ಬೆಂಗಳೂರು
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಸದಾಶಿವ ನಗರದ ಅವರ ಮನೆಯಲ್ಲಿ ಬುಧವಾರ ಕೂಡಲಸಂಗಮ ಬಸವಧರ್ಮ ಪೀಠದ ವತಿಯಿಂದ ಭೇಟಿಯಾಗಿ ಮುಂಬರುವ ಶರಣ ಮೇಳಕ್ಕೆ ಆಹ್ವಾನಿಸಲಾಯಿತು.
ಬರುವ ಜನವರಿ 12, 13 ಮತ್ತು 14ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಶರಣ ಮೇಳಕ್ಕೆ ಬರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರೆಂದು ಪೂಜ್ಯ ಪ್ರಭುಲಿಂಗ ಸ್ವಾಮಿಗಳು ಬಸವ ಮೀಡಿಯಾಕ್ಕೆ ತಿಳಿಸಿದರು.

ಬಸವಣ್ಣನವರ ಐಕ್ಯಕ್ಷೇತ್ರ, ಶರಣ ಮೇಳದ ಮಹತ್ವ, ಮೇಳ ನಡೆದುಬಂದ ದಾರಿ, ಲಕ್ಷಾಂತರ ಜನ ಬಸವಭಕ್ತರು ಮೇಳದಲ್ಲಿ ಭಾಗವಹಿಸುವ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಲಾಯಿತು.
ಬಸವಧರ್ಮ ಪೀಠದ ಪೂಜ್ಯ ಮಹಾದೇಶ್ವರ ಸ್ವಾಮೀಜಿ, ಪೂಜ್ಯ ಅಕ್ಕನಾಗಲಾಂಬಿಕೆ ಮಾತಾಜಿ, ಪೂಜ್ಯ ಪ್ರಭುಲಿಂಗ ಸ್ವಾಮೀಜಿ, ಪೂಜ್ಯ ಬಸವಕುಮಾರ ಸ್ವಾಮೀಜಿ ಅವರುಗಳು ಮುಖ್ಯಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಳ್ಳೆಯ ವಿಚಾರ ಜೈ ಬಸವ ಶರಣು