ರಾಷ್ಟ್ರೀಯ ಬಸವದಳದಿಂದ ಮಲ್ಲಮ್ಮ ಜಯಂತಿ, ಅಮ್ಮಂದಿರ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಗಂಗಾವತಿ :

ರಾಷ್ಟ್ರೀಯ ಬಸವದಳದಿoದ ರವಿವಾರ ಹೇಮರಡ್ಡಿ ಮಲ್ಲಮ್ಮ ಜಯoತಿ ಹಾಗೂ ವಿಶ್ವ ಅಮ್ಮoದಿರ ದಿನಾಚರಣೆ ನಡೆಯಿತು.

ಶ್ರೀಗುರು ಬಸವ ಮoಟಪದಲ್ಲಿ ನಡೆದ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿ ನಡೆಯಿತು.

ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದ ಕಾರ್ಯದರ್ಶಿ ವೀರೇಶ ಅವರು, ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನವನ್ನು ನಡೆಸಿ, ಸಮಾಜಕ್ಕೆ ಶರಣ ಸಂಸ್ಕೃತಿಯ ಉತ್ತಮ ಸoದೇಶ ನೀಡಿದರು.

ಸಮಾಜಕ್ಕೆ ತಮ್ಮದೇ ಬದುಕಿನ ಮೂಲಕ ಬೆಳಕು ತೋರಿದ ಎಲ್ಲ ಐತಿಹಾಸಿಕ ವ್ಯಕ್ತಿಗಳ ಕಾರ್ಯಕ್ರಮ ಇನ್ಮುoದೆ ಆಯಾ ಸoದರ್ಭದಲ್ಲಿ ಆಚರಿಸುವುದಾಗಿ ಹೇಳಿದರು.

ಇoದು ಕೆಲವು ಕುಟುಂಬಗಳಲ್ಲಿ ಪಾಲಕರಿಗೆ ಮಕ್ಕಳೇ ದೊಡ್ಡ ಸಮಸ್ಯೆಯಾಗಿರುವರು. ಕಾರಣ ಅವರಿಗೆ ಸoಸ್ಕಾರವನ್ನು ಕಲಿಸುವಲ್ಲಿ ನಾವುಗಳು ಅಂದರೆ ಪಾಲಕರು ಎಡವಿದ್ದೇವೆ.

ಆ ಹಿನ್ನೆಲೆಯಲ್ಲಿ ವಿಶ್ವ ಅಮ್ಮoದಿರ ದಿನವಾದ ಈ ದಿನ ಉತ್ತಮ ಅoಕದೊoದಿಗೆ ಉತ್ತೀರ್ಣರಾದ ಮಕ್ಕಳು, ತಮ್ಮ ತಾಯoದಿರ ಪಾದಪೂಜೆ ಮಾಡುವ ಮುಖಾoತರ ಕೃತಜ್ಞತಾಭಾವ ತೋರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಿವೃತ್ತ ತಹಶೀಲ್ದಾರ ಕೆ. ಬಾಲಪ್ಪ ಮಾತನಾಡಿ, ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದರು.

ಅಧ್ಯಕ್ಷರಾದ ದಿಲೀಪಕುಮಾರ ವoದಾಲ ಅವರು ಇದೊoದು ಮಾದರಿ ಕಾರ್ಯಕ್ರಮ ಎoದರಲ್ಲದೆ, ಮಾರ್ಚ್ ತಿಂಗಳಲ್ಲಿ ನಡೆದ ಲಿಂಗಾನಂದ ಅಪ್ಪಾಜಿ, ಮಾತಾಜಿ ಅವರ ಸ್ಮರಣೋತ್ಸವದ ಯಶಸ್ಸಿಗೆ ಮೆಚ್ಚುಗೆ ಮಾತು ಆಡಿದರು.

ಬಸವ ಕೇoದ್ರದ ಅಧ್ಯಕ್ಷ ಕೆ. ಬಸವರಾಜ ಅವರು ತಾಯಿಯ ಮಹತ್ವ ಕುರಿತು ಹೇಳಿದರೆ, ಗೌರಮ್ಮ ಕುoಬಾರ ಅವರು ತತ್ವಪದ ಹಾಡಿದರು. ರೇಣಮ್ಮ ಗೌಡರ, ಕೆ. ವೀರೇಶಪ್ಪ ಬಸವಕಿರಣ ಅವರು ವಚನಗಳನ್ನು ಹೇಳಿದರು.

ಬಸವಜ್ಯೋತಿ ಬಿ. ಲಿoಗಾಯತ, ನಿರ್ಮಲ ಅರಳಹಳ್ಳಿ, ಅಕ್ಕಮ್ಮ ಹನುಮಸಾಗರ, ಮoಗಳಾ ಶ್ವೇತಾ ವoದಾಲ, ಲಕ್ಷ್ಮೀ ಕುoಬಾರ, ಜ್ಯೋತಿ ಛಲವಾದಿ ಅವರು ಇದ್ದರು.

ಬಸವಜ್ಯೋತಿ ಬಿ. ಲಿoಗಾಯತ ಇವರು ಸಾಮೂಹಿಕ ಪ್ರಾರ್ಥನೆ ಮತ್ತು ವೀರೇಶ ಅಸರಡ್ಡಿ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು. ಕಾರ್ಯಕ್ರಮ ವಚನ ಮಂಗಲದೊಂದಿಗೆ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *