ಡಾ. ಆನಂದ ಪಾಂಡುರಂಗಿ ನಿಧನ: ಡಾ. ತೋಂಟದ ಶ್ರೀಗಳ ಶೋಕ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ:

ನಮ್ಮ ನಾಡಿನ ಶ್ರೇಷ್ಠ ಮಾನಸಿಕ ರೋಗತಜ್ಞರಾಗಿದ್ದ ಡಾ. ಆನಂದ ಪಾಂಡುರಂಗಿ ಅವರು ಹೃದಯಾಘಾತದಿಂದ ನಿಧನರಾದುದು ನಾಡಿಗೆ ತುಂಬಲಾಗದ ನಷ್ಟ ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶೋಕ ವ್ಯಕ್ತಪಡಿಸಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದ ಪಾಂಡುರಂಗಿ ಅವರು ಎಲ್ಲರೊಂದಿಗೂ ಬೆರೆತು ಬಾಳುವ ಸ್ವಭಾವದವರಾಗಿದ್ದರು. ಲಕ್ಷಾಂತರ ಮಾನಸಿಕ ರೋಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದ ಅವರು ವೈದ್ಯಲೋಕದ ಮಿನುಗು ನಕ್ಷತ್ರವಾಗಿದ್ದರು.

ಇಂದು ಅವರು ನಮ್ಮನ್ನು ಅಗಲಿರುವುದು ಅತ್ಯಂತ ನೋವನ್ನುಂಟು ಮಾಡಿದೆ. ಡಾ. ಪಾಂಡುರಂಗಿ ಅವರು ಸಾಮಾಜಿಕ ಸೇವಾಕಾರ್ಯಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು.

ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜಾತ್ರಾ ಮಹೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಳೆದ ಮೂರ‍್ನಾಲ್ಕು ದಶಕಗಳಿಂದ ನಡೆಸಿಕೊಂಡು ಬಂದ ಹಿರಿಮೆ ಅವರದಾಗಿತ್ತು.

ಬೆಳಗಾವಿಯ ನಾಗನೂರುಮಠ ಹಾಗೂ ಜಗದ್ಗುರು ತೋಂಟದಾರ್ಯಮಠದ ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ ಅವುಗಳ ಅಭಿವೃದ್ಧಿಗಾಗಿ ಅವರು ನಿರಂತರ ಶ್ರಮಿಸಿದ್ದರು.

ಮಾನಸಿಕ ರೋಗಿಗಳ ಪಾಲಿನ ದೇವರಾಗಿದ್ದ ಅವರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಬಿಡುವಿಲ್ಲದೆ ಶ್ರಮಿಸುತ್ತಿದ್ದರು. ಅವರು ಶ್ರೇಷ್ಠ ಬರಹಗಾರರೂ, ವೈದ್ಯಸಾಹಿತಿಗಳೂ ಆಗಿದ್ದರು. ಅವರ ಸೇವೆ ಚಿರಸ್ಮರಣೀಯ ಎಂದು ಪ್ರಕಟಣೆಯಲ್ಲಿ ಶ್ರೀಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *