ಬೆಂಗಳೂರು :
ಬಸವಾದಿ ಶರಣರ ವಿಚಾರಧಾರೆಗಳನ್ನು ಜನಮಾನಸದಲ್ಲಿ ಬಿತ್ತುವ ಉದ್ಧೇಶದಿಂದ ಬಸವಧರ್ಮ ಪೀಠದ ಪೂಜ್ಯ ಮಾತೆ ಗಂಗಾದೇವಿ ಅವರು ಮೂರು ದಿವಸಗಳ ಶಿಬಿರವನ್ನು ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಲಿಂಗೈಕ್ಯ ಪೂಜ್ಯ ಲಿಂಗಾನಂದ ಸ್ವಾಮೀಜಿ ಮತ್ತು ಪೂಜ್ಯ ಮಾತೆ ಮಹಾದೇವಿ ಅವರ ಸ್ಮರಣಾರ್ಥವಾಗಿ ಮೇ 1, 2 ಮತ್ತು 3ರಂದು ನಡೆಯಲಿರುವ ಈ ಶಿಬಿರಕ್ಕೆ ನಾಡಿನ ಮೂಲೆ ಮೂಲೆಗಳಿಂದ ಆಸಕ್ತ ಯುವಸಮೂಹ ಭಾಗಿಯಾಗುತ್ತದೆ.
ಶಿಬಿರವು ಕೇವಲ ಉಪನ್ಯಾಸಗಳಿಗೆ ಸೀಮಿತವಾಗಿರದೆ, ವಿಚಾರ ವಿನಿಮಯ ಮತ್ತು ಆತ್ಮಜಾಗೃತಿಗೆ ಒಂದು ಉತ್ತಮ ವೇದಿಕೆಯಾಗಿದೆ.
ಕುಟುಂಬ ಸದಸ್ಯರೊಂದಿಗೆ ಈ ಶಿಬಿರದಲ್ಲಿ ಭಾಗಿಯಾಗಿ ಜಾಗೃತರಾಗಲು ಕೋರಲಾಗಿದೆ.
ಶಿಬಿರದಲ್ಲಿ ಭೋಧಿಸಲಿರುವ ವಿಷಯಗಳು:
ಪ್ರತಿದಿನ 3 ವಿಷಯಗಳ ಮೇಲೆ ಭೋಧನೆ ಮತ್ತು ಚರ್ಚೆ ಇರುತ್ತದೆ (45 ನಿಮಿಷ ಭೋಧನೆ, 45 ನಿಮಿಷ ಚರ್ಚೆ).
1) ದೇವರ ಪರಿಕಲ್ಪನೆ
2) ಬಸವತತ್ವ ದರ್ಶನ
3) ಲಿಂಗಾಯತ ಧರ್ಮದ ಇತಿಹಾಸ
4) ಅನುಭವ ಮಂಟಪ
5) ರಾಷ್ಟ್ರೀಯ ಬಸವದಳ ಕಟ್ಟಿದ ಅಪ್ಪಾಜಿ ಮಾತಾಜಿ
6) ಅವಕಾಶ ವಂಚಿತ ಲಿಂಗಾಯತರು
7) ಲಿಂಗಾಯತ ಧರ್ಮ ಹೋರಾಟದ ಮುಂದುವರೆದ ಭಾಗ
8) ಸಾಮಾಜಿಕ ಜಾಲತಾಣದ ಸದ್ಬಳಕೆ
ಈ ವಿಚಾರಗಳ ಬಗ್ಗೆ ಮಾತನಾಡಲು ನಾಡಿನ ಹೆಸರಾಂತ ವಿಚಾರವಾದಿಗಳು, ಸಂಘಟಕರು ಮತ್ತು ಮಠಾಧೀಶರು ಆಗಮಿಸುವರು.
ಬಸವಾದಿ ಶರಣರು ಹೇಳಿಕೊಟ್ಟ ಕಾಯಕ, ದಾಸೋಹ, ಸಮಾನತೆಯ ಪಾಠವನ್ನು ತಿಳಿಯಬೇಕೆಂದರೆ ಈ ಲಿಂಗಾಯತ ಧರ್ಮ ಜಾಗೃತಿ ಶಿಬಿರದಲ್ಲಿ ತಪ್ಪದೇ ಭಾಗವಹಿಸಲು ವಿನಂತಿಸಲಾಗಿದೆ.
ಶಿಬಿರದಲ್ಲಿ ಕ್ರೀಡಾ ಹಬ್ಬವನ್ನು ಕೂಡ ಆಯೋಜಿಸಲಾಗಿದೆ. ಪಾಠದ ಜೊತೆಗೆ ಆಟವೂ ಇರುತ್ತದೆ. ಚಿಕ್ಕಮಕ್ಕಳಿಗೆ, ಹೆಣ್ಣುಮಕ್ಕಳಿಗೆ ಮತ್ತು ಪುರುಷರಿಗೆ ವಿಭಿನ್ನ ಆಟಗಳು ಇರುತ್ತವೆ.
ಶಿಬಿರದಲ್ಲಿ ಭಾಗವಹಿಸುವವರು ಕೆಳಗಿನವರನ್ನು ಸಂಪರ್ಕಿಸಬಹುದು.
ಪ್ರಕಾಶ ಜೀರ್ಗೆ 9535601020, ಪಂಚಾಕ್ಷರಿ 9008788889, ಪ್ರವೀಣ 7411090256, ಶಿವಪ್ರಸಾದ 7353510302, ಸಿದ್ದು ಶೇಟಕಾರ 92412 04440.

ಕೂಡಲ ಸಂಗಮದ ಆಶ್ರಮಕ್ಕೆ ಒಬ್ಬಂಟಿಯಾಗಿ ಒಬ್ಬ ಬಸವ ಭಕ್ತ ಬಂದರೆ ಅಲ್ಲಿ ಏನೇನು ತೊಂದರೆ ಅನುಭವಿಸ ಬೇಕಾಗಿ ಬರುತ್ತದೆ ವಿಚಾರ ಮಾಡಿ, ಅವುಗಳ ಪರಿಹಾರಕ್ಕೆ ದಾರಿ ಹುಡುಕಬೇಕು.
ಅಲ್ಲಿ ಸ್ನಾನಕ್ಕೆ ಬಿಸಿ ನೀರು,
ಮುಂಜಾನೆ ತಿನಿಸು, ಚಹಾ,
ಮದ್ಯಾಹ್ನ ಊಟ
ರಾತ್ರಿ ಊಟ ಸಿಗುತ್ತದೆ.
ಆದರೆ ರಾತ್ರಿ ಅದ ಮೇಲೆ ಇರುವುದು ಎಲ್ಲಿ? ಮಲಗುವುದು ಎಲ್ಲಿ ಅನ್ನುವ ಸಮಸ್ಯೆ ದುತ್ತನೆ ಏಳುತ್ತದೆ.
ಯಾವ ಕಟ್ಟಡ ಎಲ್ಲಿದೆ? ಅನ್ನುವ ಮಾರ್ಗದರ್ಶಿ ನಕಾಶ ಆಗಬೇಕು.
ಕೊಠಡಿಗಳನ್ನು ಮೊದಲು ಬಂದವರಿಗೆ ಅಧ್ಯತೆಯ ಮೇರೆಗೆ ಕೊಡಬೇಕು.
ಎಲ್ಲ ಕೊಠಡಿಗಳನ್ನು ಒಂದೇ ವೇದಿಕೆಯ ಮೂಲಕ , ಕೇಂದ್ರೀಕೃತ ಕಂಪುಟರೈಜಡ್ ವ್ಯವಸ್ಥೆ ಮೂಲಕ ಒದಗಿಸಬೇಕು.
ವ್ಯವಸ್ಥಿತ ಫ್ಲಾಟಾಫಾರ್ಮ್ ಮಾಡಿ, ಅದರ ಮೇಲೆಯೇ ಮಲಗಲು ಬರುವಂತೆ ಸ್ವಚ್ಚ ವಾತಾವರಣ ನಿರ್ಮಾಣ ಮಾಡಬೇಕು.