ಅಕ್ಟೋಬರ್ 11ರಿಂದ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ:

೧೨ನೇ ಶತಮಾನದಲ್ಲಿ ಸಮಾನತೆ, ಸಹೋದರತ್ವ, ಮಾನವೀಯ ಮೌಲ್ಯಗಳಿಗಾಗಿ ಅಸಂಖ್ಯ ಶರಣರು ಹುತಾತ್ಮರಾಗಿದ್ದಾರೆ. ಅವರ ಸ್ಮರಣೆಗಾಗಿ ಪ್ರತಿವರ್ಷದಂತೆ ಈ ವರ್ಷವೂ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅಕ್ಟೋಬರ್ ೧೧ ರಿಂದ ೨೧ರವರೆಗೆ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ವೈವಿಧ್ಯಮಯವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಇಲ್ಲಿನ ಹರಳಯ್ಯನವರ ಗವಿಯಲ್ಲಿ ಶರಣು ಶರಣಾರ್ಥಿ ಸಮಾವೇಶ ಹಾಗೂ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ಕಲ್ಯಾಣ ಕ್ರಾಂತಿಯ ಫಲದ್ರೂಪವಾಗಿ ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಹೊಸದಿಶೆ ಆರಂಭವಾಗಿ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯದ ಕ್ರಾಂತಿಕಾರಕ ಸಾಹಿತ್ಯದ ಮೇಲೆ ಸರ್ವಸಮಾನತೆ ದೊರಕಿದವು.

ಈ ಕಾರ್ಯಕ್ರಮಕ್ಕೆ ನಾಡಿನ ಪೂಜ್ಯರನ್ನು ,ಗಣ್ಯರನ್ನು, ಸಾಧಕರನ್ನು ಆಮಂತ್ರಿಸಿ  ವೀರ ಸೈನಿಕರ ಸಮಾವೇಶ, ಮಹಾಶಕ್ತಿಕೂಟಗಳ ಸಮಾವೇಶ, ಹಿರಿಯ ನಾಗರಿಕರ ಸಮಾವೇಶ, ರೈತರ ಸಮಾವೇಶ, ನಾಟಕ, ರೂಪಕಗಳು ಶರಣ ವಿಜಯ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು ಎಂದರು.

ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶಿವಾನಂದ ದೇವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಿ ಯಶಸ್ವಿಗೊಳಿಸಬೇಕು ಎಂದರು. ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪೂರೆ ಮಾತನಾಡಿ, ರೈತರಿಗಾಗಿ ಹವಾ ಬದಲಾವಣೆ ಕುರಿತು ವಿಶೇಷ ಉಪನ್ಯಾಸ ಆಯೋಜಿಸಬೇಕೆಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಗುರುನಾಥ ಗಡ್ಡೆ ಮಾತನಾಡಿ, ಮೈಸೂರು ದಸರಾ ಮೆರವಣಿಗೆಯಂತೆ ಆನೆಯ ಮೇಲೆ ವಚನ ಸಾಹಿತ್ಯದ ಮೆರವಣಿಗೆ ನಡೆಸಬೇಕು ಎಂದರು.

ಶಂಕರ ಕರಣೆ ಮಾತನಾಡಿ, ಕಾರ್ಯಕ್ರಮಕ್ಕೆ ತನು ಮನ ಧನದಿಂದ ಎಲ್ಲರೂ ಸಹಕರಿಸಬೇಕು ಎಂದರು.

ರವೀಂದ್ರ ಕೋಳಕುರ ಮಾತನಾಡಿ, ಮಕ್ಕಳು ಮತ್ತು ಯುವಕರಿಗಾಗಿ ಗೋಷ್ಠಿ ಆಯೋಜಿಸಲು ಸಲಹೆ ನೀಡಿದರು.

ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಹರಳಯ್ಯ ಸಮಾಜದ ಉಪಾಧ್ಯಕ್ಷ ಗೌತಮ ಜಾಧವ ಧ್ವಜಾರೋಹಣ ಗೈದರು. ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟಿ, ಬಸವರಾಜ ಬಾಲಿಕಿಲೆ, ಬಸವರಾಜ ತೊಂಡಾರೆ, ಬಿಡಿವಿಸಿ ಕೋಶ್ಯಾಧ್ಯಕ್ಷ ಶಿವರಾಜ ಶಾಶೆಟ್ಟಿ, ರೇವಣಪ್ಪಾ ರಾಯವಾಡೆ, ಕದಳಿ ವೇದಿಕೆ ಅಧ್ಯಕ್ಷೆ ನಿರ್ಮಲಾ ಶಿವಣಕರ, ಬಸವತತ್ವ ಪ್ರಸಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ, ರೈತ ಸಂಘದ ಅಧ್ಯಕ್ಷ ಸುಭಾಷ ರಗಟೆ, ಲಿಂಗರಾಜ ಶಾಶೆಟ್ಟಿ, ಮಹಿಳಾ ಮಹಾಶಕ್ತಿಕೂಟಗಳ ಪ್ರಮುಖರು ಸೇರಿದಂತೆ ಇತರರು ಹಾಜರಿದ್ದರು.

ಸಂತೋಷ ಮಡಿವಾಳ ಸ್ವಾಗತಿಸಿದರೆ, ಜಯಶ್ರೀ ಬಿರಾದಾರ ನಿರೂಪಿಸಿದರು.

*ಸಮಿತಿಗಳ ರಚನೆ:*

ಉತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿ, ಹಣಕಾಸು ಸಮಿತಿ,  ಪ್ರಚಾರ ಸಮಿತಿ, ಮೆರವಣಿಗೆ ಸಮಿತಿ, ಪ್ರಸಾದ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ, ಇಷ್ಟಲಿಂಗಪೂಜಾ ಯೋಗ ಸಮಿತಿ, ವೇದಿಕೆ ಸಮಿತಿ, ಯುವಗೋಷ್ಠಿ ಸಮಿತಿ, ಮಹಿಳಾ ಸಮಿತಿಗಳನ್ನು ರಚಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment
  • ಒಳ್ಳೆಯ ವಿಚಾರ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಶರಣು ಶರಣಾರ್ಥಿ

Leave a Reply

Your email address will not be published. Required fields are marked *