ಬೆಂಗಳೂರು
ಜೂನ್ 28 ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಬಸವದಳ ಕರೆದಿರುವ ಮಹತ್ವದ ಸಭೆಯಲ್ಲಿ ಭಾಗವಹಿಸುವುದಾಗಿ ಬಸವ ಗಂಗೋತ್ರಿಯ ಪೀಠಾಧ್ಯಕ್ಷರಾದ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ಶರಣ ಚಂದ್ರಮೌಳಿ, ಹಾಗೂ ಬಸವಧರ್ಮ ಪೀಠದ ಪೂಜ್ಯ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಜೊತೆ ಸಂಘಟನೆ ಬಲಪಡಿಸುವ ಕುರಿತು ಸಮಾಲೋಚನಾ ಸಭೆ ನಡೆಯಲಿದೆ.
ಯಾವುದೇ ಭೇದಭಾವವಿಲ್ಲದೆ ಎಲ್ಲಾ ಬಸವಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಈ ಮಹತ್ವದ ಸಭೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಕನ್ನೇರಿ ಸ್ವಾಮಿಯ ಸಮಾವೇಶಕ್ಕೆ ಉಚ್ಚ ನ್ಯಾಯಾಲಯವು ಕರಾರು ಸಹಿತ ಅನುಮತಿ ನೀಡಿದ್ದು, ಅವರು ವೇದಿಕೆಯಲ್ಲಿ ಮಾತನಾಡಬಾರದೆಂದು ಕರಾರು ಹಾಕಿದೆ. ಕೋರ್ಟ್ ತೀರ್ಪುನ್ನು ಗೌರವಿಸುವ ಸಲುವಾಗಿ ಹಿಂದೂ ಸಮಾವೇಶದ ವಿರುದ್ಧ ಪ್ರತಿಭಟನೆ ಮಾಡುವುದಿಲ್ಲ, ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
