂ ವೆಂಕಟೇಶ್ ಅವರ ಹೆಸರನ್ನು ಕೈಬಿಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ
ನಂಜನಗೂಡು
ಶರಣ ಸಾಹಿತ್ಯ ಪರಿಷತ್ ಶರಣರ ವಚನಪೂರಕ ಅನುಭಾವ ವಾಣಿಯನ್ನು ಸಮಾಜಕ್ಕೆ ಬಿತ್ತರಿಸುವ ಉದ್ದೇಶದಿಂದಲೇ ಉದಯವಾಯಿತು. ಆದರೆ ಇಂದು ಆ ಉದ್ದೇಶ ಸಫಲತೆಯ ಬದಲಾಗಿ ವಿಫಲತೆಯೆಡೆಗೆ ಕೊಂಡೊಯ್ಯುತ್ತಿರುವುದು ಸಮಾಜದ ದುರ್ದೈವ.
ಪರಿಷತ್ತಿನ ಮೈಸೂರು ಜಿಲ್ಲಾ ಘಟಕ ಮಾರ್ಚ್ 23 ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಲು ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರಿಗೆ ಅಹ್ವಾನ ನೀಡಿದೆ.
ನಾನು ಮಲ್ಲೇಪುರಂ ಅವರ ಅನೇಕ ಲೇಖನಗಳನ್ನು ಓದಿರುವೆ. ಅವರ ಲೇಖನಗಳಲ್ಲಿ ವಚನಗಳ ಪ್ರಭಾವವಿಲ್ಲ, ವಚನಗಳನ್ನು ಐತಿಹಾಸಿಕವಾಗಿ ಹತ್ತಿಕ್ಕಲು ಶ್ರಮಿಸಿರುವ ಸಿದ್ದಾಂತದ ನೆರಳೇ ಕಾಣುತ್ತದೆ.
ಅವರು ಮುನ್ನುಡಿ ಬರೆದ ‘ವಚನ ದರ್ಶನ’ ಪುಸ್ತಕ ವಚನಗಳು ವೇದ ಉಪನಿಷತ್ತುಗಳ ಭಾಗ, ಸಂಸ್ಕೃತದಲ್ಲಿ ಇದ್ದದ್ದನ್ನೇ ಶರಣರು ಕನ್ನಡಕ್ಕೆ ಅನುವಾದ ಮಾಡಿದರು ಅನ್ನುವ ವಾದಗಳನ್ನು ಮಂಡಿಸುತ್ತವೆ. ‘ವಚನದರ್ಶನ’ ಪುಸ್ತಕದ ತಂಡ ಕಲ್ಯಾಣದಲ್ಲಿ ನಡೆದ ಕ್ರಾಂತಿಯನ್ನು ನಿರಾಕರಿಸುತ್ತಾರೆ, ಲಿಂಗಾಯತ ಹಿಂದೂ ಧರ್ಮದ ಭಾಗ, ವಚನಗಳನ್ನು ಮಾನವರು ಬರೆಯಲಿಲ್ಲ, ದೈವಿಶಕ್ತಿಯಿಂದ ಸೃಷ್ಟಿಯಾಗಿವೆ ಎಂದೆಲ್ಲಾ ಹೇಳುತ್ತಾರೆ.
ಇಂತಹ ಬಸವಾದಿ ಶರಣರ ವಚನಗಳಿಗೆ ವಿರುದ್ಧವಾದ, ಸಮಾಜಕ್ಕೆ ತಪ್ಪು ಕಲ್ಪನೆ ಮೂಡಿಸುವ ದುರ್ವಿಚಾರ ಈ ಪುಸ್ತಕದಲ್ಲಿ ಬಂದಿರುತ್ತದೆ. ಈ ಪುಸ್ತಕದಲ್ಲಿರುವ ಸಂದೇಶವನ್ನು ಜನರಿಗೆ ಮುಟ್ಟಿಸಲು ಹಲವಾರು ನಗರಗಳಲ್ಲಿ ಅದನ್ನು ದೂಡ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಯಿತು. ಅವುಗಳಲ್ಲಿ ಮಲ್ಲೇಪುರಂ ವೆಂಕಟೇಶ್ ಪ್ರಮುಖವಾಗಿ ಕಾಣಿಸಿಕೊಂಡು ಭಾಷಣ ಮಾಡಿದ್ದರು.
ಲಿಂಗಾಯತರ ಶ್ರಮದಿಂದ ಏರ್ಪಡಿಸಿರುವ ಸಮಾವೇಶದಲ್ಲಿ ಬಸವ ತತ್ವಕ್ಕೆ ವಿರುದ್ಧವಾದವರನ್ನು ಕರೆಸಿ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿರುವುದು ಧರ್ಮ ದ್ರೋಹ.
ಇಂಥವರನ್ನು ಕರೆಸಿರುವುದು ಪರಿಷತ್ತಿಗೆ ಅವಮಾನ. ಅವರು ಭಾಗವಹಿಸಬಾರದು, ದಯವಿಟ್ಟು ಅವರ ಹೆಸರನ್ನು ಈಗಲಾದರೂ ಕೈಬಿಡುವುದು ಸೂಕ್ತ, ಇಲ್ಲವಾದಲ್ಲಿ ಅಂದು ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಪ್ರತಿಭಟನೆ ಮಾಡಬೇಕಾಗುತ್ತದೆ.
ಈ ವೇದಿಕೆಯಲ್ಲಿ ಅನ್ಯ ಮತದ ಯಾವ ಆಲೋಚನೆಯೂ ಸುಳಿಯಬಾರದು. ಎಲ್ಲವೂ ವಚನಾಧಾರಿತ ಆಗಿರಲೇಬೇಕು. ಇತ್ತೀಚೆಗಂತೂ ಬಾಹ್ಯಕ್ಕಿಂತ ಅಂತರಂಗದ ವೈರಿಗಳೆ ಹೆಚ್ಚುತ್ತಿದ್ದಾರೆ. ಇದನ್ನು ತಡೆಯಲು ಬಸವಭಕ್ತರು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಶರಣುಗೈಯುತ್ತೇವೆ.
ಅನಿಸಿಕೆ.. ಸಮಾರೋಪ ಸಮಾರಂಭ ಕಾರ್ಯಕ್ರಮ ಪಟ್ಟಿ ಗೆ ಅಧ್ಯಕ್ಷರ ಅನುಮೋದನೆ ಅಭಿಪ್ರಾಯ ಪಡೆದಿಲ್ಲವೇ?
ನನ್ನ ಅನಿಸಿಕೆ, ಅಧ್ಯಕ್ಷರ ಅನುಮೋದನೆ ಇಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಸಾಮಾನ್ಯವಾಗಿ ಆಹ್ವಾನಿಸುವುದಿಲ್ಲ. ಆಕಸ್ಮಿಕವೂ ಆಗಿರಬಹುದು. ಅಂದರೆ ಜಿಲ್ಲಾಧ್ಯಕ್ಷರಾದವರಿಗೆ ಶರಣಸಾಹಿತ್ಯ ಪರಿಷತ್ತಿನ ಧ್ಯೇಯೋಧ್ಯೆಶಗಳ ಅರಿವು ಇರಬೇಕಲ್ಲ.
I have read the Vachana Darshana Book. There is no such issues related to demeaning the importance of Vachanaas. However, these protesting group seems to be uninformed and they are promoting to divide Hindus. Lingayat is very much part of Sanatana Hindu society….to gain some political edge and reservation, these people are harming the sacred culture of Hindu Rashtra… The missionaries funded by anti-india must are behind this new movement to destabilize and breck the unity.
ಇದನ್ನು ನಾವೂ ಕೂಡ ಖಂಡಿಸುತ್ತೇವೆ. ವ್ಯಕ್ತಿಯ ಹಿನ್ನೆಲೆಯನ್ನು ವಿಚಾರಿಸದೇ ಅತಿಥಿ ಯನ್ನು ಆಹ್ವಾನಿಸುವ ಮೊದಲೇ ವಿಚಾರಿಸಿ ಈಗ ಆದದ್ದು ಆಗಿ ಹೋಯಿತು. ಮುಂದಿನಸಾರೆ ಹೀಗಾಗದಂತೆ ನೋಡಿಕೊಂಡರೆ ಸಾಕು.
It is your sheer ignorance about the vachana literature and biased acceptance of the sanatana which makes you speak so. Only an irresponsible human can think your way. Do not try to swim on the banks, try and get into the water, that you keep you away from making slang statements and hurt others emotions.
ಮಲ್ಲೇಪುರಂ ವಚನವಿರೋಧಿಯಾಗಲು ಸಾಧ್ಯವೇ ಇಲ್ಲ. ಅವರ ಪಾಂಡಿತ್ಯ ಮತ್ತು ಸಜ್ಜನಿಕೆ ಲೋಕಪ್ರಸಿದ್ಧ.
ಮಳ್ಳಿಪುರಂನ ಪಾಂಡಿತ್ಯ ವಯ್ಯಾರ ಕನ್ನಡ ವಿಶ್ವವಿದ್ಯಾಲಯದಲ್ಲಿ ಚಿರಪರಿಚಿತ,
ಥೂ…ಮಳ್ಳಿ, ಯಾರನ್ನೋ ಮೆಚ್ಚಿಸಲು ಪಾಂಡಿತ್ಯ ಪ್ರದರ್ಶನ ಮಾಡಲು ಹೋಗಿ ಮೂರ್ಖನಾದದ್ದನ್ನು ನೋಡಿ ಅಕ್ಷರ ಲೋಕ ಮುಸಿಮುಸಿ ನಗುತ್ತಿದೆ