ಸದ್ಯದಲ್ಲೇ ಸಾಣೇಹಳ್ಳಿಯಲ್ಲಿ ಯುವಕರಿಗೆ ತರಬೇತಿ ಶಿಬಿರ: ಸಾಣೇಹಳ್ಳಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಸಾಣೇಹಳ್ಳಿಯಲ್ಲಿ ಸದ್ಯದಲ್ಲೇ ಯುವಕರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗುವುದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಬುಧವಾರ ಬೆಂಗಳೂರಿನಲ್ಲಿ ಹೇಳಿದರು.

ಬಸವತತ್ವಾನುಯಾಯಿಗಳ ಆತ್ಮಾವಲೋಖನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಅವರು ಇಂದು ಶರಣ ಸಂಸ್ಕೃತಿಯ ಮೇಲೆ ಎಲ್ಲ ಕಡೆಯಿಂದಲೂ ದಾಳಿ ನಡೆಯುತ್ತಿದೆ ಎಂದರು. ಯುವಕರನ್ನು ಸೂಕ್ತವಾದ ರೀತಿಯಲ್ಲಿ ತಯಾರು ಮಾಡಿದರೆ ಯಾವ ಕಾರಣಕ್ಕೂ ಚಿಂತಿಸುವ ಅವಶ್ಯಕತೆಯಿರುವುದಿಲ್ಲ, ಎಂದು ಆಶಯ ವ್ಯಕ್ತಪಡಿಸಿದರು.

ಮಠಾಧೀಶರಿರಲ್ಲಿ ಮೊದಲು ಅರಿವುಂಟು ಮಾಡಬೇಕು, ಅವರು ಜಾಗೃತರಾದರೆ ಸಮಾಜ ಬದಲಾಗುತ್ತದೆ, ಯಾವ ದಾಳಿ ನಡೆದರೂ ಮಾಡುವ ಕೆಲಸ ನಿಲ್ಲಿಸಬಾರದು, ಎಂದರು.

ಜೂಲೈ ತಿಂಗಳಲ್ಲಿ ಸಾಣೇಹಳ್ಳಿಯಲ್ಲಿ ನಡೆದ ವಚನ ಕಮ್ಮಟದ ಬಗ್ಗೆ ಮಾತನಾಡುತ್ತಾ ಅಲ್ಲಿಗೆ ಬಂದ ಮಠಾಧಿಪತಿಗಳಲ್ಲಿ ಮಹತ್ವದ ಪರಿವರ್ತನೆಯಾಯಿತು ಎಂದು ಹೇಳಿದರು. ಅನೇಕರು ತಾವು ಇಲ್ಲಿಯವರೆಗೆ ಮಾಡುತ್ತಿದ್ದ ವೈದಿಕ ಆಚರಣೆಗಳು ತಪ್ಪು ಎಂದು ಯಾರೂ ಹೇಳಿರಲಿಲ್ಲ, ಇನ್ನು ಮುಂದೆ ವೈದಿಕ ಪರಂಪರೆ ಬಿಟ್ಟು ಶರಣ ಪರಂಪರೆಯಲ್ಲಿ ನಡೆದುಕೊಳ್ತೀವಿ ಎಂದು ಹೇಳಿದರು, ಎಂದು ಶ್ರೀಗಳು ತಿಳಿಸಿದರು.

ಸಾಣೇಹಳ್ಳಿ ಮಾದರಿ ವಚನ ಕಮ್ಮಟಗಳು ಈಗ ಬೇರೆ ಮಠಗಳಲ್ಲಿಯೂ ನಡೆಯುತ್ತಿರುವ ಹಾಗೆ, ಸಾಣೇಹಳ್ಳಿ ಯುವ ಶಿಬಿರಗಳೂ ಇತರರಿಗೆ ಮಾದರಿಯಾಗಬಹುದು ಎಂದು ಆಶಯ ವ್ಯಕ್ತಪಡಿಸಿದರು.

ಇದಕ್ಕೂ ಮುಂಚೆ ಮಾತನಾಡಿದ ಸಂಯೋಜಕ ಟಿ ಆರ್ ಚಂದ್ರಶೇಖರ್, ವಚನ ಸಂಸ್ಕೃತಿಯನ್ನು ವಿರೂಪಗೊಳಿಸುತ್ತಿರುವ ಪ್ರಯತ್ನಗಳನ್ನು ಮತ್ತು ಬಸವ ಸಿದ್ದಾಂತವನ್ನು ಸಮಾಜದಲ್ಲಿ ಬಿತ್ತುವ ಕೆಲಸವನ್ನು ಚರ್ಚಿಸಲು ಸಭೆ ಕರೆದಿರುವುದಾಗಿ ತಿಳಿಸಿದರು.

ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯ ಸಾನಿಧ್ಯವನ್ನು ಬೇಲಿ ಮಠದ ಶಿವರುದ್ರ ಶ್ರೀಗಳು ವಹಿಸಿದ್ದರು. ಬಸವ ಸಮಿತಿಯ ಅರವಿಂದ ಜತ್ತಿ, ಮುರುಘಾ ಮಠದ ಬಸವ ಪ್ರಭು ಸಾಮೀಜಿ, ಶರಣ ಸಾಹಿತಿ ಗೊ ರು ಚನ್ನಬಸಪ್ಪ, ಹಲವಾರು ಚಿಂತಕರು ಮತ್ತು ಹೋರಾಟಗಾರರು ಸಭೆಯಲ್ಲಿ ಭಾಗವಹಿಸಿದರು.

ಚರ್ಚೆಯ ನಂತರ ಸಭೆಯಲ್ಲಿ 8 ನಿರ್ಣಯಗಳನ್ನು ಅಂಗೀಕರಿಸಲಾಯಿತು.

“ಬಸವಾದಿ ಶರಣರ ದರ್ಶನದ ವಿಕಾಸ ಮತ್ತು ಅವುಗಳ ಅನುಷ್ಠಾನಕ್ಕೆ ಬರುತ್ತಿರುವ ಗಂಭೀರ ಅಡೆತಡೆಗಳ ಕುರಿತು ಬಸವತತ್ವಾನುಯಾಯಿಗಳ ಅತ್ಮಾವಲೋಕನ ಸಭೆ”

ಸಭೆಯ ನಿರ್ಣಯಗಳು

  1. ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವಲ್ಲ ಎಂದು ಸರ್ವಾನುಮತದಿಂದ ಸಭೆಯು ನಿರ್ಣಯಿಸುತ್ತದೆ.
  2. ಲಿಂಗಾಯತ ಧರ್ಮದ ಮೇಲೆ ನಡೆಯುತ್ತಿರುವ ದಾಳಿ, ಅಕ್ರಮಗಳ ವಿರುದ್ಧ ಸೈದ್ಧಾಂತಿಕವಾಗಿ ಬಸವಾನುಯಾಯಿಗಳು ಗಟ್ಟಿಗೊಳ್ಳಬೇಕೆಂದು ಸಭೆಯು ಕರೆ ನೀಡುತ್ತದೆ.
  3. ಲಿಂಗಾಯತ ಧರ್ಮವು ಹಿಂದೂ ಧರ್ಮದ ಭಾಗವೆಂದು ಹೇಳುತ್ತಿರುವ ಕೆಲವು ಲಿಂಗಾಯತ ಸ್ವಾಮಿಗಳ ನಿಲುವನ್ನು ಸಭೆಯು ಖಂಡಿಸುತ್ತದೆ.
  4. ಲಿಂಗಾಯತ ಧರ್ಮದ ಸಂಘಟನೆಗಳನ್ನು ಗಟ್ಟಿಗೊಳಿಸಲು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಮಾವೇಶಗಳನ್ನು ನಡೆಸಬೇಕೆಂದು ಸಭೆಯು ನಿರ್ಣಯಿಸಿತು.
  5. ಚಾತುರ್ವರ್ಣ ಪ್ರಣೀತ ಕರ್ಮ ಸಿದ್ಧಾಂತ, ಗುಡಿ ಸಂಸ್ಕೃತಿ ಮುಂತಾದ ಕಂದಾಚಾರಗಳಿಂದ
    ಬಸವಾನುಯಾಯಿಗಳು ದೂರವಿರಬೇಕೆಂದು ಸಭೆಯು ನಿರ್ಣಯಿಸುತ್ತದೆ.
  6. ಲಿಂಗಾಯತ ಧರ್ಮದ ಮಠಗಳು ವಿವಿಧ ರೀತಿಯ ಕಂದಾಚಾರಣೆಗಳಲ್ಲಿ/ಆಚರಣೆಗಳಲ್ಲಿ ತೊಡಗಿರುವುದು ವಿಷಾದನೀಯ. ಈ ಬಗೆಯ ಕಂದಾಚಾರಗಳಿಂದ ಮುಖ್ಯವಾಗಿ ನಮ್ಮ ಮಠಗಳು/ ಮಠಾಧೀಶರುಗಳು ಹೊರಬರಬೇಕೆಂದು ಸಭೆಯು ನಿರ್ಣಯಿಸಿತು.
  7. ಲಿಂಗಾಯತ ತತ್ವಕ್ಕೆ ಅನುಸಾರವಾದ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಭೆಯು ನಿರ್ಣಯಿಸಿತು.

Share This Article
1 Comment

Leave a Reply

Your email address will not be published. Required fields are marked *