ಧಾರವಾಡ
ಹಲವಾರು ಬಸವ ತತ್ವ ಪರ ಸಂಘಟನೆಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರನ್ನು ಮಂಗಳವಾರ ಭೇಟಿ ಮಾಡಿ ವಚನ ದರ್ಶನ ಕಾರ್ಯಕ್ರಮಕ್ಕೆ ಅನುಮತಿ ಕೊಡದಿರಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಅಯೋಧ್ಯಾ ಪ್ರಕಾಶನ ವತಿಯಿಂದ ಪ್ರಕಟವಾಗಿರುವ ವಚನ ದರ್ಶನ ಪುಸ್ತಕದಲ್ಲಿ ಬಸವ ತತ್ವ ಸಿದ್ಧಾಂತಗಳನ್ನು, ಲಿಂಗಾಯತ ಧರ್ಮೀಯರ ಆಚರಣೆಗಳನ್ನು ತಿರುಚಲಾಗಿದೆ ಎಂದು ಸಂಘಟನೆಗಳ ಕಾರ್ಯಕರ್ತರು ಹೇಳಿದರು.
ದೋಷಪೂರ್ಣ ಪುಸ್ತಕವನ್ನು ವಿವಿಧ ಜಿಲ್ಲೆಗಳಲ್ಲಿ ಮರು ಬಿಡುಗಡೆ ಮಾಡುತ್ತಾ ಲಿಂಗಾಯತರ ಧಾರ್ಮಿಕ ಭಾವನೆಗೆ ದಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಇದೇ ಕಾರ್ಯಕ್ರಮವನ್ನು ಆಗಸ್ಟ್ ೭ ಸಂಜೆ 6:00 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಂಡಿರುವದಾಗಿ ತಿಳಿಸಿ, ಅದಕ್ಕೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗಳಲ್ಲಿ ವಿನಂತಿಕೊಂಡರು.
ಲಿಂಗಾಯತ ಧರ್ಮೀಯರ ಆಚರಣೆ, ಬಸವ ತತ್ವವನ್ನು ವಿರೂಪಗೊಳಿಸುವ ಯಾವುದೇ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಲ್ಲಿ ಅನುಮತಿ ನೀಡಬಾರದೆಂದು ಆಗ್ರಹಿಸಲಾಯಿತು.

ಜಾಗತಿಕ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಯುವ ಘಟಕ ಹಾಗೂ ಇತರ ಬಸವಪರ ಸಂಘಟನೆಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು. ಬಸವ ಸಂಘಟನೆಗಳ ಪರವಾಗಿ ಸಿ.ಜಿ.ಪಾಟೀಲ, ಶರಣಪ್ಪ, ಪಕೀರಪ್ಪ, ಶಿವರುದ್ರಗೌಡ,ನೀಲಪ್ಪ, ವಿರಪ್ಪ, ಸಚಿನ್, ಶಂಕರಲಿಂಗ, ವೀರನಗೌಡ, ಗುರುರಾಜ್, ಸುನಿಲ್, ಮದನ್, ಶಿವಾನಂದ್, ಮನೋಹರ್ ಧನಿಗೊಂಡ, ಗುರುಲಿಂಗಪ್ಪ, ಬಸವರಾಜ್, ಮಂಜುನಾಥ್, ಸತೀಶ್,ಅರುಣ್, ಹನುಮಂತ್ ಶಿವಣ್ಣ,ಅರಣಿ, ಮುಂತಾದವರು ಹಾಜರಿದ್ದರು.