ಸವದತ್ತಿ:
ಶ್ರಾವಣ ಮಾಸದ ಪ್ರಯುಕ್ತ ಪ್ರತಿದಿನ ಪಟ್ಟಣದ ಬಸವಭಕ್ತರ ಮನೆಗಳಲ್ಲಿ ಶರಣ ಸಂಗಮ ಮತ್ತು ರಾಷ್ಟ್ರೀಯ ಬಸವದಳ, ಕದಳಿ ವೇದಿಕೆಯ ಶರಣೆಯರಿಂದ ಮನ ಮನೆಗಳಿಗೆ ಬಸವ ತತ್ವ ಶರಣರ ಸಂದೇಶಗಳನ್ನು ಮುಟ್ಟಿಸುವ ಕಾರ್ಯಕ್ರಮ ನಡೆಯಿತು.
ತಿಂಗಳಿನಿಂದ ನಿರಂತರವಾಗಿ ಬಸವ ಜ್ಯೋತಿ ಕಾರ್ಯಕ್ರಮ ಮಾಡಿ ಈಚೆಗೆ ಪಟ್ಟಣದ ಬೆಡಸೂರು ಮಠದಲ್ಲಿ ಕಾರ್ಯಕ್ರಮ ಮಂಗಲ ಮಾಡಲಾಯಿತು.

ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿ ತಾಯಿಯವರ ದಿವ್ಯ ಸಂಕಲ್ಪ ಹಾಗೂ ಪ್ರೇರಣೆಯಿಂದ ಬಸವ ತತ್ವ ಮುನ್ನೆಲೆಗೆ ಬಂದದ್ದು, ಶರಣ ಸಂಗಮದ ಅಧ್ಯಕ್ಷರಾದ ಬಸವರಾಜ ಕಪ್ಪನ್ನವರ ತಮ್ಮ ತನು ಮನ ದನಗಳಿಂದ ಗುರು ಲಿಂಗ ಜಂಗಮ ಸೇವೆ ಮಾಡುತ್ತಾ ಬಸವಪ್ರಜ್ಞೆಯನ್ನು ಜನರಲ್ಲಿ ಮೂಡಿಸುವುದರಲ್ಲಿ ಬದ್ಧರಾಗಿ ಶ್ರಮಿಸಿದರು.
ಕಾರ್ಯಕ್ರಮಕ್ಕೆ ಹಾರೂಗೇರಿಯಿಂದ ಆಗಮಿಸಿದ ಸಾಧಕರು, ಸಾಹಿತಿಗಳು ತತ್ವನಿಷ್ಠರು ಆದ ಶರಣ ಐ.ಆರ್. ಮಠಪತಿ ಆಗಮಿಸಿ ಅನುಭಾವ ನೀಡಿದರು.

ನಾಗಪ್ಪ ಬಸಪ್ಪ ಬೆಂಡಿಗೇರಿ ತಿಂಗಳು ಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವೆಯನ್ನು ಮಾಡಿದರು ಎಂದು ಕದಳಿ ಅಧ್ಯಕ್ಷರಾದ ಕಸ್ತೂರಿ ಹೂಲಿ ಅವರು ತಿಳಿಸಿದರು.
ಸುಮಾರು 50 ಮಕ್ಕಳು ಪ್ರತಿದಿನ ಭಾಗವಹಿಸಿ ವಚನ ಗಾಯನ, ವಚನ ಕಂಠಪಾಠ ಮಾಡಿ ವಚನ ಸಾಹಿತ್ಯ ಪುಸ್ತಕಗಳನ್ನು ಬಹುಮಾನವಾಗಿ ಪಡೆದರು. ಮಕ್ಕಳನ್ನು ಪ್ರೋತ್ಸಾಹಗೊಳಿಸುತ್ತಾ ಅವರಲ್ಲಿ ಆಸಕ್ತಿ ಮೂಡಿಸುವಲ್ಲಿ ಶರಣ ಶರಣೆಯರು ಶ್ರಮಿಸಿದರು.

ಲಕ್ಷ್ಮೀ ಮಹಾದೇವ ಅರಿಬೆಂಚಿ, ಕಸ್ತೂರವ ಹೂಲಿ, ರತ್ನಕ್ಕ ಕಾದ್ರೊಳ್ಳಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕೊಪ್ಪಳದಿಂದ ಶರಣ ಜ್ಞಾನಿಗಳಾದ ವೀರಣ್ಣ ಕೊರಲಹಳ್ಳಿ ಅತಿಥಿಯಾಗಿ ಆಗಮಿಸಿ ಲಿಂಗಾಯತಕ್ಕೆ ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ತಾಯಿಯವರ ಕೊಡುಗೆ ಮತ್ತು ವಿಜಯನಗರ ವೈಭವದಲ್ಲಿ ಪ್ರೌಢ ದೇವರಾಯನ ಇತಿಹಾಸದಲ್ಲಿ ಲಿಂಗಾಯತ ಧರ್ಮ ವಿಜ್ರಂಬಿಸಿದ ರೀತಿಯನ್ನು ತಿಳಿಸಿದರು.
ಇಷ್ಟಲಿಂಗದ ಮಹತ್ವ ತಿಳಿಸಿ ಪ್ರತಿಯೊಬ್ಬ ಲಿಂಗಾಯತರು ಇಷ್ಟಲಿಂಗ ದೀಕ್ಷೆಯನ್ನು ಪಡೆಯಲೇಬೇಕು. ಜಾತಿ ವರ್ಣ ವರ್ಗ ಮೀರಿದ ಈ ಧರ್ಮಕ್ಕೆ ಎಲ್ಲರೂ ಬರಬೇಕು ಎಂದು ಈರಣ್ಣ ಮನವಿ ಮಾಡಿದರು.

ಬಸವರಾಜ ಕಪ್ಪನ್ನವರ, ನಾಗಪ್ಪ ಬೆಂಡಿಗೇರಿ, ಬಸವರಾಜ ಪುಟ್ಟಿ, ರಾಜಶೇಖರ ನೀಡುಮನಿ, ನಾಗಪ್ಪ ಪ್ರಭುನವರ, ಹನುಮಂತ ಮೇಟಿ, ಮಾರುತಿ ಮೇಟಿ, ಜಿ ಎಸ್ ತೋಟಗಿ, ಎಲ್ಲಪ್ಪ ಮಡಿವಾಳರ, ಮಡಿವಾಳಪ್ಪ ಪೇಂಟೆದ, ಮಹದೇವ ಕುಂಬಾರ, ಸಿದ್ದಲಿಂಗಪ್ಪ ಬೆಳವಡಿ, ಚನ್ನನಗೌಡ ದೊಡ್ಡಗೌಡರ, ಲಕ್ಷ್ಮಿ ಮಹಾದೇವ ಅರೆಬೆಂಚಿ, ಕಸ್ತೂರವ ಹೂಲಿ ಇನ್ನೂ ಅನೇಕ ಶರಣರು ಗುರು ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗೊಳಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6
