ನೀಲಗಿರಿ (ತಮಿಳುನಾಡು) :
ಜಿಲ್ಲೆಯ ಊಟಿನಗರ ದ ಸಕಲಟ್ಟಿ ಗ್ರಾಮದಲ್ಲಿರುವ, ವಿಶ್ವಶಾಂತಿ ಭವನ (ಗುರುಬಸವ ಮಂಟಪ)ದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಮಹೋತ್ಸವದ ನಿಮಿತ್ತ, ಈಚೆಗೆ ಶರಣ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಬಸವಧರ್ಮ ಪೀಠ, ರಾಷ್ಟ್ರೀಯ ಬಸವದಳ ಸಕಲಟ್ಟಿ ಹಾಗೂ ರಾಷ್ಟ್ರೀಯ ಬಸವದಳ ಬಳ್ಳಾರಿ ಜಿಲ್ಲಾ ಘಟಕದ ನೇತೃತ್ವದಲ್ಲಿ, ಬಸವ ಧ್ವಜಾರೋಹಣ, ಧರ್ಮಗುರು ಬಸವಣ್ಣನವರ ಪೂಜೆ, ಪ್ರಾರ್ಥನೆ, ಧ್ಯಾನ, ವಚನ ಗಾಯನ ನಡೆಯಿತು.

ಊಟಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಮಹೇಶ್ವರನ್ ಅವರು ಸಂಘಟನೆ ನಡೆದು ಬಂದ ದಾರಿಯನ್ನು ಹೇಳುತ್ತಾ, ಪೂಜ್ಯ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿ ಅವರ ಸಂಕಲ್ಪ ಶಕ್ತಿಯನ್ನು ಹೇಳಿದರು.
ಉಮಾಶಂಕರ, ಲಿಂಗರಾಜ, ಪ್ರಶಾಂತಿ, ದೇವನ್, ರಾಮದಾಸಂ, ಸುಂದರರಾಜನ್, ಪಶುಪತಿನಾಥನ್ ಹಾಗೂ ಇತರರ ನೇತೃತ್ವದಲ್ಲಿ ವಿಶೇಷ ವಚನ ಭಜನೆ ಮಾಡಲಾಯಿತು.
ರಾಷ್ಟ್ರೀಯ ಬಸವದಳ ಬಳ್ಳಾರಿ ಜಿಲ್ಲಾ ಘಟಕದ ರವಿಶಂಕರ ಅವರು, 1993ರಲ್ಲಿ ಪೂಜ್ಯ ಮಾತಾಜಿ ಮತ್ತು ಅಪ್ಪಾಜಿ ಅವರ ನೇತೃತ್ವದಲ್ಲಿ ನಡೆದ ಬಸವಧರ್ಮ ಸಮಾವೇಶದ ಬಗ್ಗೆ ವಿವರಣೆ ನೀಡಿದರು.

ಸಕಲಟ್ಟಿ ರಾಷ್ಟ್ರೀಯ ಬಸವ ದಳದ ಎಲ್ಲಾ ಸದಸ್ಯರಿಗೂ ಬಸವ ಧರ್ಮ ಪೀಠ ಹಾಗೂ ರಾಷ್ಟ್ರೀಯ ಬಸವ ದಳದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು. ನೂರಾರು ಕಾರ್ಯಕರ್ತರೊಡನೆ ಪಥಸಂಚಲನ ಸಹ ನಡೆಸಲಾಯಿತು. ಮಹಾಮಂಗಳದ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
