ಶರಣೆಯರಿಂದ ಆಕರ್ಷಕ ಕೋಲಾಟ ಪ್ರದರ್ಶನ
ಬೀದರ:
ನಗರದ ನೌಬಾದ್ ಕೆಐಎಡಿಬಿ ವಸತಿ ಬಡಾವಣೆಯಲ್ಲಿ ಸ್ಥಾಪಿಸಿರುವ ವಿಶ್ವಗುರು ಬಸವೇಶ್ವರರ ಹೊಸದಾದ ಮೂರ್ತಿಯನ್ನು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಈಚೆಗೆ ಅನಾವರಣಗೊಳಿಸಿದರು.
ಬಸವಣ್ಣನವರು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ್ದರು. ಅನುಭವ ಮಂಟಪದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರವೇಶ ಕಲ್ಪಿಸಿದ್ದರು. ಬಸವಣ್ಣನವರ ತತ್ವಗಳು ಜಾತಿ, ವರ್ಗ, ವರ್ಣ, ಲಿಂಗ ಭೇದವಿಲ್ಲದ ಸಮಾನತೆಯ ತತ್ವಗಳಾಗಿವೆ. ಬಸವ ಮಂಟಪ ನಿರ್ಮಾಣ ಕಾರ್ಯಕ್ಕೆ ವೈಯಕ್ತಿಕವಾಗಿ ₹1 ಲಕ್ಷ ಕೊಡುವೆ’ ಎಂದು ಅವರು ಘೋಷಣೆ ಮಾಡಿದರು.

ಶಾಸಕ ರಹೀಂಖಾನ್ ಅವರು ಮಾತನಾಡಿ, ಸಕಲರ ಲೇಸ ಬಯಸಿದ ಬಸವಣ್ಣನವರ ಏಕದೇವೋಪಾಸನೆ ತತ್ವವನ್ನು ಎಲ್ಲರೂ ಆಚರಣೆಯಲ್ಲಿ ತರಬೇಕು ಎಂದು ಹೇಳಿದರು.
ಲಿಂಗಾಯತ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದೆ. ವಿಶ್ವಗುರು ಬಸವಣ್ಣನವರನ್ನು ಧರ್ಮಗುರುವೆಂದು ನಂಬಿದ ಸಮಾಜದಲ್ಲಿ ಅವರ ತತ್ವಗಳ ಅನುಷ್ಠಾನ ನಿರೀಕ್ಷಿಸಿದಷ್ಟು ಆಗಿಲ್ಲ. ಧರ್ಮಗುರುಗಳ ಮಾರ್ಗದರ್ಶನದಲ್ಲಿ ಬೀದರ್‌ನ ನೌಬಾದ್ ಕೆಐಎಡಿಬಿ ವಸತಿ ಲೇಔಟ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಬಸವ ಮಂಟಪಕ್ಕೆ ₹50 ಲಕ್ಷ ಅನುದಾನ ನೀಡುವೆ ಎಂದು ರಹೀಂಖಾನ್ ಭರವಸೆ ನೀಡಿದರು.

ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತ “ಬಸವ ತತ್ವದಿಂದಲೇ ವಿಶ್ವಕ್ಕೆ ಶಾಂತಿ. ಬಸವತತ್ವವನ್ನು ಪ್ರತಿಯೊಬ್ಬ ಬಸವಾನುಯಾಯಿಗಳು ಅನುಸರಿಸಿ ಏಕದೇವೋಪಾಸಕರಾಗಿ ಬದುಕಬೇಕು ಎಂದರು.

ಬಸವ ಮಂಟಪದ ಮಾತೆ ಸತ್ಯಾದೇವಿ ಸಾನಿಧ್ಯ ವಹಿಸಿದ್ದರು. ಬೀದರ ವಿವಿ ಸಿಂಡಿಕೇಟ್ ಸದಸ್ಯ ವಿಠಲದಾಸ್ ಪ್ಯಾಗೆ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧ, ಪ್ರಮುಖರಾದ ಶಿವರಾಜ ಕಪಲಾಪುರೆ, ಸಂತೋಷ ಪಾಟೀಲ ಭಂಗೂರೆ, ಶಿವರಾಜ ಪಾಟೀಲ ಅತಿವಾಳ, ಶಶಿಕಾಂತ ಪಾಟೀಲ ಚೌಳಿ, ಗುಣವಂತರಾವ ಸಿಂಧೆ, ಸುನಿತಾ ದಾಡಗೆ, ಶಿವಯ್ಯ ಸ್ವಾಮಿ, ಎಸ್.ಎಂ. ಜನವಾಡಕರ, ಸಂದೀಪ ಮತ್ತಿತರರು ಹಾಜರಿದ್ದರು.

ಸಂದೀಪ ಮಾಶೆಟ್ಟಿ, ಬಸವಣಪ್ಪ ತಿಬಶೆಟ್ಟಿ, ರವಿಕಾಂತ ಪಾಟೀಲ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ರಮೇಶ ಚಿದ್ರಿ, ಓಂಪ್ರಕಾಶ ರೊಟ್ಟೆ, ವೀರಶೆಟ್ಟಿ ಚನಶೆಟ್ಟಿ, ಸಂಜೀವ ಸೋನಾರ, ಚನ್ನಬಸಪ್ಪ ಜ್ಯೋತೆಪ್ಪ, ವಿಶಾಲ ಅತಿವಾಳೆ, ಜಗದೇವಿ ಬೆಳ್ಳೂರು ಇದ್ದರು. ಡಾ. ರವೀಂದ್ರಡಿಗ್ಗಿ ನಿರೂಪಿಸಿದರು.

ಇದಕ್ಕೂ ಮುನ್ನ ನೌಬಾದ್‌ನ ಬಸವೇಶ್ವರ ವೃತ್ತದಿಂದ ಬಸವ ಮಂಟಪದವರೆಗೆ ಅಲಂಕೃತ ಸಾರೋಟಿನಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಡಿ.ಜೆ, ಕಲಾತಂಡಗಳ ಪ್ರದರ್ಶನ, ಯುವಕರ ನರ್ತನ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಎನ್‌ಎಸ್‌ಎಸ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮೆರವಣಿಗೆಗೆ ಚಾಲನೆ ನೀಡಿದರು.
