‘ಪುರೋಹಿತಶಾಹಿಗಳು ಹೊಟ್ಟೆ ಹೊರೆಯಲು ನಾನಾ ವೇಷ ಧರಿಸುತ್ತಾರೆ’

ಬಸವ ಮೀಡಿಯಾ
ಬಸವ ಮೀಡಿಯಾ

ವಚನ ಶ್ರಾವಣ-೨೦೨೬

ಗದಗ:

ಬಸವಾದಿ ಶರಣರು ನಮಗೆ ತಮ್ಮ ಅನುಭಾವವನ್ನು ನುಡಿಗಳನ್ನಾಗಿಸಿ ಆ ನುಡಿಗಳೇ ವಚನಗಳಾದ ನಂತರ ಈ ಲೋಕದ ಜನರಿಗೆ ನೀಡಿದರು.

ಶ್ರಾವಣವೆಂದರೆ ಪ್ರಕೃತಿ ಸಹಜವಾಗಿಯೇ ಹಸಿರು ತುಂಬಿರುತ್ತದೆ. ವಾತಾವರಣ ಆಹ್ಲಾದಕರವಾಗಿರುತ್ತದೆ. ಇಲ್ಲಿ ಶ್ರಾವಣ ಎಂದರೆ ಶ್ರವಣ ಎಂದಾಗುವುದು. ಈ ಕಾಲದಲ್ಲಿ ಸಾಮಾನ್ಯವಾಗಿ ಒಳ್ಳೆಯ ನುಡಿಗಳನ್ನು ಕೇಳಲೆಂದೇ ಅನೇಕ ಕಡೆ ಧಾರ್ಮಿಕ ಪುರಾಣ, ಪ್ರವಚನಗಳನ್ನು ಏರ್ಪಡಿಸಲಾಗುತ್ತದೆ.

ಹಾಗೇಯೇ ಬಸವದಳದವರು ಇಲ್ಲಿ ವಚನಗಳನ್ನು ಬಿಡಿಸಿ ಹೇಳುವ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಅದರಂತೆ ಇಂದು ನಗೆಯ ಮಾರಿತಂದೆಯ ಶರಣರ ವಚನಗಳನ್ನು ಹೇಳುತ್ತಿದ್ದೇನೆ.

ನಗು ಮತ್ತು ಮರೆ ಎಂದರೆ ಮಾನವನ ನೋವು, ಸಂಕಟಗಳನ್ನು ಮರೆಸುವಂತಹ ವರಗಳಾಗಿವೆ. ನಗೆ ಮಾರಿ ತಂದೆಯವರ ಕೆಲಸ ಎಲ್ಲರನ್ನೂ ನಗಿಸುವುದಾಗಿತ್ತೆಂದು ಶಿಕ್ಷಕಿ ಶಾಂತಲಾ ಹಂಚಿನಾಳರು ನುಡಿದರು.

ಅವರು ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದಾದ್ಯಂತ ನಡೆಯುವ ‘ಮನೆ ಮನೆಗಳಲ್ಲಿ ವಚನ ಶ್ರಾವಣ’ ಕಾರ್ಯಕ್ರಮದ ಅಂಗವಾಗಿ ಬಸವೇಶ್ವರ ನಗರದ ಮಲ್ಲಿಕಾರ್ಜುನ ಸಂಬರಗಿಯವರ ಮನೆಯಲ್ಲಿ ನಡೆದ ‘ವಚನ ನಿರ್ವಚನ’ ಕಾರ್ಯಕ್ರಮದಲ್ಲಿ ಶರಣ ನಗೆಯ ಮಾರಿತಂದೆಯವರ ವಚನ, ‘ಕಲ್ಲಿಯ ಹಾಕಿ ನೆಲ್ಲವ ತುಳಿದು, ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ, ವಾಗ್ವಾದ್ವೆತವ ಕಲಿತು, ಸಂಸ್ಕೃತದ ಮಾತಿನ ಪಸರವ ಮುಂದೆ …. ಈ ವಚನ ನಿರ್ವಚನ ಗೈಯುತ್ತಾ ಮೇಲಿನಂತೆ ಮಾತನಾಡಿದರು.

ಮುಂದುವರೆದ ಅವರು ಇಲ್ಲಿ ವಚನಾಕಾರ, ಆಗಮ ಕಲಿತು ನಂತರ ಸಂಸ್ಕೃತವ ಕಲಿತುಕೊಂಡು ತನ್ನ ಜಾಣ್ಮೆಯ ಮಾತುಗಳ ವ್ಯವಹಾರದ ಅಂಗಡಿಯನ್ನಿಟ್ಟುಕೊಂಡು ಜನರನ್ನು ಆಕರ್ಷಿಸಿ ಬರುವ ಜನರನ್ನು ಮಾತಿನ ಮೋಡಿಯಲ್ಲಿ ಮೂಢನಂಬಿಕೆಗಳನ್ನು ಬಿತ್ತಿ ಅವರನ್ನು ಶೋ಼ಷಿಸುವ ಪುರೋಹಿತನ ಕೃತ್ಯವಿದು.

ನಂತರ ಮೀನು ಹಿಡಿಯವ ಜಾಲಗಾರನ ಉದಾಹರಣೆ ನೀಡುವ ಶರಣರು ಇಂದು ಪುರೋಹಿತಶಾಹಿತ್ವದವರು ತಮ್ಮ ಹೊಟ್ಟೆ ಹೊರೆಯಲು ನಾನಾ ವೇಷ ಧರಿಸಲು ಹಿಂಜರಿಯಲಾರರು. ಅದರೆ ಪರಮಾತ್ಮ ಇಂಥದನ್ನು ಕೃತ್ಯ ಒಪ್ಪನೆಂದು ತಿಳಿಸುವರು.

ಇದೆಂಥಹ ನುಡಿ, ಮಾತಿನ ಮರೆ ಎಂದರೆ ಮೋಡಿ ಮಾಡಿ ಧರ್ಮದ ಹೆಸರಿನಲ್ಲಿ ವಂಚಿಸುವರ ಕುರಿತು ಈ ವಚನವಾಗಿದೆ ಎಂದರು. ಈ ಸಂದರ್ಭದಲ್ಲಿ ತಮ್ಮ ಮಾತಿನುದ್ದಕ್ಕೂ ಅನೇಕ ವಚನಗಳನ್ನು ಉದಾಹರಿಸುತ್ತಾ ಮಾತನಾಡಿದರು.

ನಂತರ ಶರಣತತ್ವ ಚಿಂತಕರಾದ ಅಶೋಕ ಬರಗುಂಡಿ ಈ ವಚನವನ್ನು ಬಿಡಿಸಿದರು.

ಬಸವದಳ ಅಧ್ಯಕ್ಷರಾದ ವಿ. ಕೆ. ಕರೇಗೌಡ್ರ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಇದೇ ವಚನವನ್ನು ನಿರ್ವಚನ ಮಾಡಿ ಮಾತನಾಡುತ್ತಾ, ಸಮಾಜದಲ್ಲಿ ನಾವು ಇಂತಹ ಜನರ ಬಲಿಗೆ ಸಿಲುಕದೆ ಬಸವಾದಿ ಶರಣರು ನೀಡಿದ ಸತ್ಯದ ವಚನಗಳನ್ನು ಅರಿತು ಆಚರಣೆಯಲ್ಲಿ ತರಬೇಕೆಂದರು.

ಆರಂಭದಲ್ಲಿ ವಚನ ಪ್ರಾರ್ಥನೆಯನ್ನು ಬಸವದಳದ ಶರಣೆಯರು ಮಾಡಿದರು. ಮನೆಯಲ್ಲಿ ವಚನ ಶ್ರಾವಣ ಆಯೋಜನೆ ಮಾಡಿದ ಸಂಬರಗಿ ಬಂಧುಗಳಿಗೆ ಲಿಂಗಾಯತ ಧರ್ಮಗ್ರಂಥ ನೀಡಲಾಯಿತು.

ಸ್ವಾಗತವನ್ನು ಕುಮಾರಿ ಸಂಬರಗಿಯವರು ಮಾಡಿದರು.  ಕಾರ್ಯಕ್ರಮದ ನಿರುಪಣೆಯನ್ನು ಸುಜಾತಾ ವಾರದ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಬಸವಾಭಿಮಾನಿಗಳು ಭಾಗಿಗಳಾಗಿದ್ದರು. ಸಂಬರಗಿ ಬಂಧುಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *