ರಾಮದುರ್ಗ
ತಾಲೂಕಿನ ನಾಗನೂರ ಗ್ರಾಮದ ಗುರುಬಸವ ಮಠದ ವತಿಯಿಂದ ಬಸವ ಧರ್ಮ ಉತ್ಸವ – 2025 ಹಾಗೂ ಅಲ್ಲಮಪ್ರಭುಗಳ ಜಯಂತಿ ಸಮಾರಂಭ ಮಾರ್ಚ್ 31 ಹಾಗೂ ಎಪ್ರೀಲ್ 1ರ ಎರಡು ದಿನಗಳ ಕಾಲ ನಡೆಯಲಿದೆ ಎಂದು ಶ್ರೀ ಮಠದ ಪೂಜ್ಯ ಬಸವಪ್ರಕಾಶ ಸ್ವಾಮೀಜಿ ತಿಳಿಸಿದ್ದಾರೆ.
ಮಾರ್ಚ 31ರಂದು ಸೋಮವಾರ ಸಂಜೆ 7 ಗಂಟೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಇಲಕಲ್ಲ-ಚಿತ್ತರಗಿ ಸಂಸ್ಥಾನಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ
ಸಾನಿಧ್ಯ ವಹಿಸುವರು. ನಾಗನೂರ ಗುರುಬಸವ ಮಠದ ಪೂಜ್ಯ ಬಸವಗೀತಾ ಮಾತಾಜಿ ಹಾಗೂ ಬಸವಪ್ರಕಾಶ ಸ್ವಾಮೀಜಿ ಸಮ್ಮುಖ ವಹಿಸುವರು.
ಶಿಕ್ಷಕ ಶಶಿಧರ ವಿ. ಕಲ್ಯಾಣಶೆಟ್ಟಿ “ನೀನೊಲಿದರೆ ಕೊರಡು ಕೊನರುವುದಯ್ಯಾ” ವಿಷಯವಾಗಿ ಅನುಭಾವ ನೀಡಲಿದ್ದಾರೆ.
ಏಪ್ರೀಲ್ 1 ಮಂಗಳವಾರ ಮುಂಜಾನೆ 8 ಘಂಟೆಗೆ ಧರ್ಮಗುರು ಬಸವಣ್ಣನವರ ಭಾವಚಿತ್ರದೊಂದಿಗೆ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಬಸವೇಶ್ವರ ಭಜನಾ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ನಂತರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಲಿದ್ದು, ಪೂಜ್ಯ ಗುರುಮಹಾಂತ ಸ್ವಾಮೀಜಿ, ಗುಳೇದಗುಡ್ಡ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ, ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಶ್ರೀ ಬಸವಪ್ರಕಾಶ ಸ್ವಾಮೀಜಿ ಹಾಗೂ ಬಸವಗೀತಾ ತಾಯಿ ಸಮ್ಮುಖದಲ್ಲಿ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭೆ ಮುಖ್ಯ ಸಚೇತಕ ಹಾಗೂ ರಾಮದುರ್ಗ ಶಾಸಕ ಅಶೋಕ ಪಟ್ಟಣ ವಹಿಸಲಿದ್ದಾರೆ.
ಚಿಕ್ಕೋಡಿಯ ವಿಶ್ರಾಂತ ಉಪನಿರ್ದೇಶಕ ಎಂ.ಜಿ. ದಾಸರ “ನಿತ್ಯದ ಬದುಕಿಗೆ ಸತ್ಯದ ವಚನ” ಕುರಿತು ಅನುಭಾವದ ನುಡಿಗಳನ್ನಾಡಲಿದ್ದಾರೆ.
ರಾಮದುರ್ಗದ ಪುನೀತ್ ಫೌಂಡೇಶನ್ ಅಧ್ಯಕ್ಷ ರಾಜು ಹರ್ಲಾಪುರ ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನ ನಡೆಯಲಿದೆ. ಗ್ರಾಮದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.