ಶೂದ್ರರನ್ನು ಉದ್ದಾರ ಮಾಡಿದವರು ಬ್ರಾಹ್ಮಣರು, ನಾವು ಕೃತಜ್ಞರಾಗಿರಬೇಕು: ವಚನಾನಂದ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ

ಶೂದ್ರರನ್ನು ಉದ್ದಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯ್ತು, ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶುಕ್ರವಾರ ಹೇಳಿದರು ಎಂದು ವರದಿಯಾಗಿದೆ.

ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದ ಶ್ರೀಗಳು ಹಿಂದೂಗೆ ಬಾರ್ಡರ್ ಇಲ್ಲ ಭಾರತದಲ್ಲಿರುವ ಪ್ರತಿಯೊಬ್ಬರೂ ಹಿಂದೂಗಳೆ. ಮುಸ್ಲಿಂರೂ ಹಿಂದೂಗಳೇ, ಶ್ರೀಲಂಕಾ ಅಫ್ಘಾನಿಸ್ತಾನದ ಎಲ್ಲರೂ ಹಿಂದೂಗಳೇ. ಅಖಂಡ ಭಾರತ ಇದು ಎಂದು ಹೇಳಿದರು.

ನಾಗರಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆಯರೆಯುವ ಪದ್ದತಿ ಬದಲು ಅನಾಥ ಮಕ್ಕಳಿಗೆ ಹಾಲು ಕೊಡಿ ಎಂಬ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ವಚನಾನಂದ ಸ್ವಾಮಿಜಿ ವಿರೋದಿಸಿದರೆಂದು ಸುವರ್ಣ ನ್ಯೂಸ್ ವರದಿ ಮಾಡಿದೆ.

“ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಹಾಲು ಕೊಡಿ ಅಂತಾರೆ. ನೀವು ಮಾಡಿಕೊಂಡು ಹೋಗಿ ಬೇಡ ಅಂದವರು ಯಾರು. ಹಾಲು ಕೊಡೋ ತಾಯಿ ಹತ್ಯೆ ಮಾಡ್ತಾ ಇದಾರೆ. ಎಷ್ಟು ಜನ ಸ್ವಾಮಿಗಳು ಗೋ ಹತ್ಯೆ ವಿರೋಧಿಸಿರಿ?” ಎಂದು ಪ್ರಶ್ನಿಸಿದರು.

Share This Article
Leave a comment

Leave a Reply

Your email address will not be published. Required fields are marked *